
ಮಂಡ್ಯ: ಬಬಿನ್ ಬೋಪಣ್ಣ ವಿರುದ್ಧ ಆರೋಪ ಮೇಲಾಧಿಕಾರಿಗಳಿಂದ ತನಿಖೆ.

ಮೀನುಗಾರಿಕೆ ಇಲಾಖೆಯ ಉಪನಿರ್ದೆಶಕರಾದ ಬಬಿನ್ ಬೋಪಣ್ಣ ರವರು ಸರ್ಕಾರದ ಆದೇಶ ನೀತಿ ನಿಯಮ ಉಲ್ಲಂಘಿಸಿ ಲಂಚ ಪಡೆದು ಆರ್ಹತ ಇಲ್ಲದವರಿಗೆ ಟೆಂಡರ್‌ಗಳನ್ನು ನೀಡುತ್ತಿದ್ದಾರೆಂದು ಸರ್ಕಾರಕ್ಕೆ ಹಾಗೂ ಮೇಲ್ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಮೇಲಾಧಿಕಾರಿ ತಿಪ್ಪೇಸ್ವಾಮಿ ರವರು ಮೀನುಗಾರಿಕೆ ಇಲಾಖೆ ಕಛೇರಿಗೆ ಭೇಟಿ ನೀಡಿ, ತನಿಖೆ ಕಾರ್ಯ ನಡೆಸಿದರು. ಇದೇ ವೇಳೆ ಉಪನಿರ್ದೇಶಕರಾದ ಬಬಿನ್ ವಿರುದ್ಧ ಮೀನುಗಾರರು ಆರೋಪವನ್ನು ಮಾಡಿದರು.
ಮಂಡ್ಯ ತಾಲ್ಲೂಕು ಕಾಮಧೇನು ಮೀನುಗಾರರ ಸಹಕಾರ ಸಂಘದ ಅಧ್ಯಕ್ಷರಾದ ರಮೇಶ್ ಮಾತನಾಡಿ, ಮೀನುಗಾರಿಕೆ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಉಪನಿರ್ದೇಶಕರಾದ ಬಷೀನ್ ಬೋಪಣ್ಣ ರವರು ಲಂಚ ನೀಡುವವರಿಗೆ ಬೇಗ ಕೆಲಸವನ್ನು ಮಾಡಿಕೊಟ್ಟ ಸರ್ಕಾರ ಬೈಲುಗಳನ್ನು ತಿದ್ದುಪಡಿ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಹೇಶ್ ಮಾತನಾಡಿ, ವಂಶಪಾರಂಪರ್ಯವಾಗಿ ಮೀನುಗಾರಿಕೆ ಮಾಡುತ್ತಿದ್ದು, ಕಾನೂನು ಕಟ್ಟಲೆಗಳನ್ನು ಲೆಕ್ಕಕ್ಕೆ ಇಡದೇ, ದುಡ್ಡು ಕೊಟ್ಟವರ ಪರ ಕೆರಗಳನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಇವರ ವಿರುದ್ಧ ಮೇಲ್ಮಟ್ಟದ ಅಧಿಕಾರಿಗಳಿಗೆ ದೂರು ಸಲ್ಲಿಕೆ ಮಾಡಲಾಗಿದ್ದು, ಈ ಮೂರಿನ ಅನ್ವಯ ಮೇಲಾಧಿಕಾರಿಗಳು ಒಂದು ತನಿಖೆ ಕಾರ್ಯವನ್ನು ಕೈಗೊಂಡಿದ್ದಾರೆ.
ಟೆಂಡರ್‌ದಾರರಾದ ಕೃಷ್ಣಗೌಡ ಮಾತನಾಡಿ, ಮೀನು ಸಾಕಾಣಿಕೆಗೆ ಅವಕಾಶವನ್ನು ನೀಡದೇ, ಈ ಅಧಿಕಾರಿ ಯಾವುದೆ ಸಹಕಾರವನ್ನು ನೀಡುತ್ತಿಲ್ಲ.ಸಂಬಂಧಿಸಿದ ದಾಖಲಾತಿಗಳನ್ನು ನೀಡಿದರೂ ಕೂಡ ಅಧಿಕಾರಿಗಳನ್ನು ನಮ್ಮನ್ನು ಕಡೆಗಣಿಸಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.