ರಾಜ್ಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಕಾಯ್ದೆ ಜಾರಿಗೆ ಬರಲಿದ್ದು, ಈ ಸಂಬಂಧ ವಿದೇಯಕವು ಪ್ರಸಕ್ತ ಅಧಿವೇಶನದಲ್ಲೇ ಮಂಡನೆಯಾಗಲಿದೆ.
ಇದರಿಂದ ನಾಡು-ನುಡಿಗೆ ಕಾನೂನು ಬದ್ಧ ಸಂರಕ್ಷಣೆ ಸಿಗುವಂತಾಗುತ್ತದೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಹೆಚ್.ಡಿ.ಕುಮಾರಸ್ವಾಮಿ ಅವರು ,ಹಿಂದಿ ದಿವಸ್ ಹೆಸರಿನಲ್ಲಿ ಆ ಭಾಷೆಯನ್ನು ಹೇರಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ. ಇದನ್ನು ಖಂಡಿಸಿ ಕನ್ನಡ ಪರ ನಿರ್ಣಯವನ್ನು ಸದನ ಅಂಗೀಕರಿಸುವಂತೆ ಆಗ್ರಹಿಸಿದರು. ಈ ಹಂತದಲ್ಲಿ ಸರ್ಕಾರ ನಿಲುವು ಘೋಷಿಸಿದ ಸಿ ಎಂ ಬೊಮ್ಮಯಿ, ಕನ್ನಡ ಭಾಷೆ-ನೆಲ-ಜಲ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದು ಪುನರುಚ್ಚರಿಸಿದರು.
ಕನ್ನಡ ರಕ್ಷಣೆಗೆ ಹಾಗೂ ಬೆಳೆಸಿವುದಕ್ಕೆ ಸರ್ಕಾರ ಬದ್ಧವಾಗದೆ. ಇದುವರೆಗೆ ಕನ್ನಡ ಭಾಷೆಗಾಗಿ ಪ್ರಾಧಿಕಾರ ಇತ್ತು. ಕನ್ನಡವೇ ಕಡ್ಡಾಯ ಎಂಬ ಮಾತುಗಳನ್ನು ಸಾಕಸ್ಟು ಕೇಳಿಯಾಗಿತ್ತು. ಈಗ ನಾವು ಕನ್ನಡ ಭಾಷೆಯನ್ನು ರಾಜ್ಯದಲ್ಲಿ ಕಡ್ಡಾಯಗೊಳಿಸಲು ಕಾಯ್ದೆಯನ್ನು ತರುತ್ತಿದ್ದೇವೆ. ಕನ್ನಡಕ್ಕಾಗಿ ಕಾಯ್ದೆ ತರುತ್ತಿರುವುದು ಇದೇ ಮೊದಲು ಎಂದು ಹೇಳಿದರು.
ವರದಿ: ಸಿಂಚನಾ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.