ಚಾಮರಾಜನಗರ: ಶಾಸಕ ಎನ್. ಮಹೇಶ್ ಭಾವಚಿತ್ರ ಇರುವ ಪೋಸ್ಟರ್’ಗೆ ಸೆಗಣಿ ಬಳಿದ ವೀಡಿಯೋ ವೈರಲ್.
ಕೊಳ್ಳೆಗಾಲ ಕ್ಷೇತ್ರದ ಶಾಸಕ ಎನ್. ಮಹೇಶ್ ಭಾವಚಿತ್ರ ಇರುವ ಪೋಸ್ಟರ್’ಗೆ ಸೆಗಣಿ ಬಳಿದು ಚಪ್ಪಲಿಯಿಂದ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಶಾಸಕ ಎನ್.ಮಹೇಶ್ ಅವರು, ಈ ಕೃತ್ಯ ಎಸಗಿದವರನ್ನು ತಲೆ ಕೆಟ್ಟವರು, ಈ ರೀತಿ ಮಾಡಿದವರ ವಿರುದ್ಧ ದೂರು ನೀಡುವುದಿಲ್ಲ ಎಂದು ಹೇಳಿದ್ದಾರೆ. ಕೊಳ್ಳೆಗಾಲ ಪಟ್ಟಣದ ಪ್ರವಾಸಿ ಮಂದಿರದ ಬಳಿ ಹಾಕಿದ್ದ ಮತ್ತೊಮ್ಮೆ ಬಿಜೆಪಿ ಎಂಬ ಪೋಸ್ಟರ್’ಗೆ ಸೆಗಣಿ ಬಳಿಯಲಾಗಿದೆ. ಇನ್ನೊಂದೆಡೆ ಎನ್. ಮಹೇಶ್ ಭಾವಚಿತ್ರದ ಮೇಲೆ 40% ಎಂದು ಬರೆದಿರುವುದು ಕಂಡುಬಂದಿದೆ. ಶಾಸಕ ಎನ್.ಮಹೇಶ್ 40% ತೆಗೆದುಕೊಳ್ಳುತ್ತಿದ್ದಾರೆ ಎಂದು ದೂರು ನೀಡಲಿ. ಆದರೆ ಬೀದಿಬದಿಯಲ್ಲಿ ಈ ರೀತಿ ಬರೆದು ನನ್ನನ್ನು ಹೆದರಿಸುವುದು ಸಾಧ್ಯವಿಲ್ಲ. ಅದನ್ನು ಬರೆದಿರುವವರು ವಿಕೃತ ಮನಸ್ಸಿನವರು. ಹದ್ದು ಮೀರಿದರೆ ಕಾನೂನು ಪ್ರಕಾರ ಕೆಲಸ ಮಾಡಬೇಕಾಗುತ್ತದೆ ಎಂದಿರುವ ಮಹೇಶ್, ಈ ಪ್ರಕರಣದಿಂದ ನನ್ನ ವರ್ಚಸ್ಸಿಗೆ ಯಾವುದೇ ಹಾನಿಯಾಗಲ್ಲ ಎಂದಿದ್ದಾರೆ.