“ತ್ರಿವರ್ಣ ಬಣ್ಣದಿಂದ ಕಂಗೊಳಿಸುತ್ತಿರುವ ವಿಶ್ವ ಸ್ಮಾರಕ”

ಹಂಪಿ: “ತ್ರಿವರ್ಣ ಬಣ್ಣದಿಂದ ಕಂಗೊಳಿಸುತ್ತಿರುವ ವಿಶ್ವ ಸ್ಮಾರಕ”

ಹಂಪಿ: “ತ್ರಿವರ್ಣ ಬಣ್ಣದಿಂದ ಕಂಗೊಳಿಸುತ್ತಿರುವ ವಿಶ್ವ ಸ್ಮಾರಕ” ದೇಶ ಸ್ವತಂತ್ರದ ಅಮೃತ ಮಹೋತ್ಸವದ ಸಂದರ್ಭ ರಾಜ್ಯದ ಹಲವು ಐತಿಹಾಸಿಕ ಸ್ಮಾರಕಗಳು ತ್ರಿವರ್ಣ ಬಣ್ಣದಿಂದ ಅಲಂಕೃತಗೊಳ್ಳಲಿದೆ. ಚಾರಿತ್ರಿಕ ವಿಜಯನಗರದ ರಾಜಧಾನಿ ಹಂಪಿಯ ಸ್ಮಾರಕಗಳು ಸೋಮವಾರ ರಾತ್ರಿಯಂದು ಬೆಳಕಿನಿಂದ ಕಂಗೊಳಿಸುತ್ತೇವೆ. ಮೂರು ಬಣ್ಣದ ಬೆಳಕಿನ ಕಿರಣಗಳು ಪ್ರಾಚೀನ ನಗರಿ ಹಂಪಿಯ ಸ್ಮಾರಕಗಳಿಗೆ ವಿಶೇಷ ಮೆರಗು ನೀಡಿದವು ಸ್ವತಂತ್ರ ಮಹೋತ್ಸವದ ಶುಭ ಸಂದರ್ಭ ” ಹರ್ ಘರ್ ತಿರಂಗ್” ಅಭಿಯಾನವು ಪ್ರಾರಂಭಗೊಳ್ಳಲಿದ್ದು, ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಅಭಿಯಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡಿದೆ .ದೇಶದ ಹಲವು ರಾಜ್ಯಗಳಲ್ಲಿರುವ ಐತಿಹಾಸಿಕ ಸ್ಮಾರಕಗಳು ” ಕೇಸರಿ ಬಿಳಿ ಹಸಿರು “ಬಣ್ಣಗಳಿಂದ ಅಲಂಕೃತ ಗೊಳ್ಳಲಿವೆ. ಹಲವು ಪ್ರಾಚೀನ ಸ್ಮಾರಕಗಳಲ್ಲಿ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಗಳಾಗಿದ್ದು ಸ್ವತಂತ್ರ ದಿನದಂದು ತ್ರಿವರ್ಣ ಬಣ್ಣದಿಂದ ಎಲ್ಲ ಸ್ಮಾರಕಗಳನ್ನು ವಿಶೇಷವಾಗಿ ಅಲಂಕೃತಗೊಳಿಸುವುದು ಎಂಬ ಅಧಿಕೃತ ಮಾಹಿತಿ ಇದೆ. ದೆಹಲಿಯ ಕೆಂಪುಕೋಟೆ, ತಮಿಳುನಾಡಿನ ಮಹಾಬಲಪುರಂ, ಒಡಿಸ್ಸಾದ ಕೋನಾರ್ಕ್ ಇಂತಹ ಐತಿಹಾಸಿಕ ಸ್ಮಾರಕಗಳಲ್ಲಿ ತ್ರಿವರ್ಣ ಬಣ್ಣವು ಅಲಂಕೃತಗೊಳ್ಳಲಿದೆ.

ವರದಿ: ಸಿಸಿಲ್ ಸೋಮನ್ (C E O – HIND SAMACHAR)

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *