ಶಿವಮೊಗ್ಗ: ಗಲಭೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಹಾಗೂ ಕಾಂಗ್ರೆಸ್ ಪಕ್ಷದ ಪಾಲಿಕೆ ಸದಸ್ಯರು.
ಶಿವಮೊಗ್ಗದಲ್ಲಿ ನಿನ್ನೆ ಹಲ್ಲೆಗೊಳಗಾದ ಅಮಾಯಕ ಪ್ರೇಮ್ ಸಿಂಗ್ ಮತ್ತು ಸದ್ದಾಂ ಎಂಬ ಯುವಕರನ್ನು ಇಂದು ಶಿವಮೊಗ್ಗ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಮತ್ತು ಪಾಲಿಕೆಯ ಕಾಂಗ್ರೆಸ್ ಪಕ್ಷದ ಸದಸ್ಯರು ಮೆಗನ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ ,ಮೆಗನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ಶ್ರೀಧರ್ ಅವರ ಬಳಿ ಯುವಕರ ಆರೋಗ್ಯದ ಮಾಹಿತಿಯನ್ನು ಪಡೆದು ನಂತರ ಆ ಯುವಕರಿಗೆ ನಿಮ್ಮೊಂದಿಗೆ ಹಾಗೂ ನಿಮ್ಮ ಕುಟುಂಬದವರೊಂದಿಗೆ ನಾವು ಇದ್ದೇವೆ ಎಂದು ಆತ್ಮಸ್ಥೈರ್ಯವನ್ನು ತಿಳಿಸಿದರು
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಬಿ.ಎ ರಮೇಶ್ ಹೆಗ್ಡೆ, ಮುಖಂಡರಾದ ಕೆ ರಂಗನಾಥ್ ,ರಂಗೇಗೌಡ ಜಿಲ್ಲಾ ಯುವ ಕಾಂಗ್ರೆಸ್ ನ ಅಧ್ಯಕ್ಷ ಹೆಚ್.ಪಿ. ಗಿರೀಶ್ , ಶಿವಮೊಗ್ಗ ನಗರ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಎಸ್ ಕುಮಾರೇಶ್ ಇತರರು ಇದ್ದರು.
ವರದಿ: ಸಿಸಿಲ್ ಸೋಮನ್ (C E O – HIND SAMACHAR)
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.