ಶಾಸಕ ಗೋಪಾಲಕೃಷ್ಣ ಬೇಳೂರ್ ಗೆ ಸನ್ಮಾನ.
ಸಾಗರ : ಪ್ರೆಸ್ ಟ್ರಸ್ಟ್ ಆಫ್ ಸಾಗರ ಮತ್ತು ಸಾಗರ ಕಾರ್ಯನಿರತ ಪತ್ರಕರ್ತರ ಸಂಘ ಸಾಗರ. ಇಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಇವರನ್ನು ಸಾಗರದ ಅಣಲೇಕೊಪ್ಪದ ಪತ್ರಿಕಾ ಭವನ ದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಗೋಪಾಲಕೃಷ್ಣ ಬೇಳೂರು ಪತ್ರಕರ್ತರು ಕೂಡ ನನ್ನ ಗೆಲುವಿಗೆ ಸಹಕರಿಸಿದ್ದಾರೆ. ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ನಿಮ್ಮ ನಿಷ್ಠುರವಾದ ಬರವಣಿಗೆಗೆ ನನ್ನ ಸಹಮತ ಯಾವತ್ತು ಇರುತ್ತದೆ ಹರಿತವಾದ ಲೇಖನಿಯಿಂದ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಬರೆದಾಗ ಮಾತ್ರ ನಮ್ಮಂತ ಜನಪ್ರತಿನಿಧಿಗಳನ್ನು ಎಚ್ಚರಿಸುವಂತಾಗುತ್ತದೆ. ಈ ಮೂಲಕ ಸಾರ್ವಜನಿಕ ಸೇವೆಯನ್ನು ಮಾಡುವ ನಮಗೆ ದಾರಿ ತೋರಿದಂತಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೆಸ್ ಟ್ರಸ್ಟ್ ಆಫ್ ಸಾಗರ ದ ಅಧ್ಯಕ್ಷ ಹೆಚ್.ವಿ ರಾಮಚಂದ್ರರಾವ್ , ಹಿರಿಯ ಪತ್ರಕರ್ತ ಎ .ಡಿ ಸುಬ್ರಹ್ಮಣ್ಯ ಲಕ್ಷ್ಮೀನಾರಾಯಣ ,ಪ್ರೆಸ್ ಟ್ರಸ್ಟ್ ನ ಕಾರ್ಯದರ್ಶಿ ಹಿತಕರ ಜೈನ್ , ಆರ್ ಗಿರಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ರಾಜೇಶ್ ಭಡ್ತಿ,ಕಾರ್ಯದರ್ಶಿ ಗಣಪತಿ ಶಿರಳಗಿ ಸಾಗರ ಪತ್ರಿಕಾ ವಿತರಕ ಸಂಘದ ಅಧ್ಯಕ್ಷ ರಮೇಶ್,ಸುರೇಶ್ ಬಾಬು ಪತ್ರಕರ್ತರುಗಳಾದ ಧರ್ಮರಾಜ್,ಶ್ರೀಧರ ಭಾಗವತ್, ಶೈಲೇಂದ್ರ ,ಪ್ರಶಾಂತ, ವಿಜೇಂದ್ರ, ಅಂತೋನಿ ನಜರತ್, ಪಂಚಮಿ ಮುಂತಾದವರಿದ್ದರು
ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.