
ಬೆಂಗಳೂರು: ಅನಿಲ ಸೋರಿಕೆಯಿಂದ ಬೆಂಗಳೂರಿನ ಮರಿಯಪ್ಪನ ಪಾಳ್ಯದಲ್ಲಿ13 ಮಂದಿಗೆ ಗಾಯ, 4 ಮಂದಿಯ ಸ್ಥಿತಿ ಗಂಭೀರ.
ಬೆಂಗಳೂರು ಮರಿಯಪ್ಪನ ಪಾಳ್ಯದಲ್ಲಿ ಶಂಕಿತ ಅನಿಲ ಸೋರಿಕೆಯಿಂದ ಒಂದೇ ಕುಟುಂಬದ 13 ಮಂದಿಗೆ ಸುಟ್ಟ ಗಾಯಗಳಾಗಿವೆ. ಇದರಲ್ಲಿ ನಾಲ್ಕು ಜನರ ಸ್ಥಿತಿ ತುಂಬಾ ಗಂಭೀರವಾಗಿದೆ. ಕುಟುಂಬದಲ್ಲಿ ಕಾರ್ಯರಕ್ರಮವನ್ನು ಏರ್ಪಡಿಸಿದ್ದು, ವಿವಿಧ ಖಾದ್ಯಗಳನ್ನು ತಯಾರಿಸಲಾಗಿತ್ತು. ಅಡುಗೆ ಬಳಿಕ ರೆಗ್ಯುಲೇಟರ್ ಆಫ್ ಮಾಡಿರಲಿಲ್ಲ. ಇದರಿಂದ ಅನಿಲ ಸೋರಿಕೆಯಾಗಿದೆ. ಬೆಳಗ್ಗೆ ಇದ್ದಂತೆಯೇ ಲೈಟ್ ಹಾಕಿದ್ದು, ಬೆಂಕಿ ಹೊತ್ತಿಕೊಂಡಿದೆ. ಮನೆಯ ಫಿಠೋಪಕರಣಗಳು ಎಲೆಕ್ಟ್ರಾನಿಕ್ ವಸ್ತುಗಳು ಪೂರ್ತಿ ಸುಟ್ಟು ಹೋಗಿವೆ. ನಂತರ ಪೊಲೀಸರಿಗೆ ನೆರೆ ಹೊರೆಯವರಿಗೆ ಕರೆ ಮಾಡಿ ಮಾತನಾಡಿದರು. ಹಾಗೆ ವಿಕ್ಟೋರಿಯ ಹಾಸ್ಪಿಟಲ್ ಗೆ ಗಾಯಗೊಂಡವರನ್ನು ದಾಖಲು ಮಾಡಿದರು.
