
ಸಾಗರ: ಸಾಗರಕ್ಕೆ ರಾಕಿಂಗ್ ಸ್ಟಾರ್ ಆಗಿ ಎಂಟ್ರಿ ನೀಡಿದ ಗೋಪಾಲ ಕೃಷ್ಣ ಬೇಳೂರು.
ಇಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಗೊಂಡ ಗೋಪಾಲಕೃಷ್ಣ ಬೇಳೂರು ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅವರ ಅಭಿಮಾನಿ ಬಳಗದವರು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿ ಸಾಗರಕ್ಕೆ ಬರಮಾಡಿಕೊಂಡರು. ಸಾಗರಕ್ಕೆ ಬಂದ ಗೋಪಾಲ ಕೃಷ್ಣ ಬೇಳೂರು ಪ್ರಪ್ರಥಮವಾಗಿ ಸಾಗರದ ಶ್ರೀ ಗಣಪತಿ ದೇವಸ್ಥಾನಕ್ಕೆ ಭೇಟಿನೀಡಿದರು.

ಸಾಗರದ ಪ್ರಸಿದ್ಧ ಜಾಮಿಯಾ ಮಸೀದಿಯ ಸದಸ್ಯರು ಹಾಗೂ ಮುಸಲ್ಮಾನ್ ಬಾಂಧವರು ಹಾಗೂ ಗೋಪಾಲ ಕೃಷ್ಣ ಬೇಳೂರು ಅವರ ಅಭಿಮಾನಿಗಳು ಅವರನ್ನು ಜಾಮಿಯಾ ಮಸೀದಿಗೆ ಅವರನ್ನು ಆಹ್ವಾನಿಸಿ ಗೌರವಿಸಿದರು ಹಾಗೆ ಮುಂಬರುವ ಚುನಾವಣೆಗೆ ಅವರಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದರು.


ನಂತರ ಗಣಪತಿ ದೇವಸ್ಥಾನದಿಂದ ಹೋರಾಟ ಗೋಪಾಲ ಕೃಷ್ಣ ಬೇಳೂರು ಅವರು ಕಾಂಗ್ರೆಸ್ ಹಿರಿಯ ಮುಖಂಡರಾದ ಕಾಗೋಡು ತಿಮ್ಮಪ್ಪರವರ ನಿವಾಸಕ್ಕೆ ಬೇಟಿ ನೀಡಿ ಅವರ ಆಶೀರ್ವಾದವನ್ನು ಪಡೆದರು ಹಾಗೂ ಮುಂಬರುವ ಚುನಾವಣೆಯಲ್ಲಿ ಕಾಗೋಡು ತಿಮ್ಮಪ್ಪನವರ ಸಲಹೆ ಹಾಗೂ ಮಾರ್ಗದರ್ಶನದೊಂದಿಗೆ ಅವರನ್ನು ಬೆಂಬಲಿಸಲು ಕೋರಿದರು.

ಸಾಗರ ಕಾಂಗ್ರೆಸ್ ಕಚೇರಿಗೆ ಬೇಟಿ ನೀಡಿದ ಗೋಪಾಲ ಕೃಷ್ಣ ಬೇಳೂರು ಅವರನ್ನು ಕಾಂಗ್ರೆಸ್ ಹಿರಿಯ ಮುಖಂಡರಾದ ಬಿ. ಆರ್. ಜಯಂತ್, ಮೈಕಲ್, ಅಜೀಮ್, ದಿನೇಶ್, ಮನೋಜ್ ಕುಗ್ವೆ,ಮತ್ತಿತರ ನಾಯಕರು ಗೋಪಾಲ ಕೃಷ್ಣ ಬೇಳೂರು ಅವರನ್ನು ಬರಮಾಡಿಕೊಂಡರು. ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲ ಅವರಿಗೆ ಕೊಡುವುದಾಗಿ ಕಾರ್ಯಕರ್ತರು ಜಯಕಾರ ಹಾಕಿದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655.