ಮೈಸೂರು: ಭ್ರಷ್ಟಾಚಾರದ ವಿರುದ್ಧ KSLECA ರಾಜ್ಯಾಧ್ಯಕ್ಷರಾದ ಶ್ರೀ ಸಿ.ರಮೇಶ್ ನೇತೃತ್ವದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ.
ಇಂದು ಮೈಸೂರು ತಾಲ್ಲೂಕು ಕಡಕೊಳನ ಸೆಸ್ಕ್ ಶಾಖಾಕಛೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ KSLECA ರಾಜ್ಯಾಧ್ಯಕ್ಷರಾದ
ಶ್ರೀ ಸಿ.ರಮೇಶ್ ನೇತೃತ್ವದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆಗೆ ಬೆಚ್ಚಿದ ಸೆಸ್ಕ್ ನ ಹಿರಿಯ ಅಧಿಕಾರಿಗಳು, ಸೆಸ್ಕ್ ನೌಕರರ 659 ಸಮಿತಿ, ಡಿಪ್ಲೊಮಾ ಇಂಜಿನಿಯರ್ಸ್ ಅಸೋಸಿಯೇಷನ್, ಇಂಜಿನಿಯರಿಂಗ್ ಅಸೋಸಿಯೇಷನ್, ಸೆಸ್ಕ್ ನ ವಿವಿದ ಸಂಘ ಸಂಸ್ಥೆಗಳು ಸೆಸ್ಕ್ ಮೈಸೂರು ನಗರ & ಹೆಚ್ಚುವರಿ ನಗರ ವಿಭಾಗದ ಎಲ್ಲಾ EE, AEE, AE ಹಾಗೂ JE ಗಳು ಕಡಕೊಳಕ್ಕೆ ದೌಡು, ಸಂಧಾನಕ್ಕೆ ಪ್ರಯತ್ನ, ಸಮಸ್ಯೆಬಗೆಹರಿಸುವ ನಿಟ್ಟಿನಲ್ಲಿ ಪ್ರಮುಖ ನಿರ್ಣಯ, ಶಾಖಾಧಿಕಾರಿ (AE) 15 ದಿನ ರಜೆ ಮೇಲೆ ತೆರಳಲು ಹಿರಿಯ ಅಧಿಕಾರಿಗಳಿಂದ ಆದೇಶ, ಭ್ರಷ್ಟಾಚಾರದ ಬಗ್ಗೆ ಸಮಿತಿ ರಚನೆ ಹಾಗೂ ಸಮಗ್ರ ತನಿಖೆಗೆ ಒಪ್ಪಿಗೆ, ತದನಂತರ ಪ್ರತಿಭಟನೆ ಹಿಂಪಡೆದುಕೊಂಡ ಮಾತನಾಡಿದ ರಾಜ್ಯಾಧ್ಯಕ್ಷರು ಇಂದಿನ ಈ ಪ್ರತಿಭಟನೆಗೆ ರಾಜ್ಯಾದ್ಯಂತ ವ್ಯಾಟ್ಸಪ್ ಹಾಗೂ ಖುದ್ದು ಬೆಂಬಲ ನೀಡಿದ ಎಲ್ಲಾ ವಿದ್ಯುತ್ ಗುತ್ತಿಗೆದಾರರು
ಪ್ರತಿಭಟನೆಯಲ್ಲಿ ಭಾಗವಹಿಸಿದ
ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಕುತ್ತಿಗೆದಾರರ ಸಂಘ( ರಿ)ಬೆಂಗಳೂರು
ಇಂದಿನ ಪ್ರತಿಭಟನೆಯಲ್ಲಿ ಭಾಗವಹಿಸಿದ ರಾಜ್ಯಾಧ್ಯಕ್ಷರಾದ ಸಿ ರಮೇಶ್, ಜಿಲ್ಲಾಧ್ಯಕ್ಷರಾದ ಧರ್ಮವೀರ, ಜಿಲ್ಲಾ ಉಪಾಧ್ಯಕ್ಷರಾದ ರಾಘವೇಂದ್ರ ಜಿಲ್ಲಾ ಕಾರ್ಯದರ್ಶಿ ಗಿರೀಶ್, ಸೆಸ್ಕ್ ಪ್ರತಿನಿಧಿ ಮಲ್ಲಿಕಾರ್ಜುನಪ್ಪ ಹಾಗೂ ಮುಖಂಡರಾದ ಮಂಜುನಾಥ್ (ಸ್ಮಾರ್ಟ್) ಮಹಾದೇವಸ್ವಾಮಿ ರುದ್ರ ಮಾಜಿ ಜಿಲ್ಲಾಧ್ಯಕ್ಷರಾದ ಸುರೇಶ್ ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಕುಮಾರ್, ಚೇತನ್, ರವಿಕುಮಾರ್, ಶಿವಕುಮಾರ್, ಸಿದ್ದೇಶ್, ಚಿಕ್ಕರಸೇಗೌಡ ,ಮಂಜುನಾಥ್, ಮಹದೇವಸ್ವಾಮಿ ,ರವಿ ದಾಸ್, ಸುಮಿತ್ರ ಹಾಗೂ ಮೈಸೂರು ಜಿಲ್ಲಾ ವಿದ್ಯುತ್ ಗುತ್ತಿಗೆದಾರರು ಭಾಗವಹಿಸಿದ್ದರು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.