
ಮುಂಬೈ: ಕ್ರಿಕೆಟ್ ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ.
2007ರ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಹೀರೋ ಆಲ್ ರೌಂಡರ್ ಜೋಗಿಂದರ್ ಶರ್ಮಾ ಅವರು ಇಂದು ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. 39 ವರ್ಷದ ಜೋಗಿಂದರ್ ಶರ್ಮಾ ಅವರು ಎಲ್ಲಾ ಮಾದರಿ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದಾರೆ.
ಹರಿಯಾಣದ ಮಧ್ಯಮ ವೇಗ ಜೋಗಿಂದರ್ ಈಗ ಹರಿಯಾಣ ಪೊಲೀಸ್ ನಲ್ಲಿ ಡಿಎಸ್ ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೊನೆಯದಾಗಿ 2017 ರಲ್ಲಿ ಪ್ರಥಮ ದರ್ಜೆ ಪಂದ್ಯವನ್ನು ಆಡಿದ್ದ ಅವರು ಅಧಿಕೃತವಾಗಿ ಕ್ರೀಡೆಯಿಂದ ನಿವೃತ್ತಿ ಹೊಂದಿರಲಿಲ್ಲ.
2011 ರಲ್ಲಿ ಕಾರು ಅಪಘಾತ ಜೋಗಿಂದರ್ ಅವರ ವೃತ್ತಿಜೀವನವನ್ನು ಬಹುತೇಕ ಹಾಳುಮಾಡಿತ್ತ. ಅವರು 2012-13 ಋತುವಿನಲ್ಲಿ ಪುನರಾಗಮನ ಮಾಡಿದ ಅವರು. ಕೆಲವು ಋತುಗಳ ನಂತರ ಅವರು ಕ್ರಿಕೆಟ್ ಆಡುವುದನ್ನು ನಿಲ್ಲಿಸಿದರು, ಬಳಿಕ ಅವರ ಪೊಲೀಸ್ ಕೆಲಸಕ್ಕೆ ಆದ್ಯತೆ ನೀಡಲು ಪ್ರಾರಂಭಿಸಿದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.