ಬ್ರಿಟನ್: ಬ್ರಿಟನ್ ರಾಣಿ 2ನೇ ಎಲಿಜಬೆತ್ ನಿಧನ.
ಬ್ರಿಟನ್ನಿನ ರಾಣಿ 2ನೇ ಎಲಿಜಬೆತ್ ಇಂದು ನಿಧನರಾಗಿದ್ದಾರೆ. ಅವರಿಗೆ 96 ವರ್ಷ ವಯಸ್ಸಾಗಿತ್ತು. ಸ್ಕಾಟ್ಲೆಂಡಿನ ಬಲ್ಮೋರಲ್ ಅರಮನೆಯಲ್ಲಿ ರಾಣಿ ನಿಧನ ಹೊಂದಿದ್ದಾರೆ. ಎಂದು ಬಂಕಿಂಗ್ ಹ್ಯಾಮ್ ಅರಮನೆ ತಿಳಿಸಿದೆ.
ಮುಂದಿನ ದಿನಗಳಲ್ಲಿ ಎಲಿಜಬೆತ್ ಹಿರಿಯ ಮಗ ಚಾರ್ಲ್ಸ್ (73), ಸ್ವಯಂಚಾಲಿತವಾಗಿ ಯುನೈಟೆಡ್ ಕಿಂಗ್ ಡಮ್ ನ ರಾಜನಾಗುತ್ತಾನೆ.ಮತ್ತು ಆಸ್ಟ್ರೇಲಿಯಾ, ಕೆನಡಾ ಮತ್ತು ನ್ಯೂಜಿಲ್ಯಾಂಡ್ ಸೇರಿದಂತೆ 14 ಇತರ ರಾಜ್ಯಗಳ ಮುಖ್ಯಸ್ಥನಾಗುತ್ತಾನೆ.
ರಾಣಿ ಎಲಿಜಬೆತ್2, ವಿಶ್ವದ ಅತ್ಯಂತ ಹಿರಿಯ ಮತ್ತು ಸುಧೀರ್ಘ ಸೇವೆ ಸಲ್ಲಿಸಿದ ರಾಣಿ, ಫೆಬ್ರುವರಿ 6, 1952 ರಂದು ಕೇವಲ 25 ವರ್ಷದವಳಿದ್ದಾಗ ತನ್ನ ತಂದೆ ಕಿಂಗ್ ಚಾರ್ಜ್ 6 ರ ಮರಣದ ನಂತರ ಸಿಂಹಾಸನವೇರಿದ್ದರು.
ವರದಿ : ಸಿಂಚನ ಜಯಂತ ಬಲೇಗಾರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.