“ಸಚಿವ ಕೆ ಸಿ ನಾರಾಯಣಗೌಡ ವಿರುದ್ಧ, ತಾಲೂಕು ಜೆಡಿಎಸ್ ಬಳಗ ಕಿಡಿ”

ಕೆ ಆರ್ ಪೇಟೆ: ಸಚಿವ ಕೆ ಸಿ ನಾರಾಯಣಗೌಡ ವಿರುದ್ಧ, ತಾಲೂಕು ಜೆಡಿಎಸ್ ಬಳಗ ಕಿಡಿ.

ಕೆ ಆರ್ ಪೇಟೆ ಪ್ರವಾಸಿ ಮಂದಿರದಲ್ಲಿ ತಾಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಜಾನಕಿರಾಮ್ ಹಾಗೂ ಯುವ ಜನತಾದಳದ ತಾಲೂಕು ಅಧ್ಯಕ್ಷ ಗದ್ದೆಹೊಸೂರು ಅಶ್ವಿನ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಸುದ್ದಿಗೋಷ್ಠಿ ನಡೆಯಿತು,

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ಅಧ್ಯಕ್ಷ ಜಾನಕಿರಾಮ್ ರವರು ಕಳೆದ ನಾಲ್ಕು ದಿನಗಳ ಕಾಲ ನಡೆದ ಮಹಾಕುಂಭಮೇಳ ಅದು ಬಿಜೆಪಿ ಮೇಳವಾಗಿದೆ ಸಚಿವರ ಸ್ಚಾರ್ಥಕ್ಕಾಗಿ ಬಳಸಿ ಕೊಳ್ಳೋಕೆ ಮಹಾಕುಂಭಮೇಳ ಕಾರ್ಯಕ್ರಮ ವೇದಿಕೆ ಆಗಿದೆ,ಸತತ ಆರು ತಿಂಗಳಿಂದ ಜಿಲ್ಲಾಡಳಿತ ತಿಂಗಳಿಂದ ಜನಸಾಮಾನ್ಯರ ಕೈಗೆ ಸಿಗದೆ ಬರಿ ಆರೋಗ್ಯ ಮೇಳ, ಉದ್ಯೋಗ ಮೇಳ, ಮಹಾಕುಂಭಮೇಳ,ಇಂಥ ಮೇಳಗಳಿಗೆ ತಲ್ಲೀನರಾಗಿರುವ ಅಧಿಕಾರಿಗಳಿಂದ ಸಾರ್ವಜನಿಕರು ಕಂಗಾಲಾಗಿದ್ದಾರೆ,ಸ್ಥಳೀಯ ಸರ್ವ ಪಕ್ಷದ ಮುಖಂಡರನ್ನು ಕುಂಭಮೇಳಕ್ಕೆ ಆಹ್ವಾನಾಸಿಬೇಕಿತ್ತು .

ಅಧಿಕಾರದ ಮದದಿಂದ ಪವಿತ್ರ ಮೇಳವನ್ನು ಬಿಜೆಪಿ ಮೇಳ ವನ್ನಾಗಿ ಪರಿವರ್ತಿಸಿರುವುದು ಬೇಸರದ ಸಂಗತಿ, ಕುಂಭಮೇಳ ಕಾರ್ಯಕ್ರಮದ ತಾಲೂಕು ಮತ್ತು ಜಿಲ್ಲಾಡಳಿತ ಖರ್ಚುವೆಚ್ಚವನ್ನು ಸಾರ್ವಜನಿಕರಿಗೆ ಪ್ರಕಟಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟಕ್ಕೆ ಸಿದ್ಧವಾಗುತ್ತಿದೆ ಎಂದು ಆಗ್ರಹಿಸಿದರು.

ಬಳಿಕ ಮಾತನಾಡಿದ ಜೆಡಿಎಸ್ ಯುವ ಜನತಾದಳ ಅಧ್ಯಕ್ಷ ಗದ್ದೆಹೊಸೂರು ಅಶ್ವಿನ್ ಕುಮಾರ್ ತಾಲೂಕಿನಾದ್ಯಂತ ರಾಜ್ಯ ರಸ್ತೆ ಆಗಿರಬಹುದು ಮತ್ತು ಗ್ರಾಮೀಣ ಪ್ರದೇಶದ ಗುಂಡಿ ರಸ್ತೆಗಳಿಂದ ಸಾರ್ವಜನಿಕರನ್ನ ಮುಕ್ತಿಗೊಳಿಸಿ ಎಷ್ಟೋ ಜೀವಗಳು ಬಲಿಯಾಗಿವೆ ಮೊದಲು ರಸ್ತೆ ಅಭಿವೃದ್ಧಿ ಪಡಿಸಿ, ಮೂರುದಿನ ಕುಂಭಮೇಳದ ಉದ್ದೇಶಕ್ಕಾಗಿ ಪಟ್ಟಣದ ತುಂಬಾ ಲೈಟಿಂಗ್‌ನಿಂದ ಪಟ್ಟಣದ ಜನರ ಸಮಸ್ಯೆ ಬಗೆಹರಿಯುವುದಿಲ್ಲ.

ಬಸ್ ನಿಲ್ದಾಣದಲ್ಲಿ ನೀರು ನಿಲ್ಲುತ್ತಿರುವುದನ್ನ ನೀವೇ ಹೋಗಿ ವೀಕ್ಷಣೆ ಮಾಡಿದ್ದೀರಿ ಆ ಸಮಸ್ಯೆ ಇದುವರೆಗೂ ಸರಿಪಡಿಸಿಲ್ಲ ತಾಲೂಕಿನ ಯುವಜನತೆಯ ಬಗ್ಗೆಯೂ ಯೋಚಿಸಿ ಇಲ್ಲದಿದ್ದರೆ ಮುಂಬರುವ ಚುನಾವಣೆಯಲ್ಲಿ ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ತಾಲೂಕು ಕಾರ್ಯ ಅಧ್ಯಕ್ಷ ರಾಮಚಂದ್ರು, ಸಂತೆಬಾಚಳ್ಳಿ ಹೋಬಳಿ ಅಧ್ಯಕ್ಷ ರವಿ ಕುಮಾರ್, ಟಿ ಎ ಪಿ ಸಿ ಎಂ ಎಸ್ ಸೋಮನಹಳ್ಳಿ ಮೋಹನ್,ಮುಖಂಡ ಬೂಕನಕೆರೆ ಹುಲ್ಲೆಗೌಡ, ಪುವನಹಳ್ಳಿ ರೇವಣ್ಣ, ಬಿಕನಹಳ್ಳಿ ಹಿರೇಗೌಡ, ಬುಕನಕೆರೆ ಯುವ ಮುಖಂಡ ಸ್ಟುಡಿಯೋ ಮಂಜು,ಕುಮಾರ ಪಡೆ ತಾಲೂಕು ಉಪಾಧ್ಯಕ್ಷ ಸಾಧುಗೋನಹಳ್ಳಿ ಲೋಕೇಶ್, ಕೆರೆಕೋಡಿ ಕಿರಣ್ ಕುಮಾರ್, ಯತೀಶ್, ಪ್ರದೀಪ್,ಪುಟ್ಟೇಗೌಡ, ಸೋಮನಾಥಪುರ ರಾಜು, ಭೋಜರಾಜು, ಸಚಿನ್ ಸೇರಿದಂತೆ ಉಪಸ್ಥಿತರಿದ್ದರು.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *