ಹುಬ್ಬಳ್ಳಿ: ಅತಿವೃಷ್ಟಿಯಿಂದ ಅಪಾರ ಬೆಳೆ ನಾಶ.
ಹುಬ್ಬಳ್ಳಿ ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಕೇಂದ್ರ ಸರ್ಕಾರದ ಅಂತರ್ ಸಚಿವಾಲಯ ಅಧ್ಯಯನ ತಂಡವು ವಿವಿಧ ಪ್ರದೇಶಕ್ಕೆ ಭೇಟಿ ನೀಡಿ ಗುರುವಾರ ಪರಿಶೀಲನೆ ನಡೆಸಿದರು.
ತಾಲೂಕಿನ ಕಿರೇಸೂರು ಗ್ರಾಮದ ಲಿಂಗನಗೌಡ ರಾಯನಗೌಡ ಅವರ ಒಂದು ಎಕರೆ ಹತ್ತಿ ಜಮೀನು ಹಾಗೂ ಒಂದು ಎಕರೆ ಹೆಸರು ಪ್ರದೇಶ ವೀಕ್ಷಣೆ ಮಾಡಿದರು. ಸಿಎಂ ಹುಲಿಕಟ್ಟಿ ಅವರು ಉದ್ದಿನ ಜಮೀನು ವೀಕ್ಷಿಸಿದರು. ಪ್ರವೀಣ್ ಕಮಡೋಳಿ ಈರುಳ್ಳಿ ಜಮೀನ ವೀಕ್ಷಣೆ ಮಾಡಿದರು.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಅತಿವೃಷ್ಟಿ ಹಾನಿಯ ಅಧ್ಯಯನಕ್ಕಾಗಿ ಕೇಂದ್ರ ಸರ್ಕಾರದ ಅಂತರ್ ಸಚಿವಾಲಯ ಅಧ್ಯಯನ ತಂಡವು ಭೇಟಿ ನೀಡಿ ಜಿಲ್ಲೆಯ ಅಪಾರ ಪ್ರಮಾಣದಲ್ಲಿ ನವಲಗುಂದ ಹಾಗೂ ಅಣಿಗೇರಿ ತಾಲೂಕಿನಲ್ಲಿ ಪ್ರವಾಹ ಮತ್ತು ಅತಿವೃಷ್ಟಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಜಿಲ್ಲಾಡಳಿತದಿಂದ ಪರಿಶೀಲಿಸಿ ವರದಿ ತಯಾರಿಸಲಾಗಿದೆ. ಈ ತಂಡ ಆ ವರದಿ ಹಾಗೂ ಅವರು ಸ್ವತಃ ಹಲವಾರು ಪ್ರದೇಶಕ್ಕೆ ಬೀಟಿ ನೀಡಿ ವೀಕ್ಷಣೆ ಕೇಂದ್ರಕ್ಕೆ ವರದಿ ಸಲ್ಲಿಸುವರು ಎಂದರು.
ಕೇಂದ್ರ ಜಲ ಶಕ್ತಿ ಸಚಿವಾಲಯ ನಿರ್ದೇಶಕ ಅಶೋಕ್ ಕುಮಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಮಂತ್ರಾಲಯದ ಅಧೀಕ್ಷಕ ಇಂಜಿನಿಯರ್ ವಿ.ವಿ. ಶಾಸ್ತ್ರಿ, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಲಹೆಗಾರ ಡಾ. ಜಿ .ಎಸ್. ಶ್ರೀನಿವಾಸ್ ರೆಡ್ಡಿ ಇದ್ದರು.
ವರದಿ : ಸಿಂಚನ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.