ಧಮ್ಮವನ್ನು ಅರಿಯಬೇಕು ಎಂದು ಬುದ್ಧರು ಭೋದಿಸಿದ್ದು ಎಂದರು ಭಂತೆ ಡಾ.ಕಲ್ಯಾಣಸಿರಿ.

ಧಮ್ಮವನ್ನು ಅರಿಯಬೇಕು ಎಂದು ಬುದ್ಧರು ಭೋದಿಸಿದ್ದು ಎಂದರು ಭಂತೆ ಡಾ.ಕಲ್ಯಾಣಸಿರಿ.

ಧಮ್ಮ ಎಂದರೇ ಸತ್ಯವಾದದ್ದು, ಧಮ್ಮವು ಕೇವಲ ಧಾರ್ಮಿಕ ಚೌಕಟ್ಟಿಗೆ ಸೀಮಿತವಾಗಿ ಆಚರಿಸುವುದಲ್ಲ, ಹಾಗೆ ಆಚರಿಸಿದರೆ ಅದು ಧರ್ಮವಾಗುತ್ತದೆ. ಧಮ್ಮವಾಗುವುದಿಲ್ಲ. ಧಾರ್ಮಿಕ ಆಚರಣೆಗಳನ್ನು ಮೀರಿದ್ದು ಧಮ್ಮ. ಧಮ್ಮವೆಂದರೆ ಜೀವನದ ಮಾರ್ಗ, ನಿಬ್ಬಾಣದ ಮಾರ್ಗ, ಜ್ಞಾನೋದಯದ ಮಾರ್ಗ. ಸನ್ಮಾರ್ಗದ ಮಾರ್ಗ. ಧಮ್ಮವು ಸದ್ಧಮ್ಮವಾದಾಗ ಮಾತ್ರ ಅದಕ್ಕೆ ಅರ್ಥ ಬರುತ್ತದೆ. ಈ ದೃಷ್ಟಿಯಲ್ಲಿ ಧಮ್ಮವನ್ನು ಅರಿಯಬೇಕು ಎಂದು ಬುದ್ಧರು ಭೋದಿಸಿದ್ದು ಎಂದರು ಭಂತೆ ಡಾ.ಕಲ್ಯಾಣಸಿರಿ. ಧಮ್ಮಚಕ್ಕಪವತ್ತನ ದಿನದ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರವು ಧಮ್ಮಚಕ್ಕಪವತ್ತನದ ಮಹತ್ವ ಮತ್ತು ಸಮಕಾಲೀನ ಸಮಾಜ ಎನ್ನುವ ವಿಷಯ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಧಮ್ಮಚಕ್ಕಪವತ್ತನ ದಿನವು ಬುದ್ಧರು ತಮಗೆ ಪ್ರಾಪ್ತವಾದ ಜ್ಞಾನೋದಯದ ಸಾರವನ್ನು ಐದು ಜನರಿಗೆ ಪ್ರಥಮವಾಗಿ ಭೋದಿಸಿದ ದಿನ, ಧಮ್ಮ ಭೋದನೆಯು ಅಥವ ಚಕ್ರವು ಉರುಳಲು ಪ್ರಾರಂಭವಾದ ದಿನವಾಗಿ ಆಚರಿಸಲಾಗುತ್ತದೆ ಎಂದರು.
ಬುದ್ಧರು ಜಗತ್ತಿನ ದುಃಖಕ್ಕೆ ಪರಿಹಾರೋಪಾಯವಾಗಿ ಎರಡು ಅತಿರೇಖಗಳು, ನಾಲ್ಕು ಅರಿಯ ಸತ್ಯಗಳು, ಅಷ್ಟಾಂಗ ಮಾರ್ಗಗಳು ಮತ್ತು ಪಂಚಶೀಲಗಳನ್ನು ತನ್ನ ಐದುಜನ ಶಿಷ್ಯರಿಗೆ ಭೋದಿಸಿದರು.
ಬುದ್ಧರು ಭೋದಿಸಿದ ಈ ಮಾರ್ಗದಲ್ಲಿ ನಡೆದರೆ ಜಗತ್ತಿನ ದುಃಖವನ್ನು ನಿವಾರಿಸಬಹುದು. ದುಃಖವು ಮಾನವನಲ್ಲಿರುವ ದುರಾಸೆಯಿಂದ ಉಂಟಾಗುತ್ತದೆ. ತೃಷ್ಣೆ, ಬಯಕೆ, ಹಂಬಲ, ದುರಾಸೆಗಳಿಂದ ದೂರವಾದರೆ ದುಃಖದ ನಿವಾರಣೆ ಸಾಧ್ಯ ಎಂದರು.
ಬುದ್ಧರು ಅನಾತ್ಮತೆಯನ್ನು ಭೋದಿಸಿದರು, ಆತ್ಮವು ಭ್ರಮೆಯ ಕಲ್ಪನೆಗೆ ಒಳಪಟ್ಟಿರುತ್ತದೆ. ಅವುಗಳನ್ನು ಮೀರಬೇಕು ಎಂದರು.
ಎಲ್ಲಾ ದಾನಕ್ಕಿಂತ ಧಮ್ಮದಾನವೇ ಶ್ರೇಷ್ಠವಾದದ್ದು, ಎಲ್ಲ ರುಚಿಗಳಿಗಿಂತ ಧಮ್ಮದ ರುಚಿಯೇ ಮಿಗಿಲಾದದ್ದು, ಎಲ್ಲಾ ಸುಖಗಳಿಗಿಂತ ಧಮ್ಮದ ಸಂತೋಷವೇ ಅಪೂರ್ವವಾದದ್ದು ಅದನ್ನು ಪ್ರತಿಯೊಬ್ಬರು ಪಡೆಯಬೇಕು ಎಂದರು. ಜಗತ್ತಿನ ಎಲ್ಲಾ ಮಾನವ ಜೀವಿಗಳನ್ನು ತನ್ನೊಳಗೆ ಅಪ್ಪಿಕೊಳ್ಳುತ್ತದೆ ಬುದ್ದರ ಧಮ್ಮ. ಬೋದಿಸತ್ವವನ್ನು ಪಡೆಯಲು ಬಿಕ್ಕುಗಳೇ ಆಗಬೇಕಿಲ್ಲ, ಚೀವರವನ್ನೇ ತೊಡಬೇಕಿಲ್ಲ. ಸಾಮಾನ್ಯರು ಕೂಡ ಭೋದಿತ್ವವನ್ನು ಪಡೆಯಬಹುದು ಎಂದರು. ಬುದ್ಧರ ಮದ್ಯಮಮಾರ್ಗವು ಅತ್ಯಂತ ಶ್ರೇಷ್ಠ ಮಾರ್ಗವೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೇಂದ್ರದ ನಿರ್ದೇಶಕರಾದ ಪ್ರೊ.ಎಸ್. ನರೇಂದ್ರಕುಮಾರ್ ಮಾತನಾಡಿ ಬುದ್ಧರು ಕೇವಲ ತಮ್ಮ ಕಾಲಕ್ಕೆ ಸೀಮಿತವಾಗಿ ಅಥವಾ ಜಾತಿ, ಧರ್ಮಕ್ಕೆ ಸೀಮಿತವಾಗಿ ಏನನ್ನು ಭೋದಿಸಲಿಲ್ಲ. ಅವರ ಭೋದನೆಗಳೆಲ್ಲವೂ ಕಾಲಾತೀತವಾದ ಸತ್ಯಗಳು ಅದಕ್ಕೆ ಬೌದ್ಧಧಮ್ಮ ಆಕಾಲದಲ್ಲಿಯೇ ಜಗತ್ತಿನ ಮಟ್ಟದಲ್ಲಿ ವ್ಯಾಪಕವಾಗಿ ಪ್ರಚಾರವಾಗಲು ಕಾರಣವಾಯಿತು ಮತ್ತು ಇಂದಿಗೂ ಪ್ರಸ್ತುತವಾಗಿರುವುದನ್ನು ನಾವು ಕಾಣಬಹುದು ಎಂದರು.
ಕಾರ್ಯಕ್ರಮದಲ್ಲಿ ಕೇಂದ್ರದ ಪ್ರಾಧ್ಯಾಪಕರಾದ ಪ್ರೊ.ಜೆ ಸೋಮಶೇಖರ್ ಉಪಸ್ಥಿತರಿದ್ದರು. ಕೇಂದ್ರದ ಬೋಧಕರು, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *