ಹಳಿಯಾಳ: ಹಳಿಯಾಳದಿಂದ ಬೀದಿನಾಯಿಗಳನ್ನು ಯಲ್ಲಾಪುರಕ್ಕೆ ಸಾಗಿಸಿರುವ ಅಧಿಕಾರಿಗಳು.
ಹಳಿಯಾಳ ಪಟ್ಟಣದಲ್ಲಿ ಬೀದಿ ನಾಯಿಗಳನ್ನು ಯಲ್ಲಾಪುರ ಪಟ್ಟಣದ ಸಮೀಪ ಹಳಿಯಾಳ ಕ್ರಾಸ್ ಬಳಿ ಗುರುವಾರ ಹಳಿಯಾಳ ಪುರಸಭೆ ಯ ಕಾಮಿ೯ಕರು ತಂದು ಬಿಟ್ಟಿದ್ದಾರೆ.
ಸುಮಾರು 80ರಿಂದ100 ರಷ್ಟು ಬೀದಿ ನಾಯಿಗಳನ್ನು ಟಾಟಾ ಎಸ್ ವಾಹನದಲ್ಲಿ ತುಂಬಿಕೊಂಡು ರಾಷ್ಟ್ರೀಯ ಹೆದ್ದಾರಿ ಹಳಿಯಾಳ ಕ್ರಾಸ್ ಸಮೀಪದ ಒಳ ರಸ್ತೆಯಲ್ಲಿ ಬಿಟ್ಟು ತೆರಳಿದ್ದಾರೆ. ಈ ಕುರಿತು ಹಳಿಯಾಳದಲ್ಲಿ ಬೀದಿನಾಯಿಗಳನ್ನು ಹಿಂಸಾತ್ಮಕವಾಗಿ ಅರಣ್ಯಕ್ಕೆ ಸ್ಥಳಾಂತರ ಮಾಡಿರುವ ಪುರಸಭೆ ವಿರುದ್ದ ಜನರು ಆಕ್ರೋಶ ಹೊರ ಹಾಕಿ ದೂರು ದಾಖಲಿಸಿದ್ದಾರೆ.
ಹಳಿಯಾಳ ಪಟ್ಟಣದಲ್ಲಿ ಬೀದಿ ನಾಯಿಗಳನ್ನು ಕಾಡಿನಲ್ಲಿ ಬಿಟ್ಟಿರುವ ಕುರಿತು ಹಳಿಯಾಳ ಪಶು ಅಸ್ಪತ್ರೆಯ ವೈದ್ಯಾಧಿಕಾರಿಗಳಿ ಪುರಸಭೆ ಅತ್ಯಂತ ಕ್ರೂರವಾಗಿ ನಾಯಿಗಳನ್ನು ಅರಣ್ಯಕ್ಕೆ ಸಾಗಿಸಿರುವ ಕುರಿತು ಸ್ಪಷ್ಟನೆ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ವರದಿ:ಸಿಂಚನಾ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.