ಬೆಂಗಳೂರು: ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಇತಿಹಾದ್ ವಿಮಾನ ತುರ್ತು ಭೂಸ್ಪರ್ಶ.
ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ರಾತ್ರಿ ನಡೆದಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾತ್ರಿ 9.07ಕ್ಕೆ ದುಬೈಗೆ ತೆರಳುತ್ತಿದ್ದ ಎತಿಹಾದ್ ವಿಮಾನ ಟೇಕ್ ಆಫ್ ಆದ ಕೆಲವೇ ನಿಮಿಷದಲ್ಲಿ ಮತ್ತೆ ವಾಪಸ್ ಏರ್ ಪೋರ್ಟ್ನಲ್ಲಿ ತಾಂತ್ರಿಕ ದೋಷದಿಂದ ತುರ್ತು ಭೂಸ್ಪರ್ಶ ಮಾಡಿದೆ.
ಇವೈ 237 ಸಂಖ್ಯೆಯ ಇತಿಹಾದ್ ವಿಮಾನ 200 ಪ್ರಯಾಣಿಕರನ್ನ ಹೊತ್ತು ಬೆಂಗಳೂರಿನಿಂದ ಅಬುದಭಿಗೆ ಹಾರಿತ್ತು. ಈ ವೇಳೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ನಂದಿ ಬೆಟ್ಟ ಸುತ್ತು ಹಾಕಿಕೊಂಡು ತಕ್ಷಣವೇ ತುರ್ತು ಭೂಸ್ಪರ್ಶ ಮಾಡಿದೆ. ನಂತರ ದೋಷ ಸರಿಪಡಿಸಿಕೊಂಡು ನಾಲ್ಕು ಗಂಟೆ ತಡವಾಗಿ ವಿಮಾನ ಅಬುದಾಬಿಗೆ ತೆರಳಿದೆ. ಘಟನೆ ವೇಳೆ ಪ್ರಯಾಣಿಕರಲ್ಲಿ ಕೆಲ ಹೊತ್ತು ಆತಂಕ ಮೂಡಿತ್ತು.
ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.