
ಬಿಹಾರ: ಹುತಾತ್ಮ ಯೋಧನ ಸ್ಮಾರಕವನ್ನು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಿದ್ದಕ್ಕಾಗಿ, ಯೋಧನ ತಂದೆಯನ್ನು ಥಳಿಸಿ ಬಂಧಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.
ಲಡಾಖ್ ನಲ್ಲಿ ಚೀನಾದ ಪಿ ಎಲ್ ಎ ಪಡೆಗಳೊಂದಿಗೆ 2020ರ ಗಾಲ್ವಾನ್ ವ್ಯಾಲಿ ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡ ಮೃತ ಸೇನಾ ಜವಾನ್ ಜೈ ಕಿಶೋರ್ ಸಿಂಗ್ ಅವರ ಕುಟುಂಬ ಸದಸ್ಯರು, ಬಿಹಾರದ ವೈಶಾಲಿಯಲ್ಲಿರುವ ಜಂದಾಹಾದಲ್ಲಿ ಸರ್ಕಾರಿ ಭೂಮಿಯಲ್ಲಿ ತನ್ನ ಮಗನಿಗೆ ಸ್ಮಾರಕವನ್ನು ನಿರ್ಮಿಸಿದಕ್ಕಾಗಿ ಸಿಂಗ್ ಅವರ ತಂದೆಯನ್ನು ಥಳಿಸಿ ನಂತರ ಪೊಲೀಸರು ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಈ ಘಟನೆಗೆ ಸಂಬಂಧಿಸಿದಂತೆ, ಭೂಮಾಲೀಕರ ಹಕ್ಕುಗಳ ಉಲ್ಲಂಘನೆಯಾಗಿದ್ದು, ಅಕ್ರಮ ಒತ್ತುವರಿ ವಿಚಾರಕ್ಕಾಗಿ ಬಂಧಿಸಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ.
