ಕೆರೆಯ ಆಳಕ್ಕಿಳಿದು ಕೆ.ಆರ್.ಪೇಟೆ ಯುವಕನಿಂದ ಸಂಶೋದನೆ.ಆಳದಲ್ಲಿ ಚಿನ್ನದ ಬಣ್ಣದ ಕಲ್ಲು ಹೆಕ್ಕಿ ತಂದ ಯುವಕ

ಮಂಡ್ಯ: ಕೆರೆಯ ಆಳಕ್ಕಿಳಿದು ಕೆ.ಆರ್.ಪೇಟೆ ಯುವಕನಿಂದ ಸಂಶೋದನೆ. ಆಳದಲ್ಲಿ ಚಿನ್ನದ ಬಣ್ಣದ ಕಲ್ಲು ಹೆಕ್ಕಿ ತಂದ ಯುವಕ

ಮಂಡ್ಯ ಜಿಲ್ಲೆಯ ಐತಿಹಾಸಿಕ ಕೆರೆಗಳಲ್ಲಿ ಒಂದಾಗಿರುವ ಪಾಂಡವಪುರ ತಾಲೂಕಿನ ತೊಣ್ಣೂರಿನ‌ ಕೆರೆಯಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಸಾಕಷ್ಟು ವದಂತಿ ಮತ್ತು ಊಹಾಪೋಹಗಳು ಇದ್ದವು. ಈ ವದಂತಿಯ ಬೆನ್ನು ಬಿದ್ದ ಕೆ.ಆರ್.ಪೇಟೆಯ ಹೊನ್ನೇನ ಗ್ರಾಮದ ಯುವಕನೋರ್ವ ಇದೀಗ ಆ ಕೆರೆಯ ಆಳಕ್ಕೆ ಹೋಗಿ ಕೆಲವು ಚಿನ್ನದ ಲೇಪಿತ ಇರುವ ಕಲ್ಲುಗಳನ್ನು ಹೆಕ್ಕಿ ತಂದಿದ್ದಾನೆ. ಪಾಂಡವಪುರ ತಾಲೂಕಿನ ತೊಣ್ಣೂರು ಗ್ರಾಮದಲ್ಲಿರು ವ ಪುರಾತನ‌ ಕಾಲದ ಬೃಹತ್ ಕೆರೆಯಲ್ಲಿ ಚಿನ್ನದ ದೇಗುಲವಿದೆ. ಆ ದೇಗುಲ ಚಿನ್ನದ ರಥಕೂಡ ಇದೆ ಎಂಬ ವದಂತಿ ಇಂದಿಗೂ ಇ ಲ್ಲಿನ ಜನರ ಬಾಯಲ್ಲಿ ಕೇಳಿ ಬರುತ್ತೆ.ಜನರ ಈ ಬಾಯಿ ಮಾತಿನ ವದಂತಿ ನಂಬಿ ಕೆ.ಆರ್.ಪೇಟೆ ತಾಲೂಕಿನ ಹೊನ್ನೇ‌ನಹಳ್ಳಿ ಗ್ರಾ ಮದ ಮನೋಜ್ ಎನ್ನುವ ಸಾಹಸಿ ಯುವಕ ಇದೀಗ ಈ ಕೆರೆಯ ಆಳಕ್ಕೆ ಸುರಕ್ಷಿತ ಸಾಧನಗಳ ಸಹಾಯದೊಂದಿಗೆ ಏಕಾಂಗಿಯಾ ಗಿ ಹೋಗಿ ಬಂದಿದ್ದಾನೆ.

ಅಲ್ಲದೆ ಆ ಕೆರೆಯ ಆಳದಲ್ಲಿದ್ದ ಚಿನ್ನದ ಬಣ್ಣವಿರುವ ಕೆಲ ಕಲ್ಲುಗಳ ಮಾದರಿ ಹೆಕ್ಕಿ ತಂದಿದ್ದಾನೆ. ಜೊತೆಗೆ ಕೆರೆಗೆ ಆಳದಲ್ಲಿನ ಚಿತ್ರಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿದು ತಂದಿದ್ದು ಈ ಜನರ ವದಂತಿ‌ಗೆ ಪುಷ್ಟಿ ತುಂಬಿದ್ದಾನೆ. ಇನ್ನು ಈ ಸಾಹಸಿ ಯುವಕ ಮನೋಜ್ ತನ್ನ ಕೆಲವು ಸ್ನೇಹಿತರ ಸಹಕಾರದಿಂದ ಈ ಸಾಹಸ ಮಾಡಿದ್ದು ಕೆಲವು ಉಪಕರಣಗಳು ಮತ್ತು ಸುರಕ್ಷತ ಸಾಧನಗಳ ಸಹಾಯದಿಂದ ಈ ಕೆರೆಯ ಆಳಕ್ಕೆ ಹೋಗಿ ಬಂದಿರುವುದಾಗಿ ತಿಳಿಸಿದ್ದು, ಜೊತೆಗೆ ಅಲ್ಲಿ ಚಿನ್ನದ ದೇ ಗುಲ ಇರಬಹುದು ನೀರಿನ‌ಆಳದಲ್ಲಿ ಹೊಳೆಯುವ ಬಂಡೆಗಳಿವೆ ಎಲ್ಲವು ಪಾಚಿಯಿಂದ ಮುಚ್ಚಿದೆ. ಅಲ್ಲಿದ್ದ ಕೆಲ ಚಿನ್ನದ ಮಾದರಿ ಯ ಕಲ್ಲುಗಳ ತಂದಿರುವುದಾಗಿ ತಿಳಿಸಿದ್ದು, ಇದು ಚಿನ್ನವೋ ಅಲ್ಲವೋ ಅನ್ನೋದು ನನಗೆ ಗೊತ್ತಿಲ್ಲ.

ಇದನ್ನ ಪರೀಕ್ಷೆ ಮಾಡಿಸಬೇಕಿ ದೆ.ಇಲ್ಲಿನ ಜನರ ಈ ಕುತೂಹಲ ಕಥೆ ಕೇಳಿ ನನ್ನಿಂದ ಸರ್ಕಾರಕ್ಕೇ ಏನಾದರೂ ಉಪಯೋಗವಾಗಲಿ ಎಂದು ನಾನು ಈ ಸಾಹಸ ಮಾಡಿದ್ದೇನೆ. ಇದರ ಬಗ್ಗೆ ಹೆಚ್ಚಿನ ಸಂಶೋಧನ ಆಗಬೇಕಿದೆ‌. ಇದು ನಿಜವಾದ ಚಿನ್ನದ ಕಲ್ಲು ಆದರೆ ಸರ್ಕಾರ ತನಗೆ ಮತ್ತಷ್ಟು ಸೌಲಭ್ಯ ನೀಡಿದ್ರೆ ಇಲ್ಲಿರುವ ನಿಕ್ಷೇಪದ ಬಗ್ಗೆ ಮತ್ತೆ ಸಂಶೋಧನೆ ಮಾಡಿ ಮೇಲೆ ತರಲು ಸಹಕಾರಿಯಾಗುತ್ತದೆ ಎಂದಿದ್ದಾನೆ. ಇನ್ನು ಈ ಚಿಕ್ಕ ವಯಸ್ಸಿನಲ್ಲಿ ಜೀವದ ಮೇಲಿನ ಹಂಗು ತೊರೆದು ಈ ಯುವಕ ಮಾಡಿರೋ ಈ ಸಾಹಸಕ್ಕೆ ಊರಿನ‌ ಗ್ರಾಮಸ್ಥರು ಅಭಿನಂಧಿಸುತ್ತಿದ್ದಾದ್ರು. ದೈವದ ಶಕ್ತಿ ಇರುವ ಈ ಕೆರೆಯಿಂದ ಚಿನ್ನ ತೆಗೆಯುವುದು ಅಷ್ಟು ಸುಲಭವಲ್ಲ ಅಂತಿದ್ಸಾರೆ.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

ಇದೊಂದು ಪುರಾತನ ಕಾಲದ ಐತಿಹಾಸಿಕ ಹಿನ್ನಲೆಯುಳ್ಳ ಕೆರೆಯಾಗಿದೆ‌. ಇಲ್ಲಿನ ಕೆರೆಯ ಆಳ ಕೂಡ ಇಂದಿಗೂ ಯಾರು ಕೂಡ ಕಂಡು ಹಿಡಿದಿಲ್ಲ. ಇದರ ಆಳವನ್ನು ತಿಳಿಯಲು‌ ಬಂದವರು ಹಲವು ಪ್ರಯತ್ನ ಮಾಡಿದ್ರು ಇಂದಿಗೂ ಈ ಕೆರೆಯ ನಿಖಿರ ಆಳ ಯಾರಿಗೂ ತಿಳಿಯಲು ಆಗಿಲ್ಲ. ಕೆಲವರು ಈ ಕೆರೆಯಲ್ಲಿ ಚಿನ್ನದ ದೇಗುಲವಿರುವ ಮಾಹಿತಿ ತಿಳದು ಅದನ್ನು ತೆಗೆದು ಲಪಾಟಾಯಿಸುವ ಪ್ರಯತ್ನ ಮಾಡಿದ್ರು ಆದ್ರೆ ಅವರೆಲ್ಲ ಈ ದೇವರ ಶಾಪದಿಂದ ನಾಶವಾಗಿ ಹೋಗಿದ್ದಾರೆ ಎಂದಿದ್ದಾರೆ. ಇನ್ನು ಕೆಲವು ವರ್ಷಗಳ ಹಿಂದೆ ಭೂಗತ ಲೋಕದ ಡಾನ್ ಎಂದೇ ಕರೆಸಿಕೊಂಡಿದ್ದ ಮುತ್ತಪ್ಪ ರೈ ಹಾಗೂ ಆತನ ಸಹಚರರು ಒಮ್ಮೆ ಈ ಕೆರೆಯಲ್ಲಿ ಬೋಟಿಗ್ ಮಾಡುವ ವೇಳೆ ಇಲ್ಲಿ ಅವರಿಗೆ ಚಿನ್ನದ ಬಣ್ಣದ ಹಾವು ಕಾಣಿಸಿಕೊಂಡಿದ್ದು ಎಲ್ಲರಿಗೂ ತಿಳಿದಿರುವ ಸಂಗತಿ. ಬಳಿಕ ಕೇರಳದಿಂದ ಜ್ಯೋತಿಷಿ ಕರೆಸಿ ಅಷ್ಟಮಂಗಲ ಪ್ರಶ್ನೆ ಹಾಕಿಸಿದಾಗ ತಂತ್ರಿಗಳು ಮುತ್ತಪ್ಪ ರೈಗೆ ಈ ಕೆರೆ ದಡದಲ್ಲಿ ಕೃಷ್ಣನ ದೇಗುಲ ಕಟ್ಟಿಸಿ ಒಳಿತಾಗುತ್ತದೆ ಎಂದಿದ್ದಾರೆ. ಆದ್ರೆ ಕಾರಣಾಂತರದಿಂದ ಅದು ಸಾಧ್ಯವಾಗಲಿಲ್ಲ ಬಳಿಕ ಕೆಲ ವರ್ಷಗಳ ನಂತರ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟರು. ಆದರೆ ಈ ಯುವಕನ ಉದ್ದೇಶ ಒಳ್ಳೆಯದಾಗಿರೋ ಕಾರಣದಿಂದ ಈತನಿಗೆ ಯಾವುದೇ ಅನಾಹುತವಾಗಿಲ್ಲ ಆತ ಸುರಕ್ಷಿತವಾಗಿ ಬದುಕಿ ಬಂದಿದ್ದಾನೆ‌ ಎನ್ನುತ್ತಾರೆ. ಒಟ್ಟಾರೆ ಐತಿಹಾಸಿಕ ಪುರಾಣ ಪ್ರಸಿದ್ದ ಈ ತೊಣ್ಣೂರು ಕೆರೆಯಲ್ಲಿ ಚಿನ್ನದ ನಿಕ್ಷೇಪ ಇರುವ ವದಂತಿಗೆ ಇದೀಗ ಈ ಯುವಕ ಹೆಕ್ಕಿ ತಂದಿರುವ ಈ ಚಿನ್ನದ ಲೇಪಿತ ಕಲ್ಲುಗಳು ಮತ್ತು ಕೆರೆಯ ಆಳದಲ್ಲಿನ ಕೆಲಚಿತ್ರ ನಿಜಕ್ಕೂ ಅಲ್ಲಿ ಚಿನ್ನದ ದೇಗುಲ ಚಿನ್ನದ ರಥ ಇರಬಹುದು ಎಂಬ ಮಾತಿಗೆ ಪುಷ್ಟಿ ನೀಡುತ್ತವೆ. ಆದರೆ ಆ ಯುವಕ ತಂದಿರುವ ಕಲ್ಲು ನಿಜಕ್ಕೂ ಚಿನ್ನದ್ದೆ ಎಂದಾದರೆ ಅಲ್ಲಿ ಚಿನ್ನದ ನಿಕ್ಷೇಪ ಇರುವುದು ಖಚಿತವಾಗಲಿದೆ. ಸರ್ಕಾರ ಮತ್ತು ಸಂಬಂಧ ಪಟ್ಟ ಇಲಾಖೆ ಈ ಬಗ್ಗೆ ಹೆಚ್ಚಿನ ಸಂಶೋಧನೆಗೆ ಒಲವು ತೋರಬೇಕಿದೆ. ಅಲ್ಲದೆ ತನ್ನ ಸಾಹಸದ ಮೂಲಕ ಈ ಕೆರೆಯ ಆಳಕ್ಕೆ ಹೋಗಿ ಬಂ ದ ಈ ಯುವಕನ ಕಾರ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿ ಈತನ ಮತ್ತಷ್ಟು ಅನ್ವೇಷಣೆ ಕಾರ್ಯಕ್ಕೆ ಪ್ರೇರೇಪಣೆ ನೀಡಬೇಕಿದೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *