
ಮಡಿಕೇರಿ ಮತ್ತು ಕೊಡಗು: ನಿವಾಸಿಗಳ ದೂರು – ಮಕ್ಕಳ ಹೆಸರಿನಲ್ಲಿ ಚಂದಾವಸೂಲಿ ಮಾಡುತ್ತಿದ್ದ ಯುವಕರ ವಿಚಾರಣೆ.
ವಿವಿಧೆಡೆ ಮಕ್ಕಳ ಆಶ್ರಮದ ಹೆಸರು ಹೇಳಿಕೊಂಡು ಮನೆ ಮನೆಗೆ ತೆರಳಿ ಚಂದಾ ಹಣ ಸಂಗ್ರಹಿಸುತ್ತಿದ್ದ ಜಾಲ ಸಕ್ರಿಯವಾಗಿದೆ. ದಾವಣಗೆರೆ ಮಕ್ಕಳ ಆಶ್ರಮದಲ್ಲಿನ ಮಕ್ಕಳಿಗೆ ಹಣ ನೀಡಿ ಎಂದು ಟೈ ಹಾಕಿಕೊಂಡು ಮಡಿಕೇರಿಯ ಮನೆ ಮನೆಗೆ ತೆರಳಿ ಹಣ ಸಂಗ್ರಹಿಸುತ್ತಿದ್ದ 3 ಯುವಕರನ್ನು ನಗರ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಇಂದು ಮಡಿಕೇರಿಯ ಜಯನಗರ ಬಡಾವಣೆಯಲ್ಲಿ ಈ ರೀತಿ ಮನೆಮನೆಗೆ ತೆರಳಿ ಒತ್ತಾಯಪೂವ೯ಕವಾಗಿ ಹಣ ಸಂಗ್ರಹಿಸುತ್ತಿದ್ದ ತಂಡವನ್ನು ಸ್ಥಳೀಯರು ಪ್ರಶ್ನಿಸಿದರು. ಪೊಲೀಸರ ಅನುಮತಿ ಇದೆ ಎಂದು ಯುವಕರು ಹೇಳಿದಾಗ ಸ್ಥಳೀಯರು ಅನುಮತಿ ಪತ್ರ ತೋರಿಸಿ ಎಂದು ಪಟ್ಟು ಹಿಡಿದರು. ಮೂವರು ಯುವಕರೂ ಪ್ರಶ್ನೆಗಳಿಗೆಲ್ಲಾ ವಿಭಿನ್ನವಾಗಿ ಒತ್ತಾಯಿಸಿದರು. ಈ ಸಂದಭ೯ ನಿವಾಸಿಗಳು ಪೊಲೀಸ್ ಕಂಟ್ರೋಲ್ ರೂಮ್ ಗೆ 1012 ಗೆ ಕರೆ ಮಾಡಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೆಟ್ರೋಲಿಂಗ್ ವಾಹನದ ಕಾವೇರಪ್ಪ ನೇತೖತ್ವದ ತಂಡ ಮತ್ತು ನಗರ ಪೊಲೀಸ್ ಎಎಸ್ ಐ ಶಿವಾನಂದ್ ನೇತೖತ್ವದ ತಂಡವು ಚಂದಾವಸೂಲಿಯಲ್ಲಿ ನಿರತರಾಗಿದ್ದ ಯುವಕರನ್ನು ವಶಕ್ಕೆ ತೆಗೆದುಕೊಂಡಿತು. ಕುಶಾಲನಗರ, ಗೋಣಿಕೊಪ್ಪಲುವಿನಲ್ಲಿಯೂ ಈ ತಂಡ ಸಕ್ರಿಯವಾಗಿರುವುದಾಗಿ ತಿಳಿದುಬಂದಿದೆ. ವಿಚಾರಣೆ ಸಂದಭ೯ ಸಂಶಯಾಸ್ಪದವಾಗಿ ಯುವಕರು ಉತ್ತರಿಸುತ್ತಿದ್ದು ಪೊಲೀಸರ ಸೂಕ್ತ ವಿಚಾರಣೆ ನಂತರ ಇದರ ಹಿಂದಿನ ಉದ್ದೇಶದ ಬಗ್ಗೆ ಸ್ಪಷ್ಟತೆ ಮೂಡಬೇಕಾಗಿದೆ. ನಗರಸಭೆಯ ಮಾಜಿ ಸದಸ್ಯ ಪಿ.ಟಿ. ಉಣ್ಣಿಕೖಷ್ಣ ಈ ಸಂಬಂಧಿತ ನಿವಾಸಿಗಳ ನೇತೖತ್ವ ವಹಿಸಿದ್ದರು.
