DMI ಫೈನಾನ್ಸ್ ಒಂದು ಕಂಪನಿಯೋ ಗೂಂಡಗಳ ಟ್ರೈನಿಂಗ್ ಸೆಂಟರೋ?
ಸಾಮಾನ್ಯ ಜನರು ತಿಳಿದಿರುವುದು DMI ಪ್ರೈವೇಟ್ ಲಿಮಿಟೆಡ್ ಫೈನಾನ್ಸ್ ಎಂದರೆ ಮೊಬೈಲ್ ಅಥವಾ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳನ್ನು IMI ರೂಪದಲ್ಲಿ ಸಾಲ ಕೊಡುವ ಕಂಪನಿ ಎಂದು ಭಾವಿಸಿರುತ್ತಾರೆ. DMI ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಕೆಲಸ ಮಾಡುವ ಕೆಲವರು ಗೂಂಡಾಗಳಂತೆ ವರ್ತಿಸಿ ಸಾಲ ಕೊಟ್ಟ ಗ್ರಾಹಕರಿಗೆ ಅವಾಚ್ಯ ಶಬ್ದಗಳಲ್ಲಿ ಬೈಯುವುದು ಗ್ರಾಹಕರ ಮನೆಯಲ್ಲಿ ಇರುವ ಹಿರಿಯರನ್ನು ಸೇರಿಸಿ ಬರೆಯುವುದು ಗ್ರಾಹಕರ ವೈಯಕ್ತಿಕ ವಿಚಾರಗಳನ್ನು ಸಂಬಂಧಿಸಿ ಅವರಿಗೆ ಬೆದರಿಕೆ ಹಾಕುವುದು ಅವರನ್ನು ಮಾನಸಿಕವಾಗಿ ಕಿರುಕುಳ ನೀಡುವುದು ಒಂದು ನಿಮಿಷ ಬಿಡದ ಹಾಗೆ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಿ ನಿರಂತರ ಕರೆ ಮಾಡುವುದು ಇಂತಹ ಕೆಲವು ಅವರ ಕಾರ್ಯ ಚಟುವಟಿಕೆಗಳಾಗಿವೆ ನಿಯಮಿತ ಕಾನೂನಿನ ಪ್ರಕಾರ
DMI ಪ್ರೈವೇಟ್ ಲಿಮಿಟೆಡ್ ಫೈನಾನ್ಸ್ ಯಾವುದೇ ಸಿಬ್ಬಂದಿಗಳು ಅಥವಾ ಅವರ ಸೊ ಕಾಲ್ಡ್ [ಗೂಂಡಗಳು] ಯಾವುದೇ ಗ್ರಾಹಕರಿಗೆ ಯಾವುದೇ ರೀತಿಯ ಮಾನಸಿಕ ದೈಹಿಕ ಕಿರುಕುಳ ನೀಡುವ ಹಾಗೆ ಇರುವುದಿಲ್ಲ. ಒಂದು ವೇಳೆ ಗ್ರಾಹಕರು IMI ತಪ್ಪಿದ್ದಲ್ಲಿ ಅವರಿಗೆ ಯಾವುದೇ ಕಾರಣಕ್ಕೂ ಅವಾಚ್ಯ ಶಬ್ದಗಳಿಂದ ಬಯ್ಯುವುದು ಕಾನೂನು ಬಾಹಿರವಾಗಿರುತ್ತದೆ.
ಹಲವಾರು ಗ್ರಾಹಕರು ಕಿರುಕುಳಕ್ಕೆ ಸಿಲುಕಿ ತಮ್ಮ ಜೀವವನ್ನು ಕಳೆದು ಕೊಳ್ಳುವ ಪರಿಸ್ತಿತಿ ನಿರ್ಮಾಣವಾಗಿದೆ ಎಂದು ಹಿಂದ್ ಸಮಾಚಾರ್ ನ್ಯೂಸ್ ತಂಡಕ್ಕೆ ಮಾಹಿತಿ ಲಭ್ಯವಾಗಿದೆ . ಹಿಂದ್ ಸಮಾಚಾರ್ ನ್ಯೂಸ್ ಸಾರ್ವಜನಿಕರಿಗೋಸ್ಕರ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದೆ. ಇದರ ಮುಖ್ಯ ಆರೋಪಿಯಾಗಿ ಬೆಂಗಳೂರಿನ ಎಂಜಿ ರೋಡ್ ಆಫೀ ದರ್ಶನ್ ಅವರ ವಿರುದ್ಧ ಕ್ರಮ ಜಾರಿಗೊಳಿಸಬೇಕಾಗಿ DMI ಸಂಸ್ಥೆ ಹಾಗೂ DMI ಫೈನಾನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಒಪ್ಪಂದ ಮಾಡಿಕೊಂಡಿರುವ ಎಲ್ಲಾ ಏಜೆನ್ಸೀಸ್ ಹಾಗೂ ಕಂಪನಿಗಳಿಗೆ ಪತ್ರವನ್ನು ಕಳಿಸಲಾಗುವುದು.
ಯಾವುದೇ ನಾಗರಿಕರಿಗೆ ಇಂತಹ ಘಟನೆ ನಡೆದಲ್ಲಿ ಅವರ ಸಹಾಯಕ್ಕೆ ಹಾಗೂ ಅವರಿಗೆ ಕಾನೂನು ಸಲಹೆ ಮತ್ತು ಧೈರ್ಯವನ್ನು ಕೊಡುವ ನಿರ್ಧಾರವನ್ನು ಹಿಂದ್ ಸಮಾಚಾರ್ ನ್ಯೂಸ್ ಟೀಮ್ ತೀರ್ಮಾನ ಕೈಗೊಂಡಿದೆ ಇಂತಹ ಘಟನೆಗಳು ನಡೆದ ಸಂದರ್ಭದಲ್ಲಿ ಅವರ ಮೊಬೈಲ್ ಕರೆಯನ್ನು ರೆಕಾರ್ಡ್ ಮಾಡಿ ನಿಮ್ಮಲ್ಲಿ ಸಾಕ್ಷಿಯಾಗಿ ಇಟ್ಟುಕೊಂಡು ಹಿಂದ್ ಸಮಾಚಾರ್ ನ್ಯೂಸ್ ಟೀಮ್ ಈ ನಂಬರ್ :9916432555 ಗೆ ಕರೆ ಮಾಡಿ ನಿಮ್ಮ ಸಮಸ್ಯೆಗೆ ಹಿಂದ್ ಸಮಾಚಾರ್ ನ್ಯೂಸ್ ತಂಡವು ಸಂಪೂರ್ಣ ಬೆಂಬಲ ಕೊಡುತ್ತದೆ.
DMI ಪ್ರೈವೇಟ್ ಲಿಮಿಟೆಡ್ ಫೈನಾನ್ಸ್ ಆಡಳಿತ ಮಂಡಳಿ ಅವರು ಆಗಸ್ಟ್ 10/08/2024 ರ ಒಳಗೆ ನಮ್ಮ ಈ ದೂರಿಗೆ ಸ್ಪಂದಿಸದಿದ್ದಲ್ಲಿ ದರ್ಶನ್ ಅವರ ಹೆಸರಿನಲ್ಲಿ ಕಾನೂನಿನ ಅಡಿಯಲ್ಲಿ ಬರುವ ಕ್ರಿಮಿನಲ್ ಮುಖದ್ದಮೆಯನ್ನು ಕೊಡಲು ಹಾಗೂ DMI ಫೈನಾನ್ಸ್ ವಿರುದ್ಧವು FIR ಕೊಡುವುದಾಗಿ ಹಿಂದ್ ಸಮಾಚಾರ್ ತಂಡ ತಿಳಿಸುತ್ತಿದೆ.
ವರದಿ :ಅಪೂರ್ವ ಸಾಗರ