ಕಾರನ್ನ ಅಡ್ಡಗಟ್ಟಿ ಡಾ.ರಾಜನಂದಿನಿಗೆ ಕೊಲೆ ಬೆದರಿಕೆ

ಸಾಗರ: ಕಾರನ್ನ ಅಡ್ಡಗಟ್ಟಿ ಡಾ.ರಾಜನಂದಿನಿಗೆ ಕೊಲೆ ಬೆದರಿಕೆ.

ಕಾಂಗ್ರೆಸ್ ಹಿರಿಯ ಮುಖಂಡ ಮಾಜಿ ಸಚಿವ.ಮಾಜಿ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪರವರ ಪುತ್ರಿ ರಾಜನಂದಿನಿ ಮೇಡಂಗೆ ಕೊಲೆ ಬೆದರಿಕೆ ಹಾಕಿ ಅವರ ಕಾರು ಚಾಲಕನಿಗೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ಸಾಗರ ತಾಲೂಕಿನಲ್ಲಿ ನಡೆದಿದೆ.

ಈ ಘಟನೆ ಮಂಜು ಅಂಡ್ ಟೀಂ ನಿಂದ ನಡೆದಿದೆ.ಎಂದು ತಿಳಿದು ಬಂದಿದೆ. ರಾಜನಂದಿನಿ ಅವರ ಕಾರು ಚಾಲಕ ಪ್ರಕಾಶ್ ಎಂಬುವರಿಗೆ ಅಡ್ಡಕಟ್ಟಿ, ಅವರಿಗೆ ಧಮ್ಕಿ ಹಾಕಿ ಮೇಡಂರನ್ನ ಮುಗಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಪ್ರಕಾಶ್ ಕಾರನ್ನ ತ್ಯಾಗರ್ತಿಯಿಂದ ಮಳ್ಳಾ ಕ್ರಾಸ್ ವರೆಗೆ ಹಿಂಬಾಲಿಸಿಕೊಂಡು ಬಂದಿರುವ ಪ್ರಸಂಗ ವರದಿಯಾಗಿದೆ.

ಏನಿದು ಘಟನೆ?


ರಾಜನಂದಿನಿರವರು ಸಾಗರ ತಾಲೂಕಿನಾದ್ಯಂತ ಕಾಗೋಡು ತಿಮ್ಮಪ್ಪ ಫೌಂಡೇಷನ್ ವತಿಯಿಂದ ಉಚಿತ ಆರೋಗ್ಯ ತಪಾಸಣ‌ ಶಿಬಿರವನ್ನ ಹಮ್ಮಿಕೊಂಡಿದ್ದಾರೆ. ಮೊನ್ನೆ ತಾಲೂಕಿನ ತ್ಯಾಗಾರ್ತಿಯಲ್ಲಿ ಆರೋಗ್ಯ ತಪಾಸಣ ಶಿಬಿರ ಮುಗಿಸಿ ಮಧ್ಯಾಹ್ನ 3-15 ರ ವೇಳೆಯಲ್ಲಿ ಶಿಬಿರದಲ್ಲಿ ಭಾಗಿಯಾದವರಿಗೆ ಸಾಗರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.
ಮಾರಿಗುಡಿ ಬಳಿ ಅಡ್ಡಹಾಕಿದ ಮಂಜು
ಊಟಕ್ಕೆ ರಾಜನಂದಿನಿಯವರು ತಮ್ಮ ಕಾರು ಬಿಟ್ಟು ಬೇರೆಯವರ ಕಾರಿನಲ್ಲಿ ಮುಂದೆ ಹೊರಟಿದ್ದಾರೆ. ಅದರ ಹಿಂದೆ ರಾಜನಂದಿನಿ ಕಾರಿನ ಚಾಲಕ ಪ್ರಕಾಶ್ ಇತರರನ್ನ ಕೂರಿಸಿಕೊಂಡು ಹೊರಟಿದ್ದಾರೆ. ತ್ಯಾಗಾರ್ತಿಯ ಮಾರಿಗುಡಿ ಬಳಿಯ ಮುಖ್ಯ ರಸ್ತೆಯಲ್ಲಿ ಮಂಜು ಎಂಬಾತನು ಪ್ರಕಾಶ್ ಚಲಿಸುತ್ತಿದ್ದ ಕಾರನ್ನ ಅಡ್ಡಹಾಕಿ ಅವ್ಯಾಚ್ಯಶಬ್ದಗಳಿಂದ ನಿಂದಿಸಿ ಎಲ್ಲಿಗೆ ಹೊರಟಿದ್ದೀಯ ಎಂದು ಕೇಳಿದ್ದಾನೆ.
ಮಂಜುವಿನ ಅವತಾರಕ್ಕೆ ನಡುಗಿಹೋಗಿದ್ದ ಚಾಲಕ ಪ್ರಕಾಶ್ ಮುಂದಿನ ಕಾರಿನಲ್ಲಿ ಮೇಡಂ ಹೋಗ್ತೀದ್ದಾರೆ. ನಾವೆಲ್ಲಾ ಕಾಗೋಡು ತಿಮ್ಮಪ್ಪ ಪೌಂಡೇಷನ್ ನಿಂದ ಹಮ್ಮಿಕೊಳ್ಳಲಾದ ಆರೋಗ್ಯ ತಪಾಸಣೆ ಶಿಬಿರ ಮುಗಿಸಿಕೊಂಡು ಊಟಕ್ಕೆ ಸಾಗರಕ್ಕೆ ಹೋಗುತ್ತಿದ್ದೇವೆ ಎಂದಿದ್ದಾರೆ.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್-ಟೆಕ್ ಇಂಟರ್ನ್ಯಾಷನಲ್ Mob: 9880432555.

ರಾಜನಂದಿನಿ ದೊಡ್ಡುಕೋಲಾ!
ರಾಜನಂದಿನಿ ದೊಡ್ಡ ಕೋಲಾ‌ ಅವಳು, ಇತ್ತೀಚೆಗೆ ಬಾರಿ ಹಾರಾಡುತ್ತಿದ್ದಾಳೆ. ಹೀಗೆ ಮಾಡುದ್ರೆ ಆಕೆಯನ್ನ ಸುಮ್ನೆ ಬಿಡೊಲ್ಲ, ನಾನು ಒಬ್ಬನೆ ಎಂದು ತಿಳ್ಕೊಬೇಡ ನನ್ನ ಹಿಂದೆ ಬಹಳ ಜನ ಇದ್ದಾರೆ. ಅವಳಿಗೆ ಹೇಳು ಕೊಲೆ ಮಾಡದೆ ಬಿಡುವುದಿಲ್ಲವೆಂದು ಎಂದು ಬೆದರಿಕೆ‌ಹಾಕಿದ್ದಾನೆ.
ಪ್ರಕಾಶ್ ಗೆ ಹೊಡೆಯಲು ಮುಂದಾದಾಗ ಕಾರಿನಲ್ಲಿ ಕುಳಿತವರೆಲ್ಲಾ ಕೂಗಿದ್ದಾರೆ. ಮಂಜುವಿನಿಂದ ತಪ್ಪಿಸಿಕೊಂಡು ಬಂದ ಪ್ರಕಾಶ್, ಕಾರು ಚಲಾಯಿಸಿಕೊಂಡು ಸಾಗರದ ಕಡೆ ವೇಗವಾಗಿ ಚಲಿಸಿದ್ದಾರೆ. ಇಷ್ಟಕ್ಕೂ ಬಿಡದ ಮಂಜು ನಾಲ್ಕು ಬೈಕ್ ನಲ್ಲಿ 8 ಜನರನ್ನ ಕೂರಿಸಿಕೊಂಡು ಕಾರನ್ನ ಹಿಂಬಾಲಿಸಿದ್ದಾನೆ.

ಆಕರ್ಷಕ ಕಮ್ಮಿ ಬಡ್ಡಿದರ ಗ್ರಹ ಸಾಲಕ್ಕಾಗಿ ಸಂಪರ್ಕಿಸಿ : 9535995455 , 9880432555.

ಕಾರು ಹಿಂಬಾಲಿಸಿ ಕೈಕಾಲು ಮುರಿಯುವುದಾಗಿ ಅವಾಜ್!
ಮಳ್ಳಾ‌ ಕ್ರಾಸ್ ವರೆಗೂ ಹಿಂಬಾಲಿಸಿಕೊಂಡು ಬಂದ ಮಂಜ ಕಾರು ನಿಲ್ಲಿಸೋ ಕಾಲು ಮುರಿಯುತ್ತೇನೆ ಎಂದು ಕೂಗಿಕೊಂಡಿದ್ದಾನೆ. ಕಾರನ್ನ ಅಡ್ಡಗಟ್ಟಿ ರಾಜನಂದಿನಿರವರಿಗೆ ಅವ್ಯಚ್ಯಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ ಮಂಜು ಮತ್ತು ಆತನ ಸಂಗಡಿಗರ ವಿರುದ್ಧ ಪ್ರಕಾಶ್ ಸಾಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಾರಿದು ಮಂಜು!
ರಾಜನಂದಿನಿಯವರ ಕಾರನ್ನ ಅಡ್ಡಹಾಕಿ ಕಾರಿನ ಚಾಲಕನನ್ನ ಅವಹೇಳನ ಮಾಡಿ ಮೇಡಂ ಮತ್ತು ಚಾಲಕನಿಗೆ ಬೆದರಿಕೆ ಹಾಕಿದ ಮಂಜು ಯಾರೆಂದು ಕುತೂಹಲಕ್ಕೆ ಕಾರಣವಾಗಿದೆ. ಮಂಜು ತ್ಯಾಗರ್ತಿ ಗ್ರಾಮದವನೇ ಆಗಿದ್ದು ಚಾಲಕ ಪ್ರಕಾಶ್ ಗೆ ಹತ್ತಿರ ಸಂಬಂಧಿ ಎಂದು ಹೇಳಲಾಗಿದೆ.

ವರದಿ: ಸಿಸಿಲ್ ಸೋಮನ್ (C E O – HIND SAMACHAR)

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಸಿಮ್-ಟೆಕ್ ಇಂಟರ್ನ್ಯಾಷನಲ್ Mob: 9880432555.

Leave a Reply

Your email address will not be published. Required fields are marked *