ಮೈಸೂರು: ಕೋಮಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ 2021 22 ನೇ ಸಾಲಿನ ವಾರ್ಷಿಕ ಮಹಾಸಭೆ.
ಪಿರಿಯಾಪಟ್ಟಣ ತಾಲೂಕಿನ ಕೋಮಲಾಪುರ ಹಾಲು ಉತ್ಪಾದಕರ ಸಹಕಾರ ಸಂಘದ 2021 22 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮೈಸೂರು ಜಿಲ್ಲಾ ಮೈಮಲ್ ಅಧ್ಯಕ್ಷ ಪಿಎಂ ಪ್ರಸನ್ನ ಮಾತನಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಏಳಿಗೆ ಆಗಬೇಕಾದರೆ ಗುಣಮಟ್ಟ ಹಾಲನ್ನು ಸಂಘಕ್ಕೆ ನೀಡಿದಾಗ ಮಾತ್ರ ಸಾಧ್ಯ ಹಾಗೂ ಕಟ್ಟಡ ನಿರ್ಮಾಣಕ್ಕೆ ಅನುದಾನವನ್ನು ನೀಡುವುದಾಗಿ ಭರವಸೆ ನೀಡಿದರು ಸಂಘದಿಂದ ಸಿಗುವಂತಹ ಸೌಲಭ್ಯಗಳನ್ನು ಸದ್ಬಳಿಕೆ ಮಾಡಿಕೊಂಡು ಆರ್ಥಿಕವಾಗಿ ಹೊಂದಿ ಎಂದು ರೈತರಿಗೆ ಮಾತು ಹೇಳಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೃಷ್ಣೆಗೌಡ ಮಾತನಾಡಿ ಕಳೆದ ಬಾರಿ ಕಾರ್ಯಕಾರಿ ಸಭೆಯಲ್ಲಿ ತೀರ್ಮಾನಿಸಿದಂತೆ ಈ ಬಾರಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ನೀಡಲಾಯಿತು.ಇದೇ ರೀತಿ ಗ್ರಾಮದ ಯುವಕರು ಅತಿ ಹೆಚ್ಚು ಅಂಕ ಪಡೆದು ವಿದ್ಯಾವಂತರಾಗಿ ಎಂದು ತಿಳಿಸಿದರು.
ವಿಸ್ತರಣಾಧಿಕಾರಿ ಶ್ರೀಕಾಂತ್ ಮಾತನಾಡಿ ಈ ಬಾರಿ ಸಂಘವು 745856 ಲಾಭ ಪಡೆದಿದೆ ಇದೇ ರೀತಿ ಗುಣಮಟ್ಟ ಹಾಲನ್ನ ಶೇಖರಣೆ ಮಾಡುವ ಮುಖಾಂತರ ತಾಲೂಕಿನಲ್ಲಿ ಉತ್ತಮ ಸಂಘವಾಗಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಮಲ್ಲಯ್ಯ ನಿರ್ದೇಶಕರುಗಳಾದ ಸಾವಿತ್ರಮ್ಮ, ಅಕ್ಕಯ್ಯಮ್ಮ ,ನಿಂಗಮ್ಮ, ಪುಟ್ಟರಾಜು, ಜವರ ನಾಯಕ ಜವರೇಗೌಡ ,ರಮೇಶ್, ವಸಂತಕುಮಾರ್ ,ಗಣೇಶ್, ಸತೀಶ್ ಮಂಜೇಗೌಡ ,ಮುಖ್ಯ ಕಾರ್ಯನಿರ್ವಣಧಿಕಾರಿ ದಿಲೀಪ್, ಹಾಲು ಪರಿವೀಕ್ಷಕ ಚಂದ್ರೇಗೌಡ ಗ್ರಾಮದ ಮುಖಂಡರುಗಳು ಹಾಗೂ ಯಜಮಾನ್ರುಗಳು ಹಾಜರಿದ್ದರು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.