ನ್ಯಾಯ ನೀತಿ ಧರ್ಮದ ಕಾಯಕರು ರೇಣುಕಾಚಾರ್ಯರು.

ಮೈಸೂರು: ನ್ಯಾಯ ನೀತಿ ಧರ್ಮದ ಕಾಯಕರು ರೇಣುಕಾಚಾರ್ಯರು – ಎಲ್ ನಾಗೇಂದ್ರ

ನ್ಯಾಯ ನೀತಿ ಧರ್ಮದ ಕಾರ್ಯವನ್ನು ನಡೆಸಿಕೊಂಡು ಬಂದವರು ರೇಣುಕಾಚಾರ್ಯರು ಅವರು ನಡೆದು ಬಂದ ದಾರಿಯು ಅನುಸರಿಸಿದ ವೀರಶೈವ ಸಮಾಜವು ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡುತ್ತಿದೆ ಎಂದು ಚಾಮರಾಜ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಎಲ್ ನಾಗೇಂದ್ರರವರು ತಿಳಿಸಿದರು. ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಹಮ್ಮಿಕೊಂಡಿದ್ದ, ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ಸಮಾಜದ ಬೆಳವಣಿಗೆಗೆ ಶ್ರಮಿಸಿ ಬೇರೆ ಬೇರೆ ದೇಶಗಳಲ್ಲಿ ಶಿವಲಿಂಗವನ್ನು ಸ್ಥಾಪಿಸಿ ವೀರಶೈವ ಧರ್ಮದ ಬಗ್ಗೆ ಅಪಾರವಾದ ಪ್ರಚಾರವನ್ನು ನೀಡಿದವರು ರೇಣುಕಾಚಾರ್ಯರು. ಧರ್ಮ ತತ್ವಗಳು ಅವರ ಉಪಾಸನಗಳಿಂದಲೇ ಹೆಚ್ಚಿನ ಪ್ರಭಾವವನ್ನು ಬೀರಿದ್ದರು ಎಂದರು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಅರಮನೆ ಜಪದಕಟ್ಟೆ ಮಠದ ಶಿವಾಚಾರ್ಯ ಸ್ವಾಮಿಗಳಾದ ಡಾ. ಮುಮ್ಮದಿ ಚಂದ್ರಶೇಖರ್ ಅವರು ಮಾತನಾಡಿ,ದ್ವೇಷ ಸಾಧಿಸುವವ ಜಂಗಮನಲ್ಲ, ಕರುಣಾಮಯಿ, ಪರೋಪಕಾರಿ, ಸಮಾಜಸೇವಕನಾಗಿ ಜಂಗಮನೆನಿಸಿಕೊಳ್ಳುತ್ತಾನೆ. ಎಲ್ಲ ಸಮಾಜದ ನೆರವನ್ನು ಪಡೆದು ಸದೃಢವಾಗಿ ಬೆಳೆಯಬೇಕು. ಮಕ್ಕಳಿಗೆ ಪಂಚಪೀಠಗಳು, ಪಂಚಾಚಾರ್ಯರು, ಪಂಚಬಣ್ಣಗಳ ಬಗ್ಗೆ ತಿಳುವಳಿಕೆ ನೀಡಿ. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರನ್ನು ನಮ್ಮ ಮಠಕ್ಕೆ ಕಳುಹಿಸಿ ಅವರಿಗೆ ಬದುಕಿನ ಮಾರ್ಗಗಳನ್ನು ಕಲಿಸಿಕೊಡಲಾಗುವುದು. ಜಂಗಮರೆನ್ನಿಸಿಕೊಂಡ ನಮಗೆ ಸಮಾಜವನ್ನು ಕಟ್ಟಿ ಬೆಳೆಸುವ ದೊಡ್ಡ ಜವಾಬ್ದಾರಿ ಇದೆ. ಜಂಗಮಕುಲಕ್ಕೆ ಜೋಳಿಗೆ ಕಾಯಕವನ್ನು ಕೊಟ್ಟ ಮೂಲಪುರುಷ ರೇಣುಕಾಚಾರ್ಯರು, ಅಗಸ್ತ್ಯ ಮುನಿಗೆ ಶಿವಸಿದ್ಧಾಂತವನ್ನು ಬೋಧಿಸಿದ್ದರು. ಅವರು ವೀರಶೈವ ಧರ್ಮ ಉದ್ಧಾರಕರು ಎಂದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಮಹಾಪೌರರಾದ ಶಿವಕುಮಾರ್, ಮಾಜಿ ಅಧ್ಯಕ್ಷರಾದ ಹೆಚ್.ವಿ ರಾಜೀವ್, ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆಯ ಅಧ್ಯಕ್ಷರಾದ ರಘು ಕೌಟಿಲ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ ಎಂ.ಡಿ. ಸುದರ್ಶನ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ಗೋವಿಂದರಾಜು ಹಾಗೂ ಮಹಾನಗರ ಪಾಲಿಕೆಯ ಸದಸ್ಯರಾದ ಜಗದೀಶ್ ಹಾಗೂ ವೀರಶೈವ ಲಿಂಗಾಯಿತ ಸಮಾಜದ ಮುಖಂಡರು ಉಪಸ್ಥಿತರಿದ್ದರು.

-ನಂದಿನಿ ಮೈಸೂರು.

Leave a Reply

Your email address will not be published. Required fields are marked *