
ವಾಷಿಂಗ್ಟನ್: 45 ದಿನಗಳಲ್ಲಿ ಮಂಗಳನ ಅಂಗಳದಲ್ಲಿ ಮಾನವ.
ಉದ್ಯಮಿ ಎಲಾನ್ ಮಸ್ಕ್ ಮಾಲಿಕತ್ವದ ಸ್ಪೇಸ್ ಎಕ್ಸ್ ಚಂದ್ರ ಮತ್ತು ಮಂಗಳ ಗ್ರಹಕ್ಕೆ ಕಾರ್ಗೋ ಮತ್ತು ಮಾನವರನ್ನು ಕರೆದೊಯ್ಯುವ ಅಂತರಿಕ್ಷ ನೌಕೆಯನ್ನು ಸಿದ್ಧಪಡಿಸುವ ಕಾರ್ಯದಲ್ಲಿ ನಿರತವಾಗಿದ್ದು ಖಾಸಗಿ ಬಾಹ್ಯಾಕಾಶ ಕೇಂದ್ರವಾಗಿರುವ ಸ್ಪೇಸ್ ಎಕ್ಸ್ ಆರಂಭಿಕವಾಗಿ ಈ ವರ್ಷದಲ್ಲಿ ಚಂದ್ರನಲ್ಲಿಗೆ ಉಪಗ್ರಹ ಕಳುಹಿಸುವ ಯೋಜನೆ ಪ್ರಗತಿಯಲ್ಲಿದೆ.
ಈ ಯೋಜನೆ ಪ್ರಗತಿಯಲ್ಲಿದ್ದರೂ ಅಂದುಕೊಂಡಂತೆ ಎಲ್ಲಾ ನಡೆದರೂ ಮಂಗಳಗ್ರಹಕ್ಕೆ ಮಾನವರು ತಲುಪಲು ದೀರ್ಘ ಸಮಯ ಬೇಕಾಗಿದ್ದು, ಪ್ರಸ್ತುತ ಬಾಹ್ಯಾಕಾಶ ನೌಕೆಯು ಗಂಟೆಗೆ 39,600 ಕಿಲೋ ಮೀಟರ್ ವೇಗದಲ್ಲಿ ಸಂಚರಿಸುತ್ತದೆ. ಇದರಿಂದ ಮಂಗಳನ ಅಂಗಳಕ್ಕೆ ತಲುಪಲು ಸುಮಾರು ಏಳು ತಿಂಗಳ ಕಾಲಾವಕಾಶ ಬೇಕಾಗುತ್ತದೆ.
ಆದರೆ ವಿಜ್ಞಾನಿಗಳು ಆವಿಷ್ಕರಿಸುತ್ತಿರುವ ಪ್ರಸ್ತಾಪಿತ ನ್ಯೂಕ್ಲಿಯರ್ ಥರ್ಮಲ್ ಮತ್ತು ನ್ಯೂಕ್ಲಿಯರ್ ಎಲೆಕ್ಟ್ರಿಕ್ ಪ್ರೊಪಲ್ಶನ್ ಮೂಲಕ ಮಂಗಳಗ್ರಹಕ್ಕೆ 45 ದಿನಗಳಲ್ಲಿ ತಲುಪಲು ಸಾಧ್ಯ ಎನ್ನಲಾಗುತ್ತಿದೆ.
ಬಾಹ್ಯಾಕಾಶ ನೌಕೆಯ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾಸಾದ ಇನ್ನೋವೇಟಿವ್ ಅಡ್ವಾನ್ಸ್ ಕಾನ್ಸೆಪ್ಟ್ ಅಡಿ ವಿಜ್ಞಾನಿಗಳು ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿದ್ದಾರೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.