
ಗ್ರೋ ಹೇರ್, ಗ್ಲೋ ಸ್ಕಿನ್ ಕೇಂದ್ರದ 42ನೇ ಕ್ಲಿನಿಕ್ ಇಂದು ಕಾರ್ಯಾರಂಭಿಸಿತು
ಮೈಸೂರಿನ ಕಾಳಿದಾಸ ರಸ್ತೆಯಲ್ಲಿ ಕೇಶ ಮತ್ತು ಚರ್ಮ ಸೌಂದರ್ಯ ವರ್ಧಕ ಚಿಕಿತ್ಸೆ ನೀಡುವ ಗ್ರೋ ಹೇರ್, ಗ್ಲೋ ಸ್ಕಿನ್ ಕೇಂದ್ರದ 42ನೇ ಕ್ಲಿನಿಕ್ ಇಂದು ಕಾರ್ಯಾರಂಭಿಸಿತು.
ನೂತನ ಚಿಕಿತ್ಸಾ ಕೇಂದ್ರವನ್ನು ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಜೆ. ಸರನ್ ವೇಲ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಕೆ. ಸರನ್ ವೇಲ್, ಗ್ಲೋ ಹೇರ್, ಗ್ಲೋ ಸ್ಕಿನ್ ಈಗಾಗಲೇ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾದ ಸೌಂದರ್ಯ ವರ್ಧಕ ಚಿಕಿತ್ದಾ ಕೇಂದ್ರವಾಗಿದೆ. ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ಸಂಸ್ಥೆಯ ಶಾಖೆಗಳಿವೆ. ಮೈಸೂರಿನಿಂದ 42ನೇ ಕ್ಲಿನಿಕ್ ಕಾರ್ಯಾರಂಭಿಸಿದೆ. ಸಂಸ್ಥೆಯು ಕೇಶ ಮತ್ತು ಚರ್ಮ ಸೌಂದರ್ಯ ಕುರಿತು ವಿಶೇಷ ಚಿಕಿತ್ಸೆ ನೀಡುವ ಕೇಂದ್ರವಾಗಿದೆ. ಇಲ್ಲಿ ಚಿಕಿತ್ಸೆ ಪಡೆದವರಿಗೆ ಇಲ್ಲಿಯ ವಿಭಿನ್ಬ ಕಾರ್ಯ ವಿಧಾನಗಳ ಅನುಭವಾಗಲಿದೆ. ಕೇಶ ಮತ್ತು ಚರ್ಮ ಸೌಂದರ್ಯಕ್ಕೆ ನಿಖರ ಚಿಕಿತ್ಸೆ ನೀಡಬಲ್ಲ ಪರಿಣಿತರು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರ ಸಮಸ್ಯೆಗಳನ್ನು ಆಳವಾಗಿ ಅಧ್ಯಯನ ಮಾಡಿದ ನಂತರವೇ ಚಿಕಿತ್ಸೆ ನೀಡುವುದು ವಿಶೇಷ ಎಂದು ಹೇಳಿದರು.
ಈ ಸಂದರ್ಭದಲ್ಲಿ ಫ್ರಾಂಚೈಸಿ ಪಾಲಜದಾರ ತಿರುಮೂರ್ತಿ ನಾರಾಯಣನ್, ಡಾ. ಕೌಶಿಕ್ ಮತ್ತಿತರರು ಹಾಜರಿದ್ದರು.
ವರದಿ :ನಂದಿನಿ ಮೈಸೂರು
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555