ಮಣ್ಣಿಗೆ ಮರುಜೀವ ಮಣ್ಣು ಉಳಿಸಿ”ವಿಶೇಷ ಅಭಿಯಾನಕ್ಕೆ ಚಾಲನೆ
ಮೈಸೂರು: ಸಾವಿಲ್ಲದ ಕೃಷಿ ಎಂದರೇ ಸಾವಯವ ಕೃಷಿ.ಅದರಲ್ಲೂ ಹೆತ್ತ ತಾಯಿಯಷ್ಟೇ ಪ್ರಾಮುಖ್ಯತೆಯನ್ನು ಹೊತ್ತ ತಾಯಿಗೂ ಪ್ರತಿಯೊಬ್ಬರು ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಭೂಮಿಪುತ್ರ ಸಿ.ಚಂದನ್ ಗೌಡ ಮನವಿ ಮಾಡಿದರು.
ವನಸಿರಿ ನಾಡೆಂದೇ ಪ್ರಖ್ಯಾತಿ ಹೊಂದಿರುವ ಎಚ್. ಡಿ. ಕೋಟೆ ತಾಲ್ಲೂಕಿನ ಹೆಬ್ಬಲುಗುಪ್ಪೆ ಗ್ರಾಮದಲ್ಲಿ “ಮಣ್ಣಿಗೆ ಮರುಜೀವ ” ಮಣ್ಣು ಉಳಿಸಿ ಎಂಬ ವಿಶೇಷ ವಿನೂತನ, ವಿಭಿನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಣ್ಣು ಉಳಿಯಲಿ, ರೈತ ಬೆಳೆಯಲಿ ಎಂಬ ಘೋಷ ವಾಕ್ಯದೊಂದಿಗೆ ರೈತ ಕಲ್ಯಾಣ ವಿಶೇಷ ಅಭಿಯಾನ ಪ್ರಾರಂಭಿಸಿದೆ. ಈ ಭೂಮಿಯಲ್ಲಿ ಶೇ.98ರಷ್ಟು ಜನರಿಗೆ ಇನ್ನೂ ಕೂಡ ಮಣ್ಣಿನ ಮಹತ್ವ ಅರಿವಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಮಣ್ಣಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕಿದೆ ಎಂದರು. ನಿಮ್ಮ ಬಳಿ ಎಷ್ಟು ಎಕರೆ ಜಮೀನು ಇದೆ ಎನ್ನುವುದು ಮುಖ್ಯ ಅಲ್ಲ. ಆ ಜಮೀನಿನ ಮಣ್ಣು ಎಷ್ಟು ಫಲವತ್ತತೆಯಿಂದ ಕೂಡಿದೆ ಎಂಬುದರ ಮೇಲೆ ನಿಮ್ಮ ಬದುಕು ಸಾಗಲಿದೆ ಎಂಬುದನ್ನ ತಿಳಿಸಿಕೊಟ್ಟರಲ್ಲದೇ,ಮುಂದಿನ ದಿನಗಳಲ್ಲಿ ಮಣ್ಣಿನ ಫಲವತ್ತತೆಯನ್ನು ಕಳೆದುಕೊಂಡರೆ, ತಿನ್ನಲು ಅನ್ನವೂ ಕೂಡ ಸಿಗದಿರುವ ಪರಿಸ್ಥಿತಿ ಉಂಟಾಗಲಿದೆ ಎಂಬ ಸತ್ಯವನ್ನ ಅನ್ನದಾತರಿಗೆ ಮನವರಿಕೆ ಮಾಡಿಕೊಟ್ಟರು.
ಹೆತ್ತ ತಾಯಿಗೆ ವಿಷ ಹಾಕುವುದು ಒಂದೇ, ಹೊತ್ತ ತಾಯಿ ಭೂಮಿಗೂ ವಿಷ ಹಾಕೋದು ಒಂದೇ. ಹಾಗಾಗಿ ಮುಂದಿನ ದಿನಗಳಲ್ಲಿ ನಿಮ್ಮ ಮಣ್ಣಿಗೆ ವಿಷ ಹಾಕುವುದನ್ನು ಬಿಟ್ಟು ಸಾಂಪ್ರದಾಯಿಕ ಕೃಷಿಯಲ್ಲಿ ತೊಡಗಿ, ಪ್ರಗತಿಯತ್ತ ಸಾಗುವಂತೆ ಕೋರಿದ ಅವರು, ಮಣ್ಣಿನ ಫಲ, ರೈತನ ಬಲ ಮಣ್ಣು ಉಳಿಯಲಿ ರೈತ ಬೆಳೆಯಲಿ ಎಂಬ ಧ್ಯೇಯದೊಂದಿಗೆ ಮುಂದಿನ ದಿನಗಳಲ್ಲಿ ಮಣ್ಣಿನ ಫಲವತ್ತತೆಯನ್ನ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬ ರೈತ ಬಾಂಧವರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಸಾವಯವ ಕೃಷಿಗೆ ಒತ್ತು ನೀಡಿ:
ಸಾಂಪ್ರದಾಯಿಕ ಕೃಷಿ ಕಡೆಗೆ ಹೆಚ್ಚಿನ ಒತ್ತು ಕೊಟ್ಟು, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಉತ್ತಮ ಗುಣಮಟ್ಟದ ಇಳುವರಿಯನ್ನ ಪಡೆಯಲು ಬೇಕಾದ ಎಲ್ಲಾ ಸಲಹೆ ಮತ್ತು ಮಾರ್ಗದರ್ಶನ ರೈತ ಕಲ್ಯಾಣ ಸಂಘದ ವತಿಯಿಂದ ರೈತ ಬಾಂಧವರಿಗೆ ನೀಡುವುದಾಗಿಯೂ ಭರವಸೆ ನೀಡಿದ ಚಂದನ್ ಗೌಡ, ಸಾವಯವ ಕೃಷಿ ಸಾವಿಲ್ಲದ ಕೃಷಿ. ಸಾಂಪ್ರದಾಯಿಕ ಕೃಷಿಯಿಂದ ಸೋಲುತ್ತಿರುವ ರೈತ ಕೂಡ ಗೆಲುವಂತಾಗಲಿ. ರೈತರ ಬದುಕು ಬಂಗಾರವಾಗಲಿ. ದೇಶಕ್ಕೆ ರೈತ ಬೆನ್ನೆಲುಬಾದರೆ ಅನ್ನದಾತರಿಗೆ ರೈತ ಕಲ್ಯಾಣ ಬೆನ್ನೆಲುಬಾಗಿ ನಿಂತು ರೈತರನ್ನು ಸಮಾಜದಲ್ಲಿ ಮುಂಚೂಣಿ ಸ್ಥಾನಕ್ಕೆ ತರುವ ನೈತಿಕ ಹೊಣೆಗಾರಿಕೆಯೊಂದಿಗೆ ಕಾರ್ಯ ನಿರ್ವಹಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಮೂರ್ತಿ, ಪತ್ರಿಕಾ ಕಾರ್ಯದರ್ಶಿ ಹರೀಶ್ ಗೌಡ, ಸಹ ಕಾರ್ಯದರ್ಶಿ ಕಂದ ಸ್ವಾಮಿ, ರಾಜ್ಯ ಸಂಚಾಲಕ ಸಂಜಯ್, ಎಚ್ .ಡಿ .ಕೋಟೆ ತಾಲೂಕು ಅಧ್ಯಕ್ಷ ಉಮೇಶ್, ಮಂಚಯ್ಯ, ಶಿವಣ್ಣೇಗೌಡ, ದಾಸೆಗೌಡ, ರವಿಕುಮಾರ್, ಬಸವರಾಜ್, ಪಳಿನಿ ಸ್ವಾಮಿ, ಹೆಬ್ಬಲಗುಪ್ಪೆ ದಿನೇಶ್, ನಟರಾಜ್, ರಂಜಿತ್, ಅನಿತಮ್ಮ, ಗಾಯತ್ರಿ,ರತ್ನಮ್ಮ, ಹುಣಸೂರು ತಾಲೂಕು ಅಧ್ಯಕ್ಷ ಪ್ರತಾಪ್ ಗೌಡ, ಗೆಜೇಂದ್ರ, ಬಸವರಾಜ್, ಸುರೇಶ್ ಗೌಡ, ಸುಭಾಷ್ ಚಂದ್ರ, ಮೀನಾಕ್ಷಮ್ಮ, ಹೊಂಬೆಗೌಡ ಇನ್ನಿತರರಿದ್ದರು.
ಕೃಷಿಯಿಂದ ಸೋಲುತ್ತಿರುವ ರೈತ ಕೂಡ ಗೆಲುವಂತಾಗಲಿ. ರೈತರ ಬದುಕು ಬಂಗಾರವಾಗಲಿ. ದೇಶಕ್ಕೆ ರೈತ ಬೆನ್ನೆಲುಬಾದರೆ ಅನ್ನದಾತರಿಗೆ ರೈತ ಕಲ್ಯಾಣ ಬೆನ್ನೆಲುಬಾಗಿ ನಿಂತು ರೈತರನ್ನು ಸಮಾಜದಲ್ಲಿ ಮುಂಚೂಣಿ ಸ್ಥಾನಕ್ಕೆ ತರುವ ನೈತಿಕ ಹೊಣೆಗಾರಿಕೆಯೊಂದಿಗೆ ಕಾರ್ಯ ನಿರ್ವಹಿಸುತ್ತದೆ.
ಸಿ.ಚಂದನ್ ಗೌಡ,ರಾಜ್ಯಾಧ್ಯಕ್ಷರು,ರಾಜ್ಯ ರೈತ ಕಲ್ಯಾಣ ಸಂಘ.
ಹೆಚ್.ಡಿ.ಕೋಟೆ ತಾಲೂಕಿನ ಹೆಬ್ಬಲಗುಪ್ಪೆ ಗ್ರಾಮದಲ್ಲಿ ಗುರುವಾರ ನಡೆದ ರೈತ ಕಲ್ಯಾಣ ಸಂಘದ ನಾಮಫಲಕ ಅನಾವರಣ ಹಾಗೂ ಮಣ್ಣಿಗೆ ಮರುಜೀವ- ಮಣ್ಣು ಉಳಿಸಿ ಅಭಿಯಾನಕ್ಕೆ ರಾಜ್ಯಾಧ್ಯಕ್ಷ ಭುಮಿಪುತ್ರ ಸಿ.ಚಂದನ್ ಗೌಡ ಚಾಲನೆ ನೀಡಿದರು.
ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.