ಇವಿಎಂ, ವಿವಿಪ್ಯಾಟ್ ನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ತರಬೇತಿ.

ಮೈಸೂರು: ಇವಿಎಂ, ವಿವಿಪ್ಯಾಟ್ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ-ಡಾ. ಕೆ ವಿ ರಾಜೇಂದ್ರ.

ಮೈಸೂರು,ಮಾ.04.(ಕರ್ನಾಟಕ ವಾರ್ತೆ):- ಅಧಿಕಾರಿಗಳು ಇವಿಎಂ ವಿವಿಪ್ಯಾಟ್ಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ ಕೆ. ವಿ ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು. ಕರ್ನಾಟಕ ವಿಧಾನಸಭೆ ಸಾರ್ವತ್ರಿಕ ಚುನಾವಣೆ-2023 ರ ಸಂಬOಧ ಮೈಸೂರು ಜಿಲ್ಲೆಯ ವಿಧಾನಸಭಾ ಕ್ಷೇತ್ರವಾರು ನೇಮಿತವಾದ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೈನರ್ ಗಳಿಗೆ ಚುನಾವಣಾ ಕರ್ತವ್ಯ, ಇವಿಎಂ ಹಾಗೂ ವಿವಿಪ್ಯಾಟ್ಗಳ ನಿರ್ವಹಣೆ ಕುರಿತು ಜಿಲ್ಲಾ ಪಂಚಾಯತ್ನ ದೇವರಾಜ್ ಅರಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಮತ ಚಲಾವಣೆಯ ಬಗ್ಗೆ ತರಬೇತಿ ನೀಡಿ, ಗೊಂದಲವಾಗದ ರೀತಿ ಅರಿವು ಮೂಡಿಸಬೇಕು ಎಂದರು. ಚುನಾವಣಾ ಆಯೋಗ ನೀಡಿರುವ ಮಾರ್ಗಸೂಚಿ ಹಾಗೂ ನಿರ್ದೇಶನಗಳ ಬಗ್ಗೆ ಅಧಿಕಾರಿಗಳು ಅರಿವು ಹೊಂದಿರಬೇಕು. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ನಿರ್ದೇಶನಗಳನ್ನು ಸರಿಯಾಗಿ ಓದಿಕೊಳ್ಳಬೇಕು. ಅಧಿಕಾರಿಗಳು ಜವಾಬ್ದಾರಿಯುತವಾಗಿ ಚುನಾವಣಾ ಕೆಲಸ ಮಾಡಬೇಕು. ಕರ್ತವ್ಯದಲ್ಲಿ ಯಾವುದೇ ಲೋಪವೆಸಗಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವವಾಗಿದ್ದು, ಜವಾಬ್ದಾರಿ ಅರಿತು ಕಾರ್ಯನಿರ್ವಹಿಸಬೇಕು. ಮತಗಟ್ಟೆಗಳ ಸ್ಥಿತಿಗತಿ, ಅಲ್ಲಿನ ಮೂಲಭೂತ ಸೌಕರ್ಯ ಮುಂತಾದ ಅಗತ್ಯ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮ ವಹಿಸಲು ಮುಂದಾಗಬೇಕು. ಕಾರ್ಯನಿರ್ವಹಣೆಯನ್ನು ಸಹ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಮತದಾನದ ಜಾಗೃತಿ ಕುರಿತಂತೆ ಜಿಲ್ಲೆಯಾದ್ಯಂತ ಪ್ರಾತ್ಯಕ್ಷಿತೆ ಕಾರ್ಯಕ್ರಮ ಮೂಲಕ ಜನರಿಗೆ ಅರಿವು ಮೂಡಿಸಬೇಕು. ಈ ಎಲ್ಲಾ ಕಾರ್ಯಕ್ರಮದ ಬಗ್ಗೆ ಮಾಸ್ಟರ್ ಟ್ರೇನರ್ ಗಳ ಸೆಕ್ಟರ್ ಅಧಿಕಾರಿಗಳಿಗೆ ಸೂಕ್ತ ಮತ್ತು ಸಂಪೂರ್ಣ ಮಾಹಿತಿಯನ್ನು ನೀಡಬೇಕು ಎಂದರು. ಚುನಾವಣಾ ಸಂದOರ್ಭದಲ್ಲಿ ಮತಪಟ್ಟಿಗಳನ್ನು ಪರಿಷ್ಕರಿಸಿ ಯಾವುದೇ ತೊಂದರೆಗಳು ಆಗದಂತೆ ನೋಡಿಕೊಳ್ಳಬೇಕು. ಚುನಾವಣಾ ಆಯೋಗದ ನಿಯಮನುಸಾರವಾಗಿ ಮತ ಚಲಾವಣೆಯ ತರಬೇತಿಯನ್ನು ನೀಡಬೇಕು. ಸಾರ್ವಜನಿಕರ ತರಬೇತಿ ಕಾರ್ಯಕ್ರಮ ಮುಗಿದಮೇಲೆ VVPAT ಗಳನ್ನು ಸಂಬOಧಿತ ಅಧಿಕಾರಿಗಳು ಟ್ರೇನರ್ ಗಳ ಸುರಕ್ಷಿತವಾಗಿ ತಾಲ್ಲೂಕು ಮಟ್ಟದ ಸ್ಟ್ರಾಂಗ್ ರೂಮ್ ಗಳಲ್ಲಿರಿಸುವುದು ಸಂಪೂರ್ಣ ನಿಮ್ಮ ಜವಾಬ್ದಾರಿ ಆಗಿರುತ್ತದೆ. VVPAT ಗಳಿಗೆ ಸೂರ್ಯನ ಕಿರಣ ತಾಗದಂತೆ ಜಾಗ್ರತೆ ವಹಿಸಬೇಕು. ಯಾವುದೇ ರೀತಿ ಲೋಪ ದೋಷಗಳು ಕಂಡುಬOದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು. ಮಾರ್ಚ್ 20 ರೊಳಗೆ ಸಂಬOಧಿತ ಅಧಿಕಾರಿಗಳು ಚುನಾವಣಾ ತರಬೇತಿ ಕಾರ್ಯವನ್ನು ಸಂಪೂರ್ಣ ಗೊಳಿಸಬೇಕು, ಚುನಾವಣಾ ತರಬೇತಿ ಮುಗಿದ ನಂತರ ಪ್ರತಿದಿನ ಸ್ಪ್ರೆಡ್ ಶೀಟ್ನಲ್ಲಿ ಮಾಹಿತಿ ದಾಖಲಿಸಬೇಕು. ಮೈಸೂರು ವಿಭಾಗದಲ್ಲಿ ಪ್ರಚಾರವನ್ನು ನಡೆಸಿ ಸಾರ್ವಜಕರಿಗೆ ಮತ ಗಟ್ಟೆಗಳ ಬಗ್ಗೆ ಅರಿವು ಮೂಡಿಸಬೇಕು ಎಂದರು. ರಾವಂದೂರು ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರಾದ ರವಿ ಅವರು ಇವಿಎಂ ವಿವಿಪ್ಯಾಟ್ ನಿರ್ವಹಣೆ ಬಗ್ಗೆ ಅಧಿಕಾರಿಗಳಿಗೆ ವಿವರವಾಗಿ ತರಬೇತಿ ನೀಡಿದರು. ತರಬೇತಿಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಕವಿತಾ ರಾಜಾರಾಮ್, ಮೈಸೂರು ಉಪ ವಿಭಾಗಾಧಿಕಾರಿ ಕಮಲಾಭಾಯಿ, ಹುಣಸೂರು ಉಪ ವಿಭಾಗ ಅಧಿಕಾರಿ ರುಚಿ ಬಿಂದಲ್, ಮೂಡಾ ಆಯುಕ್ತರಾದ ದಿನೇಶ್ ಕುಮಾರ್ ಸೇರಿದಂತೆ ವಿಧಾನಸಭೆ ಚುನಾವಣಾ ಅಧಿಕಾರಿಗಳು, ಸಹಾಯಕ ಚುನಾವಣಾ ಅಧಿಕಾರಿಗಳು ಹಾಗೂ ಮಾಸ್ಟರ್ ಟ್ರೇನರ್ ಗಳು ತರಬೇತಿಯಲ್ಲಿ ಭಾಗವಹಿಸಿದ್ದರು.

00000

Leave a Reply

Your email address will not be published. Required fields are marked *