ರಾಜಸ್ಥಾನ: ಸಿಡಿಲು ಬಡಿದು ಹಿಂದುಸ್ಥಾನ್ ಜಿಂಕ್ ಕಾರ್ಖಾನೆ ಆಸಿಡ್ ಟ್ಯಾಂಕ್ ಸ್ಫೋಟ
ರಾಜಸ್ಥಾನದ ಚಿತ್ತೋರ್ ಗಢ ಜಿಲ್ಲೆಯ ಹಿಂದುಸ್ತಾನ್ ಜಿಂಕ್ ಕಾರ್ಖಾನೆಯಲ್ಲಿ ಸಿಡಿಲು ಬಡಿದು ಆಸಿಡ್ ಟ್ಯಾಂಕ್ ಸ್ಫೋಟ ಗೊಂಡ ಪರಿಣಾಮ ವ್ಯಕ್ತಿ ಒಬ್ಬ ಸುಟ್ಟು ಕರಕಲಾಗಿದ್ದು 9 ಮಂದಿ ಗಾಯಗೊಂಡಿದ್ದಾರೆ,ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡ ಉದ್ಯೋಗಿಗಳನ್ನು ತಕ್ಷಣವೇ ಚಿತ್ತೋರ್ ಗಢದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದ್ದು ,ಅಲ್ಲಿ ಒಬ್ಬರು ಚಿಕಿತ್ಸೆ ಪಲಕಾರಿಯಾಗದೆ ಸಾವನಪ್ಪಿದ್ದಾರೆ .ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಇತರ ಒಂಬತ್ತು ಮಂದಿಯನ್ನು ಚಿಕಿತ್ಸೆಗಾಗಿ ಉದಯಪುರಕ್ಕೆ ಕಳಿಸಲಾಗಿದೆ.ಮೃತರ ಗುರುತು ಪತ್ತೆಗೆ ಪ್ರಯತ್ನ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ವರದಿ: ಸಿಂಚನ ಜೆ ಬಲೆಗಾರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.