ಜಮ್ಮುಕಾಶ್ಮೀರ : ಜಮ್ಮುವಿನ ದೋಡಾದಲ್ಲೂ ಭೂ ಕುಸಿತದ ಭೀತಿ: ಅತಂಕದಲ್ಲಿ ಗ್ರಾಮಸ್ಥರು.
ಜಮ್ಮುವಿನ ದೋಡಾ ಜಿಲ್ಲೆಯಲ್ಲಿ ಭೂ ಕುಸಿತದ ಲಕ್ಷಣಗಳೂ ಗೋಚರಿಸುತ್ತಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಹಿಂದೆ ಉತ್ತರಾಖಂಡದ ಜೋಷಿಮಠದಲ್ಲಿ ಇಂತಹ ಘಟನೆ ನಡೆದು ಒಟ್ಟು 500 ರಷ್ಟು ಕುಟುಂಬಗಳನ್ನು ಸರಕಾರ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿತ್ತು. ದೋಡಾ ಜಿಲ್ಲೆಯ ಮನೆಯೊಂದರಲ್ಲಿ ಡಿಸೆಂಬರ್ ತಿಂಗಳಿಂದ ಬಿರುಕುಗಳು ಕಾಣಿಸಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಇತರ 6 ಕಟ್ಟಡಗಳಲ್ಲೂ ಬಿರುಕು ಕಾಣಿಸಿಕೊಂಡಿದ್ದು ದೊಡ್ಡದಾಗುತ್ತಿವೆ. ಈ ಪ್ರದೇಶವು ಕುಸಿಯುತ್ತಿದೆ. ಈ ಸಂದರ್ಭ ಸರಕಾರವು ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಒದಗಿಸಲಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ. ಒಟ್ಟು 21 ಮನೆಗಳು, ಮತ್ತೊಂದು ಮದರಸಾ ಕುಸಿದಿದೆ ಎನ್ನಲಾಗಿದೆ.
ವರದಿ: ಸಿಂಚನ ಕೆ
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.