
ಎಚ್.ಡಿ.ಕೋಟೆ: ಈ ದಿನ ಬಿ.ಮಟ್ಟಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ದಲ್ಲಿ ಆರೋಗ್ಯ ಇಲಾಖೆ,ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ,ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ವತಿಯಿಂದ ಫೋಷಣ್ ಅಭಿಯಾನ 2022 ಕಾರ್ಯ ಕ್ರಮ ಹಾಗೂ ಶ್ರೀಮಂತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯ ಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ” ಟಿ.ರವಿಕುಮಾರ್ ರವರು ಅಧ್ಯಕ್ಷತೆಯನ್ನು ವಹಿಸಿದ್ದರು,ಈ ಕಾರ್ಯ ಕ್ರಮವನ್ನು ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ” ಟಿ.ರವಿಕುಮಾರ್, ಮಹಿಳಾ ಮತ್ತು ಶಿಶು ಅಭಿವೃದ್ಧಿ ಅಧಿಕಾರಿಗಳಾದ ಆಶಾ ರವರು, ವಿವೇಕಾನಂದ ಯೂತ್ ಮೂಮೆಂಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ” G.S ಕುಮಾರ್ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಗಳಾದ ಡಾ” ಚಂದ್ರ ಶೇಖರ್ , ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೂಪಬಾಯಿ, ಉಪಾಧ್ಯಕ್ಷರಾದ ದೇವದಾಸ್ ,ಪಿಡಿಒ ಭಾಗ್ಯ ರವರು ದೀಪ ಬೆಳಗುವುದರ ಮೂಲಕ ಕಾರ್ಯ ಕ್ರಮವನ್ನು ಉದ್ಘಾಟಿಸಿದರು.
ನಂತರ ತಾಲ್ಲೂಕು ಆರೋಗ್ಯಾಧಿಕಾರಿ ಗಳು ಮಾತನಾಡಿ ಪೋಷಣ್ ಅಭಿಯಾನವನ್ನು ರಾಷ್ಟ್ರಾದ್ಯಂತ ಸೆಪ್ಟೆಂಬರ್ ಮಾಹೆಯಲ್ಲಿ ನಡೆಸಲಾಗುತ್ತದೆ,ಈ ಕಾರ್ಯ ಕ್ರಮದ ಉದ್ದೇಶ, ಗರ್ಬಿಣಿಯರು, ಬಾಣಂತಿಯರು,ಮತ್ತು ಮಕ್ಕಳು ,ಸಮುದಾಯದ ಪ್ರತಿಯೊಬ್ಬರಿಗೂ ಪೋಷಕಾಂಶ ಯುಕ್ತ ಆಹಾರ ಸೇವನೆ ಬಗ್ಗೆ ಅರಿವು ಮೂಡಿಸಿ ಜನಸಾಮಾನ್ಯರ ಆರೋಗ್ಯ ಮಟ್ಟವನ್ನು ಉತ್ತಮ ಪಡಿಸುವುದು, ಹಾಗು ಪೋಷಕಾಂಶದ ಕೊರತೆಯಿಂದ ಗರ್ಭಿಣಿಯರು ಮತ್ತು ಮಕ್ಕಳು ರಕ್ತಹೀನತೆಯಿಂದ ಬಳಲಿ (ಅನಿಮಿಯಾ) ತಾಯಿ ಮರಣ ಶಿಶು ಮರಣವನ್ನು ತಪ್ಪಿಸುವುದು ಇದರ ಬಹುಮುಖ್ಯ ಉದ್ದೇಶವಾಗಿದೆ, ಈಗ ಹೆಚ್ಚು ಮಳೆ ಬರುವುದರಿಂದ ಹೆಚ್ಚು ಹೆಚ್ಚಾಗಿ ತರಕಾರಿ ಮತ್ತು ಸೋಪ್ಪುಗಳು ಹೆಚ್ಚಾಗಿ ಸಿಗುವುದರಿಂದ ಜನರು ಸ್ಥಳೀಯವಾಗಿ ಸಿಗುವ ಸೋಪ್ಪು ತರಕಾರಿ, ಮೋಳಕೆ ಕಾಳುಗಳನ್ನು ಸೇವಿಸಬೇಕು,ಇವುಗಳಿಂದ ಪ್ರೊಟೀನ್ , ವಿಟಮಿನ್,ಮಿನರಲ್ಸ್ ಗಳು ಸಿಗುತ್ತವೆ,ಆದ್ದುದರಿಂದ ಜನರು ಹೆಚ್ಚಾಗಿ ಸೇವಿಸಬೇಕು, ಅಂಗನವಾಡಿಯಲ್ಲಿ ಕೊಡುವ ಆಹಾರ ಪದಾರ್ಥವನ್ನು ಸೇವಿಸಬೇಕು ,ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಬೇಟಿ ಮಾಡುವಾಗ ಜನರಿಗೆ ಪೌಷ್ಟಿಕ ಆಹಾರದ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು,ತಾಯಿ ಮರಣ ಹಾಗೂ ಶಿಶು ಮರಣವನ್ನು ತಡೆಗಟ್ಟಬೇಕು,ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಗಳಾದ ಆಶಾ ರವರು ಮಾತನಾಡಿ ಮಗುವಿನ ಬೆಳವಣಿಗೆಯಲ್ಲಿ ತಾಯಿ ಅತಿ ಮುಖ್ಯ ಪಾತ್ರ ವಹಿಸಬೇಕು, ಆರು ತಿಂಗಳ ತನಕ ಎದೆಹಾಲನ್ನು ಬಿಟ್ಟು ಬೇರೇನು ಕುಡಿಸಬಾರದು,ಹಾಗೂ ತಿನ್ನಿಸಬಾರದು ಆರು ತಿಂಗಳ ನಂತರ ಎದೆ ಹಾಲಿನ ಜೊತೆಗೆ ಪೂರಕ ಆಹಾರವನ್ನು ಕೊಡಬೇಕು ಎಂದು ತಿಳಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ”ಚಂದ್ರ ಶೇಖರ್ ರವರು ಮಾತನಾಡಿ, ಗರ್ಭಿಣಿಯರು ಮತ್ತು ಜನರು ನೀವು ಬೆಳೆಯುವಂತಹ ಸೊಪ್ಪು ತರಕಾರಿ ಗಳನ್ನು ಹಣ್ಣುಗಳನ್ನೂ ಚೆನ್ನಾಗಿ ತಿನ್ನಬೇಕು ಎಂದು ತಿಳಿಸಿದರು . ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಮಾತನಾಡಿ ಜನರು ಮುಖ್ಯವಾಗಿ ಪೌಷ್ಟಿಕ ಆಹಾರವನ್ನು ಸೇವಿಸುವುದರಿಂದ ರಕ್ತ ಹೀನತೆ ಮತ್ತು ಷಯರೋಗವನ್ನು ತಡೆಗಟ್ಟ ಬಹುದು, ಹಾಗು ಶಾಲೆಗಳಲ್ಲಿ ಕೊಡುವ ಮೊಟ್ಟೆ ಮತ್ತು ಚಿಕ್ಕಿಗಳನ್ನು ಎಲ್ಲಾ ಮಕ್ಕಳು ಸೇವಿಸಬೇಕು ಎಂದು ತಿಳಿಸಿದರು, ನಂತರ ಹಾಡಿ ಜನರ ಗರ್ಭಿಣಿಯರಿಗೆ ಶ್ರೀಮಂತ ಕಾರ್ಯ ಕ್ರಮವನ್ನು ಮಾಡಲಾಗಿತ್ತು.ಈ ಕಾರ್ಯಕ್ರಮದಲ್ಲಿ, ಆರೋಗ್ಯ ಇಲಾಖೆ ಸಿಬ್ಬಂದಿಗಳಾದ ನಾಗರಾಜು, ರವಿರಾಜ್,ಉಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಿಬ್ಬಂದಿ ವರ್ಗದವರಾದ , ರಚಿತಾ, ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ , ಸಿಬ್ಬಂದಿ ವರ್ಗದವರಾದ ವೆಂಕಟಸ್ವಾಮಿ, ಚಿನ್ನ ಮಾದೇವ್ , ಜಯರಾಮ್ ದೇವರಾಜ್ ಸ್ವಾಮಿ, ವಿವೇಕಾನಂದ ಯೂತ್ ಮೂಮೆಂಟ್ ಸಿಬ್ಬಂದಿ ವರ್ಗದವರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಗರ್ಭಿಣಿಯರು, ಹಾಡಿ ಜನಾಂಗದ ಮಹಿಳೆಯರು ಹಾಜರಾಗಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.