
ಮೈಸೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಮೈಸೂರು ಓಡಾಟ ಆರಂಭ.

ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಚೆನ್ನೈ-ಮೈಸೂರು ನಡುವೆ ಪ್ರಾಯೋಗಿಕ ಓಡಾಟ ಆರಂಭಿಸಿದ್ದು, ಸೋಮವಾರ ನಡೆದ ಟ್ರಯಲ್ ರನ್ ಸಕ್ಸಸ್ ಆಗಿದೆ.
ಚೆನ್ನೈ ನಿಂದ ಹೊರಟಿದ್ದ ವಂದೇ ಭಾರತ್ ಟ್ರೈನ್ ಯಶಸ್ವಿಯಾಗಿ ಮೈಸೂರು ತಲುಪಿದೆ.ದಕ್ಷಿಣ ಭಾರತದ ಮೊದಲ ಮತ್ತು ದೇಶದ ಐದನೇ ವಂದೇ ಭಾರತ್ ಟ್ರೈನ್ ಇದಾಗಿದೆ. ನವೆಂಬರ್ 11 ರಿಂದ ಸಾರ್ವಜನಿಕ ಸೇವೆಗೆ ಟ್ರೈನ್ ಲಭ್ಯ ಇರಲಿದೆ.
ಸೋಮವಾರ ಚೆನ್ನೈನ ಎಂಜಿ ರಾಮಚಂದ್ರನ್ ಕೇಂದ್ರ ರೈಲ್ವೆ ನಿಲ್ದಾಣದಿಂದ ಬೆಳಗ್ಗೆ 5.50ಕ್ಕೆ ರೈಲು ನಿರ್ಗಮಿಸಿತ್ತು ಮಧ್ಯಾಹ್ನ 12.30ರ ಸುಮಾರಿಗೆ ಮೈಸೂರು ತಲುಪಿದೆ.
ಈ ಹೈಸ್ಪೀಡ್ ರೈಲು ಚೆನ್ನೈ ಮೈಸೂರು ಮಧ್ಯೆ 6ಗಂಟೆ 40 ನಿಮಿಷದಲ್ಲಿ 504 ಕಿಮೀ ಸಂಚರಿಸಲಿದೆ. ಮಧ್ಯದಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮಾತ್ರ ಒಂದು ಸ್ಟಾಪ್ ಕೊಟ್ಟಿದ್ದು, ನಿಗದಿತ ವೇಳೆಗೆ ಎಕ್ಸ್ ಪ್ರೆಸ್ ಮೈಸೂರು ತಲುಪಿದೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.