ದಾವಣಗೆರೆ: ಟಿಕೆಟ್ ಸಿಗದೇ 5 ವರ್ಷಗಳ ಬಳಿಕ ಪೊಲೀಸ್ ಹುದ್ದೆಗೆ ಮರಳಿದ ದೇವೇಂದ್ರಪ್ಪ.
ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ರಾಜಕೀಯಕ್ಕೆ ಇಳಿದಿದ್ದ ಎಸಿಬಿ ಸಿಪಿಐ ದೇವೇಂದ್ರಪ್ಪ ಕುಣೆಬೆಳಕೆರೆ ಇದೀಗ ಯಾವುದೇ ಪಕ್ಷದಲ್ಲಿ ಟಿಕೆಟ್ ಸಿಗದಿದ್ದರಿಂದ ಪೊಲೀಸ್ ಇಲಾಖೆ ಹುದ್ದೆಗೆ ಮರಳಿದ್ದಾರೆ. 2018 ಕೋಲಾರದಲ್ಲಿ ಎಸಿಬಿ ಸಿಪಿಐ ಆಗಿ ಕೆಲಸ ನಿರ್ವಹಿಸುತ್ತಿದ್ದ ದೇವೇಂದ್ರಪ್ಪ ಕುಣೆಬೆಳಕೆರೆ ಮಾಜಿ ಸಚಿವ ಜನಾರ್ಧನ ರೆಡ್ಡಿ ಅವರ ಜೊತೆ ಸೇರಿ ಪ್ರಚಾರ ಶುರು ಮಾಡಿದ್ದರು. ನಂತರ ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿ ದಾವಣಗೆರೆ ಜಿಲ್ಲೆಯ ಹರಿಹರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರದೊಂದಿಗೆ ರಾಜಕೀಯಕ್ಕೆ ಧುಮುಕಿದರು.
ಆದರೆ ಬಿಜೆಪಿಯ ಟಿಕೆಟ್ ಕೈತಪ್ಪಿದ್ದು ಕೆಲ ವರ್ಷಗಳ ಕಾಲ ಬಿಜೆಪಿಯಲ್ಲಿ ಕಾರ್ಯಕರ್ತರಾಗಿ ಕೆಲಸ ನಡೆಸಿ ,ನಂತರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು. ಆದರೆ ಇದೀಗ ಕಾಂಗ್ರೆಸ್ ಕೂಡ ಇವರಿಗೆ ಟಿಕೆಟ್ ನಿರಾಕರಿಸಿದೆ. ಎರಡು ಪಕ್ಷಗಳಿಂದ ಟಿಕೆಟ್ ಲಭಿಸಿದ ಕಾರಣ ರಾಜೀನಾಮೆ ನೀಡಿದ್ದ ಪೊಲೀಸ್ ಹುದ್ದೆಗೆ ಯಾದಗಿರಿ ಜಿಲ್ಲೆಯ ಡಿಎಸ್‌ಬಿ ಠಾಣೆಯ ಸಿಪಿಐ ಆಗಿ ಮತ್ತೆ ಐದು ವರ್ಷಗಳ ಬಳಿಕ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.