ಮಂಡ್ಯ: ಯುವ ಪೀಳಿಗೆಯಿಂದ ಕಲೆ ಮತ್ತು ಸಾಂಸ್ಕೃತಿಕ ಉಳಿಸಲು ಸಾಧ್ಯ, ಪ್ರಾಂಶುಪಾಲ ಕುಪ್ಪಳ್ಳಿ ಪ್ರಸನ್ನ ಕುಮಾರ್.
ಕೆ ಆರ್ ಪೇಟೆ ತಾಲೂಕಿನ ಗವಿಮಠ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ವಸತಿ ಶಾಲೆಗಳ ವಿದ್ಯಾರ್ಥಿಗಳ ಹಾಗೂ ನೌಕರರ ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮವನ್ನು ಗಣ್ಯರ ಸಮ್ಮುಖದಲ್ಲಿ ಪ್ರಾಂಶುಪಾಲ ಕುಪ್ಪಳ್ಳಿ ಪ್ರಸನ್ನ ಕುಮಾರ್ ಜ್ಯೋತಿ ಬೆಳಗಿಸುವ ಉದ್ಘಾಟಿಸಿದರು.
ಕಾರ್ಯಕ್ರಮ ಕುರಿತು ಮಾತನಾಡಿದ ಪ್ರಾಂಶುಪಾಲ ಕುಪ್ಪಹಳ್ಳಿ ಪ್ರಸನ್ನ ಕುಮಾರ್,ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು ಎನ್ನುವಂತೆ ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಹೋಗಬೇಕು. ಸಂಸ್ಕೃತಿ, ಪರಂಪರೆಯಿಂದ ವ್ಯಕ್ತಿಯ ವ್ಯಕ್ತಿತ್ವ ವಿಕಸನಗೊಳಿಸುತ್ತೇವೆ.
ಆಧುನಿಕ ಭಾರತದಲ್ಲಿ ಬದಲಾವಣೆಯ ಬಿರುಗಾಳಿಗೆ ಸಿಲುಕಿ ಸಾಂಸ್ಕೃತಿಕ ಪರಂಪರೆಯು ನಶಿಸುತ್ತಿರುವ ಈ ಕಾಲದಲ್ಲಿ ಭಾರತದ ಭವ್ಯ ಪರಂಪರೆಯ ಪ್ರಖರತೆಯನ್ನು ಹಾಗೂ ಪ್ರಾಮುಖ್ಯತೆಯನ್ನು ತಿಳಿಸಿ ಹದಿಹರೆಯದ ಯುವ ಮನಸ್ಸುಗಳಲ್ಲಿ ಪರಂಪರೆ ಮರುಕಳಿಸುವಂತೆ ಮಾಡುವುದು ಬಹಳ ಮುಖ್ಯ,ಅಷ್ಟೇಯಲ್ಲದೆ ಕಾಣದ ಕಾಷ್ಠದಗ್ನಿಯಂತೆ ಸುಪ್ತವಾಗಿರುವ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಸುವುದು ಕೂಡ ಈ ಕಾರ್ಯಕ್ರಮದ ಸದುದ್ದೇಶವಾಗಿದ್ದು, ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭೆ ಅನ್ವೇಷಣೆಗೆ ವೇದಿಕೆಯಾಗಿದೆ.
ಸಾಂಪ್ರದಾಯಕ ಉಡುಪು ಧರಿಸಿ ಈ ಸುಂದರ ಕ್ಷಣಗಳೇ ವಿದ್ಯಾರ್ಥಿಗಳ ಜೀವನದಲ್ಲಿ ಮರೆಯದ ನೆನಪುಗೆ ಈ ಕಾರ್ಯಕ್ರಮ ಸಾಕ್ಷಿಯಾಗಬೇಕು. ಮಕ್ಕಳಲ್ಲಿರುವ ಸೃಜನಶೀಲತೆ ಹೆಚ್ಚಿಸಲು ಪಠ್ಯೇತರ ಚಟುವಟಿಕೆಗಳು ಅವಶ್ಯಕವಾಗಿವೆ, ವಿದ್ಯಾರ್ಥಿಗಳು ನಮ್ಮ ಕಲೆ, ಸಂಸ್ಕೃತಿ ಪರಂಪರೆಯನ್ನು ಪ್ರತಿಯೊಬ್ಬ ಯುವ ಪೀಳಿಗೆ ಪೋಷಿಸಬೇಕು ಆಗ ಮಾತ್ರ ಯುವ ಪೀಳಿಗೆಯಿಂದ ಕಲೆ ಮತ್ತು ಸಾಂಸ್ಕೃತಿಕ ಉಳಿಸಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಶೆಟ್ಟನಾಯಕನಕೊಪ್ಪಲಿನ ಕಿತ್ತೂರರಾಣಿ ಚೆನ್ನಮ್ಮ ವಸತಿಶಾಲೆಯ ಪ್ರಾಂಶುಪಾಲರಾದ ಪವಿತ್ರ, ಮರಡಿಲಿಂಗೇಶ್ವರ ಕ್ಷೇತ್ರದ ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲ ಡಾ. ರಾಮನಾಯಕ್, ಸಾರಂಗಿಯ ಮೊರಾರ್ಜಿ ದೇಸಾಯಿ ವಸತಿಶಾಲೆಯ ಪ್ರಾಂಶುಪಾಲೆ ಲಲಿತಾ, ಜೈನಹಳ್ಳಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿಶಾಲೆಯ ಪ್ರಾಂಶುಪಾಲ ಮಾರಪ್ಪ, ನಾಡಿನ ಖ್ಯಾತ ಸುಗಮಸಂಗೀತ ಗಾಯಕರಾದ ರವಿಶಿವಕುಮಾರ್, ರವಿ, ಜಗಧೀಶ್ ಸೇರಿದಂತೆ ಇನ್ನಿತರ ಶಿಕ್ಷಕರುಗಳು ಹಾಗೂ ವಿವಿಧ ವಸತಿ ಶಾಲೆಗಳ ಮಕ್ಕಳು ಸೇರಿದಂತೆ ಉಪಸ್ಥಿತರಿದ್ದರು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.