ಮಡಿಕೇರಿ : ಬೃಹತ್ ಗಾತ್ರದ ಎರಡು ತಲೆ ಹಾವಿನ ಅಕ್ರಮ ಸಾಗಾಟ : ಇಬ್ಬರ ಬಂಧನ.
ಬೃಹತ್ ಗಾತ್ರದ ಎರಡು ತಲೆಯ ಜೀವಂತ ಹಾವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಳ್ಳೇಗಾಲದ ಅರಣ್ಯ ಪೊಲೀಸ್ ದಳ ಬಂಧಿಸಿದೆ.
ತಾಲ್ಲೂಕಿನ ಜಾಗೇರಿ ಸಮೀಪ ಹಾವನ್ನು ಮಾರಾಟ ಮಾಡಲು ತೆರಳುತ್ತಿದ್ದಾಗ ಅಧಿಕಾರಿಗಳು ದಾಳಿ ನಡೆಸಿದರು. ಕೊಪ್ಪಳ ಜಿಲ್ಲೆಯ ಅಬ್ಬಿಗೇರಿ ಗ್ರಾಮದ ಬಸವರಾಜು (36) ಹಾಗೂ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ಹನುಮಂತ (38) ಬಂಧಿತ ಆರೋಪಿಗಳು. ಇವರ ಬಳಿಯಿಂದ ಹಾವು ಮತ್ತು ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.