
‘ಚಲನಚಿತ್ರ ನಟಿ ರಚಿತಾ ರಾಮ್ ಗಡಿಪಾರಿಗೆ ಆಗ್ರಹ.’

ಸಕ್ಕರೆ ನಾಡಲ್ಲಿ ನಟಿ ರಚಿತಾ ರಾಮ್ ವಿರುದ್ದ ಭುಗಿಲೆದ್ದ ಆಕ್ರೋಶ. ರಚಿತಾ ರಾಮ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು. ಮದ್ದೂರು ಪೊಲೀಸ್ ಠಾಣೆಯಲ್ಲಿ ದಾಖಲಾಯ್ತು ದೂರು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನಿಂದ ದೂರು. ಗಣರಾಜ್ಯೋತ್ಸವಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪ. ಗಣರಾಜ್ಯೋತ್ಸವದಂದು ಕ್ರಾಂತಿ ಉತ್ಸವ ಮಾಡಿ ಎಂದು ಹೇಳಿಕೆ ಕೊಟ್ಟಿದ್ದ ನಟಿ ರಚಿತಾ ರಾಮ್. ಪೊಲೀಸ್ ಠಾಣೆ ಮೆಟ್ಟಿಲು ಏರಿ ದೂರು ದಾಖಲಿಸಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್.

ಸಂವಿಧಾನ ದಿನಕ್ಕೆ ಅಪಮಾನ ಮಾಡಿದ್ದಾರೆ. ನಾಲಿಗೆ ಹರಿ ಬಿಟ್ಟು ಕ್ರಾಂತಿ ಉತ್ಸವ ಮಾಡಿ ಅಂತ ಹೇಳಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಟನೆ ಮಾಡಲು ರಚಿತಾ ರಾಮ್ ಗೆ ಯೋಗ್ಯತೆ ಇಲ್ಲ. ಚಿತ್ರರಂಗದಿಂದ ಅವರನ್ನ ಬ್ಯಾನ್ ಮಾಡಿ. ರಚಿತಾ ರಾಮ್ ವಿರುದ್ದ ದೇಶ ದ್ರೋಹದ ಪ್ರಕರಣ ದಾಖಲಿಸಿ. ಈ ದೇಶದಿಂದ ಗಡಿ ಪಾರು ಮಾಡಲು ಆಗ್ರಹ. ತಕ್ಷಣವೇ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯ. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಎಂ.ಸಿ.ಬಸವರಾಜು ಒತ್ತಾಯ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.