ಮುಂಬೈ: ತಂದೆಯಿಂದಲೇ ತನ್ನ 2 ವರ್ಷದ ಮಗುವಿನ ಹತ್ಯೆ
ಮುಂಬೈನಲ್ಲಿ ತಂದೆ ಓರ್ವ ತನ್ನ ಎರಡು ವರ್ಷದ ಮಗುವನ್ನು ಕೊಲೆ ಮಾಡಿ ನದಿಗೆ ಎಸೆದಿರುವ ನಿಷ್ಕರುಣ ಘಟನೆ ನಡೆದಿದೆ. 22 ವರ್ಷದ ವ್ಯಕ್ತಿಗೆ ವಿವಾಹೇತರ ಸಂಬಂಧವಿದ್ದು ಮಹಿಳೆಯನ್ನು ಮದುವೆಯಾಗಲು ಮಗು ಅಡ್ಡಿಯಾಗಬಾರದೆಂಬ ಕಾರಣಕ್ಕೆ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಆರೋಪಿ ಮಹಿಳೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ.
ಈ ಮಹಿಳೆಯು ತನ್ನನ್ನು ಮದುವೆಯಾಗಲು ಆಶಿಸಿದರೆ ತನ್ನ ಹೆಂಡತಿ ಹಾಗೂ ಮಗುವನ್ನು ಬಿಟ್ಟು ಬರಬೇಕು ಎಂದು ಷರತ್ತು ಹಾಕಿದ್ದು, ಆರೋಪಿಗಳು ಹೆಂಡತಿ ಮತ್ತು ಮಗುವನ್ನು ಕೊಲ್ಲಲು ಸಂಚು ರೂಪಿಸಿದ್ದರು. ಚಾಕ್ಲೇಟ್ ನೀಡುವ ನೆಪ ಹೂಡಿಸಿ ಮಗುವನ್ನು ಕರೆದುಕೊಂಡು ಬಂದು ಹತ್ಯೆ ಮಾಡಿ ನದಿಗೆ ಎಸೆದಿದ್ದಾರೆ. ಮಗು ಕಾಣೆಯಾದ ವಿಷಯ ತಿಳಿದ ಸಂಬಂಧಿಕರು ಶಾಹು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬುಧವಾರ ಮುಂಜಾನೆ ಕೇಮ್ಕಾರ್ ಚೌಕ್ ಬಳಿಯ ಮಾಹಿಮ್-ಸಿಯಾನ್ ಕ್ರೀಕ್ ಲಿಂಕ್ ರಸ್ತೆಯಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಮಗುವಿನ ಶವ ಪತ್ತೆಗತ್ತೆಯಾಗಿದ್ದು. ಮಗುವಿನ ತಲೆ ಮತ್ತು ಬಲ ಮಣಿಕಟ್ಟಿನಲ್ಲಿ ಗಾಯದ ಗುರುತುಗಳಿದ್ದವು. ತಕ್ಷಣಕ್ಕೆ ಮಗು ಯಾರೆಂದು ಪತ್ತೆ ಹಚ್ಚಲು ಕಷ್ಟವಾಗಿದ್ದು, ಸಂಬಂಧಿಕರಿಗೆ ತೋರಿಸಿದ ನಂತರ ಗುರುತು ಹಿಡಿದಿದ್ದಾರೆ.
ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.