ದಾನದಲ್ಲಿ ಪ್ರತಿಫಲಾಪೇಕ್ಷೆ ಇರಕೂಡದು:ದೇವರಾಜ ಸಂಚಾರಿ ಠಾಣೆಯ ವೃತ್ತ ನಿರೀಕ್ಷಕರಾದ ಮುನಿಯಪ್ಪ

ದಾನದಲ್ಲಿ ಪ್ರತಿಫಲಾಪೇಕ್ಷೆ ಇರಕೂಡದು:ದೇವರಾಜ ಸಂಚಾರಿ ಠಾಣೆಯ ವೃತ್ತ ನಿರೀಕ್ಷಕರಾದ ಮುನಿಯಪ್ಪ

ಬಾಲಬೋದಿನಿ ಶಾಲೆಯ ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ

ದಾನ ಮಾಡುವ ಪ್ರವೃತ್ತಿ ಎಲ್ಲರಿಗೂ ಬೇಕು,ಪ್ರತಿಫಲಾಪೇಕ್ಷೆ ಇಲ್ಲದೆ ದಾನವೇ ಶ್ರೇಷ್ಠ, ಅಂತಹ ಫಲಪೇಕ್ಷೆ ಬಯಸದೇ ದಾನವನ್ನು ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮತಿ ಅಧಿಕಾರಿಗಳ ವರ್ಗ ಹಾಗೂ ನೌಕರರ ಸಂಘ ಮತ್ತು ಚಾಮುಂಡೇಶ್ವರಿ ಕಾರು ಮಾಲೀಕರ ಮತ್ತು ಚಾಲಕರ ಸಂಘ ಹಾಗೂ ರವಿ ಸ್ನೇಹ ಬಳಗ ಮಾಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು
ದೇವರಾಜ ಸಂಚಾರಿ ಠಾಣೆಯ ವೃತ್ತ ನಿರೀಕ್ಷಕರಾದ ಮುನಿಯಪ್ಪ ಹೇಳಿದರು

ಮೈಸೂರು: ಚಾಮುಂಡಿಪುರಂನಲ್ಲಿರುವ ಬಾಲ ಬೋಧಿನಿ ಶಾಲೆಯಲ್ಲಿ ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮತಿ ಅಧಿಕಾರಿಗಳ ವರ್ಗ ಹಾಗೂ ನೌಕರರ ಸಂಘ ಮತ್ತು ಚಾಮುಂಡೇಶ್ವರಿ ಕಾರು ಮಾಲೀಕರ ಮತ್ತು ಚಾಲಕರ ಸಂಘ ಹಾಗೂ ರವಿ ಸ್ನೇಹ ಬಳಗ ವತಿಯಿಂದ 40 ಶಾಲಾ ಮಕ್ಕಳಿಗೆ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು
ವಿದ್ಯಾರ್ಥಿ ಜೀವನದಲ್ಲಿ ಪಡೆದ ಸಹಾಯವನ್ನು ಮುಂದೆ ಸ್ಥಿತಿವಂತರಾದಾಗ ಸಮಾಜಕ್ಕೆ ವಾಪಸ್ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮಕ್ಕಳಿಗೆ ಕಿವಿಮಾತು ಹೇಳಿದರು, ನಂತರ ಸಂಚಾರಿ ನಿಯಮದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಿದರು,
ಈಗಾಗಲೇ ಮೈಸೂರು ನಗರದಲ್ಲಿ ಸರ್ಕಾರಿ ಶಾಲೆಗಳಿಗೆ ಇರಲಿ ಶಾಲಿಗೆ ಬೇಕಾದಂತ ವಸ್ತುಗಳನ್ನು ನೀಡಿರುವ ಈ ಸಂಘಟನೆ ನಿಜಕ್ಕೂ ಶ್ಲಾಘನಯ ಇಂತಹ ಸಂಘಟನೆಗಳು ಹೆಚ್ಚು ಹೆಚ್ಚು ಸಮಾಜಮುಖಿ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿರುವುದು ಸಂತೋಷವಾಗುತ್ತದೆ,
ನಂತರ ಮಾತನಾಡಿದ ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ
ಸರ್ಕಾರಿ ಸೌಲಭ್ಯ ಸದುಪಯೋಗವಾಗಲಿ ಸರ್ಕಾರ ಬಡ ವಿದ್ಯಾರ್ಥಿಗಳಿಗೆ ನೀಡಿರುವ ಆರ್‌ಟಿಐ ಸೌಲಭ್ಯ ಸದುಪಯೋಗ ಪಡೆದುಕೊಂಡು ಹೆತ್ತವರ ಕೀರ್ತಿ ತರುವಂತಹ ಮಕ್ಕಳಾಗಬೇಕು,
ಸರ್ಕಾರ ಶಿಕ್ಷಣಕ್ಕಾಗಿ ಸಾಕಷ್ಟು ಅನುದಾನ ನೀಡುತ್ತಿದೆ ಪಾಲಕರು ಮಕ್ಕಳಿಗೆ ಶಿಕ್ಷಣ ಕೊಡಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕು, ಶಾಲೆಯಲ್ಲಿ ಪ್ರತಿವರ್ಷ ಆರ್‌ಟಿಐ ಅಡಿಯಲ್ಲಿ ಆಯ್ಕೆಯಾದ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ನೀಡಲಾಗುವುದು ಸಂತೋಷ ತಂದಿದೆ ಅದರಂತೆ ಈ ವರ್ಷ ಸಹ ಸರ್ಕಾರ ಸರ್ಕಾರಿ ಶಾಲೆಗಳಿಗೆ ಹೆಚ್ಚು ಅನುದಾನವನ್ನು ಬಜೆಟ್ ನಲ್ಲಿ ನೀಡಿರುವುದು ಸಂತೋಷ ಉಂಟು ಆಗಿದೆ ಹೇಳಿದರು

ಇದೇ ಸಂದರ್ಭದಲ್ಲಿ ದೇವರಾಜ ಸಂಚಾರಿ ಠಾಣೆಯ ವೃತ ನಿರೀಕ್ಷಕರಾದ ಮುನಿಯಪ್ಪ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್,
ಸಂಘದ ಪದಾಧಿಕಾರಿಗಳಾದ ರವಿ, ಸುಬ್ರಮಣ್ಯ, ದೀಪಕ್, ಶಾಲೆಯ ಮುಖ್ಯ ಶಿಕ್ಷಕರಾದ ಜಯಂತಿ, ಶಿಕ್ಷಕರುಗಳಾದ ಲೀಲಾವತಿ, ಜತ್ತಿ, ಎಂ ಡಿ ಶ್ರೀನಿವಾಸ್ ಹಾಗೂ ಇನ್ನಿತರರು ಹಾಜರಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *