
ಹೊಸನಗರ:- ಕೆರೆಗಳು ಪುನಶ್ಚೇತನಗೊಂಡರೆ ಹೆಚ್ಚಿನ ನೀರನ್ನು ಸಂಗ್ರಹಿಸಲು ಅನುಕೂಲವಾಗುವುದು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲ ಕೃಷ್ಣ ಬೇಳೂರು ತಿಳಿಸಿದರು.

ಹೊಸನಗರ, ಪೂರ್ವಿಕರು ನಿರ್ಮಾಣ ಮಾಡಿರುವ ಕೆರೆಗಳನ್ನು ಗುರುತಿಸಿ ಅದರ ಅಭಿವೃದ್ಧಿಯ ಪೂರಕವಾಗಿ ಸ್ಥಳೀಯರು ಚಿಂತನೆ ನಡೆಸಿದಾಗ ಮಾತ್ರ ಅದರ ಅಕ್ಕಪಕ್ಕದ ಹಲವಾರು ಬಾವಿಗಳಲ್ಲಿ ನಿರಂತರವಾಗಿ ನೀರು ಕಾಣಲು ಸಾಧ್ಯ. ಒಂದು ಊರು ಪಟ್ಟಣ ಗ್ರಾಮ ಪಂಚಾಯಿತಿ ಕೆರೆಗಳ ಹೂಳೆತ್ತುವ ಮೂಲಕ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು. ಕೆರೆಗಳು ಪುನಶ್ಚೇತನಗೊಂಡರೆ ಹೆಚ್ಚಿನ ನೀರನ್ನು ಸಂಗ್ರಹಿಸಲು ಅನುಕೂಲವಾಗುವುದು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರರಾದ ಗೋಪಾಲ ಕೃಷ್ಣ ಬೇಳೂರು ತಿಳಿಸಿದರು.

ಗುರುವಾರದ ಸಂಜೆ ಪಟ್ಟಣದ ಹೃದಯ ಭಾಗದಲ್ಲಿರುವ ಒಟ್ಟೂರ ಕೆರೆಯ ಅಭಿವೃದ್ಧಿಯನ್ನು ವೀಕ್ಷಿಸಿ ಮಾತನಾಡಿದ ಅವರು, ನಮ್ಮ ಪೂರ್ವಜರಿಂದ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳಲು ಕೆರೆ ಬಾವಿಗಳನ್ನು ನಿರ್ಮಿಸಿ ಕೊಳ್ಳಲಾಗುತ್ತಿತ್ತು. ಆದರೆ ಆರೀತಿ ಯಲ್ಲಿ ನಿರ್ಮಾಣ ಮಾಡಿರುವ ಅನೇಕ ಕೆರೆಗಳು ಹೂಳು ತುಂಬಿಕೊಂಡು ಅಲ್ಪ ಪ್ರಮಾಣದ ನೀರು ಸಂಗ್ರಹಿಸಲಾಗುತ್ತಿದೆ. ಹೂಳು ತುಂಬಿರುವ ಇಂತಹದೊಂದು ಕೆರೆಯ ಅಭಿವೃದ್ದಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹೊಸನಗರ ಪಟ್ಟಣ ಪಂಚಾಯ್ತಿಯ ಸದಸ್ಯರಾದ ಅಶ್ವಿನ್ ಕುಮಾರ್ ಮತ್ತು ಅವರ ತಂಡದಿಂದ ಮಾಡಲಾಗುತ್ತಿದೆ.
ಇತ್ತೀಚೆಗೆ ಹೊಸನಗರ ಪಟ್ಟಣದ ಹೃದಯ ಭಾಗದಲ್ಲಿರುವ ಒಟ್ಟೂರ ಕೆರೆಯು ಅತಿ ಪುರಾತನವಾದ ಕೆರೆಯಾಗಿದ್ದು, ಈ ಒಟ್ಟೂರ ಕೆರೆಯ ಕೇವಲ ಹತ್ತು ಲಕ್ಷದಲ್ಲಿ ಅಭಿವೃದ್ಧಿಗೆ ಚಿಂತನೆ ನಡೆಸಿರುವುದು ಅತ್ಯಂತ ಶ್ಲಾಘನೀಯ ಸಂಗತಿಯಾಗಿದೆ.
ನಾನು ಶಾಸಕನಾಗಿದ್ದಾಗ ಗಣಪತಿ ದೇವಸ್ಥಾನ ಸಮೀಪದ ಕೆರೆಯ ಅಭಿವೃದ್ಧಿಗೆ ಇಪ್ಪತೈದು ಲಕ್ಷ ರೂಪಾಯಿ ನೀಡಲಾಯಿತು ಅದು ಈಗ ಒಂದು ಕೋಟಿ ರೂಪಾಯಿಗೆ ಸಮವಾಗಿದೆ. ಹಾಲಿ ಶಾಸಕರು ಇದರ ಜೀರ್ಣೋದ್ಧಾರಕ್ಕೆ ಸರ್ಕಾರದಿಂದ ಹಣ ಬಿಡುಗಡೆ ಮಾಡಿಸಬಹುದು ಆದರೆ, ಇಲ್ಲಿನ ಅಭಿವೃದ್ಧಿಯ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಸಾಗರದ ಗಣಪತಿ ದೇವಸ್ಥಾನದ ಕೆರೆಯ ಅಭಿವೃದ್ಧಿಗೆ ಒಂದು ಕೋಟಿ ರೂಪಾಯಿ ಅನುದಾನ ತರಲಾಗಿದೆ ಅದರ ಪಕ್ಕದಲ್ಲಿಯೇ ಅವರಿಗೆ ಸೇರಿದ ಜಮೀನಿದೆ ಅದಕ್ಕಾಗಿ ಆ ಕೆರೆಯ ಅಭಿವೃದ್ಧಿ ನಡೆಸಲಾಗುತ್ತಿದೆ ಎಂಬುದು ನಮ್ಮ ಅಭಿಪ್ರಾಯವಾಗಿದೆ.

ಆಕರ್ಷಕ ಕಮ್ಮಿ ಬಡ್ಡಿದರ ಗ್ರಹ ಸಾಲಕ್ಕಾಗಿ ಸಂಪರ್ಕಿಸಿ : 9535995455 , 9880432555.
ಈಗಾಗಲೇ ಹದಿನೈದು ದಿನಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಾ,ರಾ ಸಂಸ್ಥೆ, ಪಟ್ಟಣ ಪಂಚಾಯತಿಯ ಸದಸ್ಯ ಅಶ್ವಿನ್ ಕುಮಾರ್ ಮತ್ತು ಅವರ ತಂಡವು ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಈ ಒಟ್ಟೂರ ಕೆರೆಯ ಅಭಿವೃದ್ಧಿಗೆ ಚಾಲನೆ ನೀಡಿ ಇಲ್ಲಿ ಹೂಳೆತ್ತುವ ಕಾರ್ಯ ಭರದಿಂದ ಸಾಗಿದೆ. ಆದರೆ ಇಲ್ಲಿನ ಸ್ಥಳೀಯ ಬಿಜೆಪಿ ಮುಖಂಡರಿಗೆ ಇದು ತಿಳಿದಿಲ್ಲವೇ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಒಟ್ಟೂರ ಕೆರೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯತಿ ಸದಸ್ಯ ಅಶ್ವಿನ್ ಕುಮಾರ್, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ ಜಿ ನಾಗರಾಜ್,ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯ ಚಂದ್ರಮೌಳಿ, ಸಮಿತಿಯ ಸದಸ್ಯ ನಾಸಿರ್, ಮುಖಂಡರಾದ ಸಣ್ಣಕ್ಕಿ ಮಂಜು, ಸದಾಶಿವ ಶ್ರೇಷ್ಟಿ, ಬಾಬು ಕಾಮತ್, ವೆಂಕಟೇಶ್, ಜೆಸಿಐ ಅಧ್ಯಕ್ಷೆ ಸೀಮ ಸರಾವ್, ಲೋಕೇಶ್,ಧರ್ಮಸ್ಥಳ ಸಂಘದ ಅಶ್ವಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ: ಸಿಸಿಲ್ ಸೋಮನ್

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್-ಟೆಕ್ ಇಂಟರ್ನ್ಯಾಷನಲ್ Mob: 9880432555.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ: 9880432555.