ಭಾರತೀಯ ಸೇನಾಪಡೆಯ ಮಿಗ್ 29ಕೆ ಯುದ್ಧ ವಿಮಾನ ಗೋವಾ ಕರಾವಳಿಯಲ್ಲಿ ಪತನ.
ಭಾರತೀಯ ಸೇನಾಪಡೆಯ ಮಿಗ್ 29ಕೆ ಯುದ್ಧ ವಿಮಾನವು ಗೋವಾ ಕರಾವಳಿಯಲ್ಲಿ ಪತನವಾಗಿದ್ದು, ಪೈಲೆಟ್ ಗಳನ್ನು ರಕ್ಷಿಸಲಾಗಿದೆ.
ವಾಡಿಕೆಯ ಕಾಯ೯ಚರಣೆಯಂತೆ ಗೋವಾ ಕರಾವಳಿ ಭಾಗದಲ್ಲಿ ಸುತ್ತಡುತ್ತಿದ್ದ, ವಿಮಾನವು ಸಮುದ್ರದ ಮೇಲೆ ಪತನಗೊಂಡಿದೆ. ವಿಮಾನ ಬೇಸ್ ಗೆ ಮರಳುತ್ತಿದ್ದಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ತಕ್ಷಣವೇ ಪೈಲೆಟ್ ಸುರಕ್ಷಿತವಾಗಿ ಹೊರಬಿದ್ದಿದ್ದಾರೆ. ಮತ್ತು ತ್ವರಿತ ಶೋಧ ಮತ್ತು ರಕ್ಷಣಾ ಕಾಯ೯ಚರಣೆಯ ಮೂಲಕ ಪೈಲೆಟ್ ಗಳನ್ನು ರಕ್ಷಿಸಲಾಗಿದೆ. ಪೈಲೆಟ್ ಸ್ಥಿತಿ ಸ್ಥಿರವಾಗಿದೆ ಎಂದು ಭಾರತೀಯ ನೌಕಪಡೆ ತಿಳಿಸಿದೆ.
ವರದಿ: ಸಿಂಚನಾ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.