ಎಲ್.ಟಿ ತಿಮ್ಮಪ್ಪ ಹೆಗಡೆ ನಿಧನ : ಶಾಸಕ ಹೆಚ್.ಹಾಲಪ್ಪ ಸಂತಾಪ

ಸಾಗರ : ಎಲ್.ಟಿ ತಿಮ್ಮಪ್ಪ ಹೆಗಡೆ ನಿಧನ : ಶಾಸಕ ಹೆಚ್.ಹಾಲಪ್ಪ ಸಂತಾಪ.

ಮಾಜಿ ಶಾಸಕರು, ಸಹಕಾರಿ ಧುರೀಣರಾದ ಶ್ರೀಯುತ ಎಲ್.ಟಿ ತಿಮ್ಮಪ್ಪ ಹೆಗ್ಡೆ ಯವರ ನಿಧನಕ್ಕೆ ಶಾಸಕರಾದ ಹೆಚ್.ಹಾಲಪ್ಪ ನವರು ಸಂತಾಪ ಸೂಚಿಸಿದ್ದಾರೆ.

ಮಾಜಿ ಶಾಸಕರಾದ ಎಲ್.ಟಿ ತಿಮ್ಮಪ್ಪ ಹೆಗ್ಡೆ ಯವರು, 1978 ಮತ್ತು 1983 ರಲ್ಲಿ ಸಾಗರ ಕ್ಷೇತ್ರದ ಶಾಸಕರಾಗಿ, ಸಾಗರದ ಅಪ್ಸ್ಕೋಸ್, ತೋಟಗಾರ್ಸ್, ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘಗಳ ಸ್ಥಾಪನೆಗೆ ಪ್ರಮುಖ ಪಾತ್ರ ವಹಿಸಿದ್ದರು ಹಾಗೂ ಸಂಸ್ಥಾಪಕ ಅಧ್ಯಕ್ಷರಾಗಿ, ಕ್ಯಾಂಪ್ಕೋ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾಗಿ, ಕೇಂದ್ರ ಸಾಂಬಾರು ಮಂಡಳಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಎಲ್.ಟಿ ತಿಮ್ಮಪ್ಪ ಹೆಗಡೆ ಯವರು, ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಯುವ ಪೀಳಿಗೆಗೆ ಅದರ್ಶ ಪ್ರಾಯರಾಗಿದ್ದರು. ಶ್ರೀಯುತರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ.

ಮೃತರ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಿ, ಕುಟುಂಬಸ್ಥರಿಗೆ, ಹಿತೈಷಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಪ್ರಾರ್ಥಿಸುತ್ತೇನೆ.

ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *