ಮಂಡ್ಯ: ಎತ್ತಿನಗಾಡಿ ಓಟದ ಸ್ಪರ್ಧೆ ಅವಘಡ ಓರ್ವ ಸಾವು
ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ಅವಘಡ ನಡೆದಿದ್ದು ವ್ಯಕ್ತಿ ಬಲಿಯಾಗಿದ್ದು ಮತ್ತೊಬ್ಬನ ಸ್ಥಿತಿ ಗಂಭೀರವಾಗಿರುವ ಘಟನೆ ಮಂಡ್ಯ ತಾಲ್ಲೋಕಿನ ಚಿಕ್ಕಮಂಡ್ಯದಲ್ಲಿ ಜರುಗಿದೆ.
ಎತ್ತಿನ ಗಾಡಿ ಓಟದ ಸ್ಪರ್ಧೆ ವೀಕ್ಷಿಸುತ್ತಿದ್ದವರ ಮೇಲೆ ಎತ್ತಿನಗಾಡಿ ಹರಿದ ಪರಿಣಾಮ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು ಮತ್ತೊರ್ವ ಬಾಲಕನ ಸ್ಥಿತಿ ಗಂಭೀರವಾಗಿದೆ.
ಮಂಡ್ಯ ಸಮೀಪದ ಚಿಕ್ಕಮಂಡ್ಯದಲ್ಲಿ ಘಟನೆ ನಡೆದಿದ್ದು,ಮಂಡ್ಯ ಜಿಲ್ಲೆ ಮಂಡ್ಯ ತಾಲೂಕಿನ ಚಿಕ್ಕ ಮಂಡ್ಯದಲ್ಲಿಎರಡು ದಿನಗಳಿಂದ ಅಂತರರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆನಡೆಯುತ್ತಿತ್ತು.
ಸ್ವರ್ಧೆವೀಕ್ಷಿಸಲುಬಂದಿದ್ದ ಕೀಲಾರ ಗ್ರಾಮದ ನಾಗರಾಜು(42) ಎಂಬುವವರಿಗೆ ಎತ್ತಿನ ಗಾಡಿ ಅಡಿಯಲ್ಲಿ ಸಿಲುಕಿದ ಪರಿಣಾಮ ಆತ ತೀವ್ರವಾಗಿ ಗಾಯಗೊಂಡುಮೃತಪಟ್ಟಿದ್ದು,ಹುಲಿವಾನ ಗ್ರಾಮದ ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದೆ.
ಸ್ಪರ್ಧೆ ವೇಳೆ ವೀಕ್ಷಕರತ್ತ ಎತ್ತಿನಗಾಡಿ ನುಗ್ಗಿದಪರಿಣಾಮ ಅವಘಡ ಸಂಭವಿಸಿದ್ದು, ಮತ್ತೋರ್ವ ಬಾಲಕ ಎತ್ತಿನ ಕಾಲಿಗೆ ಸಿಲುಕಿ ಗಂಭೀರ ಸ್ಥಿತಿಯಲ್ಲಿದ್ದಾನೆ.
ಮಂಡ್ಯ ಸೆಂಟ್ರಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದ ಪ್ರಕರಣ ದಾಖಲಾಗಿದೆ ಗಾಯಾಳುಗಳಿಗೆ ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.