ಅಡಿಕೆ ಬೆಳೆಯಲ್ಲಿ ಕಂಡು ಬರುವ ರೋಗದ ಕುರಿತು ಚರ್ಚೆ ನಡೆಸಿದ – ಶಾಸಕರಾದ ಗೋಪಾಲಕೃಷ್ಣ ಬೇಲೂರು

ಅಡಿಕೆ ಬೆಳೆಯಲ್ಲಿ ಕಂಡು ಬರುವ ರೋಗದ ಕುರಿತು ಚರ್ಚೆ ನಡೆಸಿದ – ಶಾಸಕರಾದ ಗೋಪಾಲಕೃಷ್ಣ ಬೇಲೂರು

ಅಡಿಕೆ ಬೆಳೆಯಲ್ಲಿ ಕಂಡು ಬರುವ ಎಲೆ ಚುಕ್ಕೆ ಹಾಗೂ ಹಳದಿ ಎಲೆ ರೋಗದ ಕುರಿತು ಚರ್ಚಿಸಲು ಮಾನ್ಯ ತೋಟಗಾರಿಕೆ ನಿರ್ದೇಶಕರು, ಲಾಲ್‌ ಬಾಗ್ ಬೆಂಗಳೂರು ರವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ನಿರ್ದೇಶನಾಲಯದ ಕಿರು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ನಮ್ಮ ಶಾಸಕರಾದ ಶ್ರೀ ಗೋಪಾಲಕೃಷ್ಣ ಬೇಳೂರು ರವರು ಭಾಗಿಯಾಗಿ ತಜ್ಞರೊಂದಿಗೆ, ಪ್ರಗತಿ ಪರ ಅಡಿಕೆ ಬೆಳೆಗಾರರು ಹಾಗೂ ಸಂಬಂದಪಟ್ಟ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರುಗಳೊಂದಿಗೆ ಮಲೆನಾಡಿನೆಲ್ಲಡೆ ವ್ಯಾಪಕವಾಗಿ ಹರಡುತ್ತಿರುವ ಈ ಎಲೆ ಚುಕ್ಕೆ ರೋಗದ ಬಗ್ಗೆ ಹಾಗೂ ಅದರ ನಿಯಂತ್ರಣಾ ಕ್ರಮಗಳ ಬಗ್ಗೆ ಚರ್ಚಿಸಿದರು.

ಈ ಸಭೆಯಲ್ಲಿ ಜಂಟಿ ನಿರ್ದೇಶಕರಾದ ವಿಶ್ವನಾಥ್, ಕದಿರೇಶ್, ತೋಟಗಾರಿಕೆ ಇಲಾಖೆ ಸಚಿವರ ಆಪ್ತ ಕಾರ್ಯದರ್ಶಿ ವೇದಮೂರ್ತಿ, ಶಿವಮೊಗ್ಗದ ಡಿಡಿ ಪ್ರಕಾಶ್, ಸಾಗರ ಎಸ್.ಎ.ಡಿ.ಎಚ್ ಉಲ್ಲಾಸ್, ಹೊಸನಗರ ಪುಟ್ಟನಾಯ್ಕ್ , ಪುರುಷೋತ್ತಮ್ ಬೆಳ್ಳಕ್ಕಿ, ದೇವರಾಜ್ ಕಪದೂರು ಸೇರಿದಂತೆ ಅನೇಕ ಅಧಿಕಾರಿಗಳು ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಅನೇಕ ರೈತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *