ಕಲಬುರ್ಗಿ : ಕಲಬುರ್ಗಿಯಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ.
ಸರ್ಕಾರದ ಬೆಂಬಲವಿಲ್ಲದೆ ಹಗರಣಗಳಲ್ಲಿ ಯಾರೂ ಕಿಂಗ್ ಪಿನ್ ಆಗಲು ಸಾಧ್ಯವಿಲ್ಲ. ಮುಖ್ಯಮಂತ್ರಿಗಳು, ಗೃಹಸಚಿವರು, ಡಿಜಿ ಸೇರಿದಂತೆ ಎಲ್ಲ ಅಧಿಕಾರಗಳ ಆಶೀರ್ವಾದ ಇಲ್ಲದೆ, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಉತ್ತರ ಪತ್ರಿಕೆ, ಒಎಂಆರ್ ತಿದ್ದಲು ಆಗುವುದಿಲ್ಲ. ಈ ಹಗರಣದಲ್ಲಿ ಪ್ರತಿ ಅಕ್ರಮವು ಸರ್ಕಾರದ ಬೆಂಬಲದಿಂದಲೇ ಆಗಿದೆ.
ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ವಿಶ್ವವಿದ್ಯಾಲಯಗಳಲ್ಲಿ ಉಪಕುಲಪತಿಗಳ ನೇಮಕಕ್ಕೆ 5 ಕೋಟಿ ನೀಡಬೇಕು ಎಂದು ಹೇಳಿದ್ದಾರೆ. ಇನ್ನು ಪತ್ರಿಕೆಗಳಲ್ಲಿ ಕಡಿಮೆ ಅಂಕ ಪಡೆದಿದ್ದರೂ ಹೆಚ್ಚಿನ ಅಂಕ ನೀಡಿರುವ ವರದಿ ಬಂದಿದೆ. ಈ ಸರ್ಕಾರ ಎಲ್ಲ ನೇಮಕಾತಿಯಲ್ಲಿ ಅಕ್ರಮ, ಭ್ರಷ್ಚಾರ ನಡೆಸಿ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಟ್ಟಿದೆ. ಈ ಭ್ರಷ್ಟ ಹಾಗೂ ದುಷ್ಟ ಸರ್ಕಾರವನ್ನು ಹೊರ ಹಾಕುವುದು ಕಾಂಗ್ರೆಸ ಪಕ್ಷದ ಗುರಿ.
ಇನ್ನು ನಮ್ಮ ಯಾತ್ರೆ ಬಸ್ ಯಾತ್ರೆ ಅಲ್ಲ. ಬಸ್ ನಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ಇದು ರಾಜ್ಯದ ಪ್ರಜೆಗಳ ಯಾತ್ರೆ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.