
ಮಂಡ್ಯ: ಒಕ್ಕಲಿಗ ಸಮುದಾಯದ ರಾಜಕಾರಣಿಗಳ ವಿರುದ್ಧ ಸ್ವಾಮೀಜಿ ಆಕ್ರೋಶ.

‘ಸಮುದಾಯ ರಕ್ಷಣೆ ಮಾಡಬೇಕಾದವರಿಂದ ಬರೀ ರಾಜಕೀಯ’. ಸಿದ್ದರಾಮ ಚೈತನ್ಯ ಮಹಾಸ್ವಾಮಿ, ತುಮಕೂರು ಜಿಲ್ಲೆಯ ಕಿತ್ನಾಮಂಗಲ ಅರೆಶಂಕರ ಮಠದ ಸ್ವಾಮೀಜಿ. ಸಮುದಾಯ ರಕ್ಷಣೆ ಮಾಡಬೇಕಾದವರು ರಾಜಕಾರಣ ಮಾಡಿಕೊಂಡು ಕುಳ್ತಿದ್ದಾರೆ.
ಒಕ್ಕಲಿಗರ ಮೀಸಲಾತಿ ಹೋರಾಟಕ್ಕೆ ಜಯ ಸಿಕ್ಕೇ ಸಿಗುತ್ತೆ. ಒಕ್ಕಲಿಗರ ಸಮುದಾಯ ಮೀಸಲಾತಿ ಪೆಡಂಭೂತಕ್ಕೆ ಸಿಕ್ಕಿ ನಲುಗುತ್ತಿದೆ. ಸಮುದಾಯದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅವಕಾಶ ಸಿಕ್ತಿಲ್ಲ.
ಪದವಿ ಪಡೆದ ಯುವಕರಿಗೆ ಉದ್ಯೋಗದ ಅವಕಾಶ ಸಿಕ್ತಿಲ್ಲ.ಉದ್ಯೋಗದಿಂದ ಯುವಕರು ವಂಚಿತರಾಗುತ್ತಿದ್ದಾರೆ. ಸಮುದಾಯ ರಕ್ಷಣೆ ಮಾಡಬೇಕಾದವರು ರಾಜಕಾರಣ ಮಾಡಿಕೊಂಡು ಕುಳ್ತಿದ್ದಾರೆ.
ಒಕ್ಕಲಿಗ ಸಮುದಾಯ ಮೀಸಲಾತಿಯಿಂದ ವಂಚಿತವಾಗಿದೆ. ನಮ್ಮ ಪರ ಧ್ವನಿ ಎತ್ತಬೇಕಾದವರು ಚುನಾವಣೆಯಲ್ಲಿ ಬಿಸಿ ಇದ್ದಾರೆ. ಇತಿಹಾಸದಲ್ಲಿ ಒಕ್ಕಲಿಗರ ಸಮುದಾಯ MLA ಹಿಂದೆ ಹೋಗ್ತಾರೆ.
ಸಮುದಾಯಕ್ಕೆ ಅನ್ಯಾಯ ಆಗಿರುವ ಬಗ್ಗೆ ಬೀದಿಗೆ ಬಂದಿದ್ದೀರಾ? ಒಕ್ಕಲಿಗರು ರಾಜಕಾರಣಿಗಳ ಹಿಂಬಾಲಕರಾಗಬೇಡಿ. ನಮ್ಮ ಮೀಸಲಾತಿಗಾಗಿ ಹೋರಾಟಕ್ಕೆ ಬನ್ನಿ.
ರಾಜಕಾರಣಿಗಳಿಗೆ ರಾಜಕಾರಣ ಮಾಡೋದು ಗೊತ್ತು. ಯಾರ ಕಾಲು ಹಿಡಿಯಬೇಕು, ಓಟ್ ಹೇಗೆ ಹಾಕಿಸಿಕೊಳ್ಳಬೇಕು ಗೊತ್ತಿದೆ. ರಾಜಕಾರಣಿಗಳು ನಮ್ಮ ಸಮಾಜ ಕಾಪಾಡುವುದನ್ನ ಮರೆತಿದ್ದಾರೆ. ವಿಧಾನ ಸೌಧ ಪ್ರಾರಂಭವಾಗಿ 75 ವರ್ಷವಾಗಿದೆ.
ಯಾವ ಒಬ್ಬ ಶಾಸಕ ನಾನು ಒಕ್ಕಲಿಗರ ಮುಖಂಡ ಓಟ್ ಹಾಕಿ ಅಂತ ಅಂದಿಲ್ಲ. ಯಾವೊಬ್ಬ ಎಂಎಲ್ಎ ಒಕ್ಕಲಿಗರ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಶಾಸಕರಾಗಲು ಒಕ್ಕಲಿಗರ ಓಟ್ ಬೇಕು, ಸಿಎಂ ಆಗೋಕೆ ಒಕ್ಕಲಿಗರ ಮೆಜಾರಿಟಿ ಬೇಕು. ಒಕ್ಕಲಿಗರಿಗೆ ಅನ್ಯಾಯ ಆಗ್ತಿದೆ, ಧ್ವನಿ ಎತ್ತುತ್ತಿಲ್ಲ.
ಈ ಸಮಾಜದ ನಾಯಕರಲ್ವಾ ಅವರು? ಯತ್ನಾಳ್ ಪಂಚಮಸಾಲಿ ಲಿಂಗಾಯಿತರಿಗೆ ಮೀಸಲಾತಿ ಕೊಡಿ ಅಂತಾರೆ. ಲಿಂಗಾಯಿತ ಮುಖ್ಯಮಂತ್ರಿ ವಿರುದ್ಧವೇ ಮಾತನಾಡ್ತಾನೆ. ಸಚಿವ ಶ್ರೀರಾಮುಲು ನಾಯಕರಿಗೆ 7.5% ಮೀಸಲಾತಿ ಕೊಡಿಸ್ತೀನಿ ಅಂತಾರೆ.
ಆಗಿದ್ರೆ ಒಕ್ಕಲಿಗ ಸಮಾಜದ ರಾಜಕಾರಣಿಗಳು ಏನು ಮಾಡ್ತಿದ್ದಾರೆ?ನಿಮ್ಮ ರಾಜಕಾರಣ ಮಾಡಲು ಈ ಸಮಾಜ ಬೇಕು.ಏನು ಮಾಡ್ತಿದ್ದೀರಿ ರಾಜಕಾರಣಿಗಳು.?
ರಾಜಕಾರಣಿಗಳಿಂದ ಮೀಸಲಾತಿ ಕೊಡಿಸಲು ಸಾಧ್ಯವಿಲ್ಲ. ನಾವು ನಮ್ಮ ಮೀಸಲಾತಿಗಾಗಿ ಹೋರಾಟಕ್ಕೆ ಮುಂದಾಗಬೇಕು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.