
ಲೋಹದ ಹಕ್ಕಿಗಳ ಮುಖಾಮುಖಿ| ಕೂದಲೆಳೆ ಅಂತರದಲ್ಲಿ ತಪ್ಪಿದ ಮಹಾದುರಂತ.
ಏರ್ ಇಂಡಿಯಾ ಹಾಗೂ ನೇಪಾಳ ಏರ್‌ಲೈನ್ಸ್ ಕೂದಲೆಳೆಯುವ ಅಂತರದಲ್ಲಿ ಅಪಘಾತದಿಂದ ಬಚಾವ್ ಆಗಿದೆ. ದೆಹಲಿಯಿಂದ ನೇಪಾಳ ರಾಜಧಾನಿ ಕಾಠ್ಮಂಡುವಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಾಗೂ ಮೇಲಿಷಿಯಾದ ಕೌಲಾಲಾಂಪುರದಿಂ ಕಾಠ್ಮಂಡುವಿನಿಂದ ಆಗಮಿಸುತ್ತಿದ್ದ ವಿಮಾನಏರ್ ಇಂಡಿಯಾ ವಿಮಾನ ಒಂದೇ ಸಮನೇ 19,000 ಅಡಿ ಎತ್ತರಕ್ಕೆ ಹಾರಿದರೆ, ನೇಪಾಳ ಏರ್‌ಲೈನ್ಸ್ 15,000 ಅಡಿ ಕೆಳಕ್ಕೆ ಹಾರಾಟ ನಡೆಸಿ ಅಪಘಾತ ತಪ್ಪಿಸಲಾಗಿದೆ. ಪ್ರಯಾಣದ ನಡುವೆ ಏರ್ ಇಂಡಿಯಾ ಹಾಗೂ ನೇಪಾಳ ಏರ್‌ಲೈನ್ಸ್ ಪೈಲೆಟ್‌ಗೆ ವಾರ್ನಿಂಗ್ ಬಂದಿದೆ.

ಎರಡೂ ವಿಮಾನಗಳು ಕಾಕ್‌ಪಿಟ್‌ಗೆ ವಾರ್ನಿಂಗ್ ಸಂದೇಶ ನೀಡಿದೆ. ಹೀಗಾಗಿ ಪೈಲೆಟ್‌ಗಳು ಅಪಘಾತ ತಪ್ಪಿಸಿದ್ದಾರೆ. ನೇಪಾಳ ಕಂಟ್ರೋಲ್ ರೂಂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ ಕಾರಣ ಈ ಘಟನೆಗೆ ಕಾರಣವಾಗಿದೆ. ಒಂದೇ ದಾರಿಯ ವಿರುದ್ಧ ದಿಕ್ಕಿನಲ್ಲಿ ಮತ್ತೊಂದು ವಿಮಾನ ಬರುತ್ತಿರುವುದನ್ನು ರೇಡಾರ್ ಪತ್ತೆ ಹಚ್ಚಿದೆ. ಹೀಗಾಗಿ ಅಲರ್ಟ್ ಸಂದೇಶ ಪಡೆದ ಕೆಲವೇ ಸೆಕೆಂಡ್‌ಗಳಲ್ಲಿ ಪೈಲೆಟ್ಸ್ ಚಾಣಾಕ್ಷ ನಡೆ ಮೂಲಕ ದುರಂತ ತಪ್ಪಿಸಲಾಗಿದೆ. ನೇಪಾಳ ಕಂಟ್ರೋಲ್ ರೂಂ ಅಧಿಕಾರಿಗಳ ನಿರ್ಲಕ್ಷ್ಯ ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ ಮೂವರನ್ನು ಅಮಾನತು ಮಾಡಲಾಗಿದೆ. ಇಷ್ಟೇ ಅಲ್ಲ ಘಟನೆಯ ತನಿಖೆಗೆ ಆದೇಶಿಸಿದೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655.