
ಮೈಸೂರು: ಏ.24 ಪರೀಕ್ಷಾ ಶುಲ್ಕ ಪಾವತಿಸಲು ಕಡೆಯ ದಿನ.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2018-19ನೇ ಶೈಕ್ಷಣಿಕ ಸಾಲಿನಿಂದ 2021-22ನೇ ಶೈಕ್ಷಣಿಕ ಸಾಲಿನವರೆಗೆ (ಜುಲೈ/ಜನವಲ ಆವೃತ್ತಿ) ಹಾಗೂ 2022-23ನೇ ಸಾಲಿನಲ್ಲಿ (ಜುಲೈ ಆವೃತ್ತಿಯ) ಪ್ರವೇಶಾತಿ ಪಡೆದಿರುವ ಸ್ನಾತಕ (UG) ಮತ್ತು ಸ್ನಾತಕೋತ್ತರ (PG) ಪದವಿಯ ವಿದ್ಯಾರ್ಥಿಗಳಿಗೆ ಮೇ / ಜೂನ್ -2023 ರ ಮಾಹೆಗಳಲ್ಲಿ ನಡೆಯುವ ಸೆಮಿಸ್ಟರ್ ಪರೀಕ್ಷೆಗಳಿಗೆ ಪರೀಕ್ಷಾ ಶುಲ್ಕವನ್ನು ಅಂತರ್ಜಾಲದ (Online) ಮೂಲಕ ಪಾವತಿಸಲು ಅಧಿಸೂಚನೆಗಳನ್ನು ಹೊರಡಿಸಲಾಗಿದ್ದು ಪರೀಕ್ಷಾ ಶುಲ್ಕವನ್ನು ಪಾವತಿಸಲು ಏ.24 ಕಡೆಯ ದಿನಾಂಕವಾಗಿದ್ದು, ಏ. 3 ರ ವರೆಗೆ ರೂ.200 ದಂಡ ಶುಲ್ಕದೊಂದಿಗೆ ಪರೀಕ್ಷಾ ಶುಲ್ಕವನ್ನು ಪಾವತಿಸಬಹುದು.

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‌ಸೈಟ್ www.ksoumysuru.ac.in ವೀಕ್ಷಿಸಬಹಕದು ಹಾಗೂ ಯೂಟ್ಯೂಬ್ ಚಾನಲ್ ಆದ “KSOU DRUSHYAVAHINI” ನಲ್ಲಿಯು ಮಾಹಿತಿ ಲಭ್ಯವಿರುತ್ತದೆ ಮತ್ತು ದೂ.ಸಂ: 8800335638 ನ್ನು ಸಂಪರ್ಕಿಸಬಹುದು ಎಂದು ಪರೀಕ್ಷಾಂಗ ವಿಭಾಗದ ಕುಲ ಸಚಿವರಾದ ಪ್ರೊ. ಪ್ರವೀಣ ಕೆ ಬಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.