ಮೈಸೂರು: ಕನ್ನಡ ಚಳವಳಿಗೆ ರಾಜ್ ಸ್ಫೂರ್ತಿಯ ಸೆಲೆ-ಆರ್ ರಘು ಕೌಟಿಲ್ಯ.
ರಾಜ್ ಜನ್ಮದಿನ ಅಂಗವಾಗಿ ಕನ್ನಡ ಅಭಿಮಾನದ ದಿನಾಚರಣೆ. ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾಕ್ಟರ್ ರಾಜಕುಮಾರ್ ಉದ್ಯಾನವನದಲ್ಲಿರುವ ವಿಶ್ವ ಮಾನವ ಡಾಕ್ಟರ್ ರಾಜಕುಮಾರ್ ಸೇವಾ ಸಮಿತಿ ವತಿಯಿಂದ ಡಾಕ್ಟರ್ ರಾಜ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ವರನಟ ಡಾ. ರಾಜಕುಮಾರ್ ಜನ್ಮದಿನದ ಅಂಗವಾಗಿ ಕನ್ನಡ ಅಭಿಮಾನದ ದಿನ ಆಚರಿಸಲಾಯಿತು.
ಮಾಲಾರ್ಪಣೆ ಮಾಡಿ ಮಾತನಾಡಿದ ಬಿಜೆಪಿ ಮುಖಂಡರಾದ ಆರ್ ರಘು ಕೌಟಿಲ್ಯ ಗೋಕಾಕ್ ಚಳುವಳಿ ಸಂದರ್ಭದಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಡಾ. ರಾಜಕುಮಾರ್ ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೋರಾಟದ ಸ್ಪೂರ್ತಿಯಾದರು. ಅದರ ಫಲವಾಗಿ ಕನ್ನಡ ಭಾಷೆಗೆ ಎಲ್ಲೆಡೆ ಪ್ರಧಾನ ಸ್ಥಾನ ದೊರೆಯಲು ಸಾಧ್ಯವಾಯಿತು. ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಡಾಕ್ಟರ್ ರಾಜ್ ತಮ್ಮ ಚಲನಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳನ್ನು ಜನಪ್ರಿಯಗೊಳಿಸಿದರು. ಸಾಮಾಜಿಕ ಬದಲಾವಣೆಯಲ್ಲಿ ಅವರ ಚಲನಚಿತ್ರಗಳು ಪ್ರಮುಖ ಪಾತ್ರವಹಿಸಿದೆ ಎಂದರು. ಡಾಕ್ಟರ್ ರಾಜ್ ಅವರು ಶ್ರೇಷ್ಠ ಕಲಾವಿದರಾಗಿದ್ದ ಕಾರಣ ಅವರ ಚಲನಚಿತ್ರಗಳು ಜನಸಾಮಾನ್ಯರ ಮನಗೆದ್ದಿವೆ ಎಂದರು. ಇದೇ ಸಂದರ್ಭದಲ್ಲಿ ಮೂಡ ಸದಸ್ಯರಾದ ಲಕ್ಷ್ಮೀದೇವಿ,ವಿಶ್ವ ಮಾನವ ಡಾಕ್ಟರ್ ರಾಜಕುಮಾರ್ ಸೇವಾ ಸಮಿತಿ ಕಾರ್ಯದರ್ಶಿ ಸಚಿಂದ್ರ, ಸಾಮಾಜಿಕ ಹೋರಾಟಗಾರ ವಿಕ್ರಮ ಅಯ್ಯಂಗಾರ್, ಚಕ್ರಪಾಣಿ, ಶಿವರಾಜ್ ಹಾಗೂ ಇನ್ನಿತರರು ಭಾಗವಹಿಸಿದ್ದರು.
ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.