“ಕಾಗೋಡು ಚಳುವಳಿಯ ರೂವಾರಿ ಡಾ॥ ಹೆಚ್.ಗಣಪತಿಯಪ್ಪ”ನವರ ಸಮಾಧಿ ಸ್ಥಳಕ್ಕೆ ಸಾಗರ ತಾಲೂಕು ವಡ್ನಾಲ ಗ್ರಾಮಸ್ಥರು ಮತ್ತು ರೈತ ಸಂಘದ ಪದಾಧಿಕಾರಿಗಳು ಪುಷ್ಪ ನಮನವನ್ನು ಸಲ್ಲಿಸಿದರು.

75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ “ರಾಜ್ಯದ ಪ್ರಥಮ ರೈತ ಸಂಘದ ಸಂಸ್ಥಾಪಕ ಕಾಗೋಡು ಚಳುವಳಿಯ ರೂವಾರಿ ಡಾ॥ ಹೆಚ್.ಗಣಪತಿಯಪ್ಪ”ನವರ ಸಮಾಧಿ ಸ್ಥಳಕ್ಕೆ ಸಾಗರ ತಾಲೂಕು ವಡ್ನಾಲ ಗ್ರಾಮಸ್ಥರು ಮತ್ತು ರೈತ ಸಂಘದ ಪದಾಧಿಕಾರಿಗಳು ಪುಷ್ಪ ನಮನವನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪುಷ್ಪ ನಮನವನ್ನು ಸಲ್ಲಿಸಿ ಮಾತನಾಡಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಣಪತಿ ವಡ್ನಾಲ ಮಾತನಾಡಿ ಎಚ್ ಗಣಪತಿಯಪ್ಪನವರು ಸ್ವಾತಂತ್ರ್ಯ ಹೋರಾಟದ ಜೊತೆಯಲ್ಲಿ ಒಡೆಯರ ಹೊಲಗಳಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ರಾಜ್ಯಾದ್ಯಂತ ಗೇಣಿ ರೈತರಿಗೆ ಭೂ ಮಾಲೀಕತ್ವದ ಹಕ್ಕನ್ನು ದೊರಕಿಸಿ ಕೊಟ್ಟದ್ದು ನಿಜವಾದ ಸ್ವಾತಂತ್ರ್ಯ.

ಅವರು ನಮ್ಮೂರಿನವರು ಎಂಬುದು ನಮಗೆ ಇನ್ನೊಂದು ಹೆಮ್ಮೆ ಹಾಗಾಗಿ ಇಂದಿನ ಯುವಕರಿಗೆ ಅವರ ಹೋರಾಟದ ದಾರಿ ಮಾದರಿಯಾಗಿದೆ, ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಡ್ನಾಲ ಊರಿನ ಗ್ರಾಮಸ್ಥರು ರೈತ ಸಂಘದ ಸದಸ್ಯರು ಹಾಜರಿದ್ದರು.

ವರದಿ: ಸಿಂಚನಾ ಜಯಂತ್ ಬಲೇಗರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *