ಬಜರಂಗದಳ ಸಂಘಟನೆಯನ್ನು ನಿಷೇಧಿಸುವ ಭರವಸೆ ನೀಡಿರುವ ಕ್ರಮದ ವಿರುದ್ಧ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ – ಸಂತೋಷ ಶಿವಾಜಿ ಸಾಗರ
ಸೇವಾ ಸುರಕ್ಷಾ ಸಂಸ್ಕಾರ ಎನ್ನುವ ಧ್ಯೇಯವನ್ನಿಟ್ಟುಕೊಂಡು ಭಾರತದ ಸರ್ವಾಂಗೀಣ ಅಭಿವೃದ್ಧಿ ಹಾಗೂ ದೇಶದ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಜರಂಗದಳ ದೇಶಾದ್ಯಂತ ಕೆಲಸ ಮಾಡುತ್ತಿದೆ .ದೇಶದ ಯಾವುದೇ ಭಾಗದಲ್ಲಿ ಹಿಂದೂಗಳಿಗೆ ಸಮಸ್ಯೆ ಆದಾಗ ತಕ್ಷಣಕ್ಕೆ ಸ್ಪಂದಿಸುವ ಏಕೈಕ ಯುವ ಸಂಘಟನೆ ಬಜರಂಗದಳ,
ಕೊರೊನಾ ಸಂದರ್ಭದಲ್ಲಿ ತಮ್ಮ ಸಂಬಂಧಿಕರು ಸಹ ಮುಟ್ಟದ ಮೃತ ದೇಹದ ಅಂತಿಮ ಸಂಸ್ಕಾರ ಮಾಡಿದ ಸಂಘಟನೆ ಬಜರಂಗದಳ.
ಕೊರೊನಾ ಸಂದರ್ಭದಲ್ಲಿ ಲಕ್ಷಾಂತರ ಜನರಿಗೆ ರಕ್ತದಾನ ಮಾಡಿ, ಲಕ್ಷಾಂತರ ಜನರಿಗೆ ಉಚಿತವಾಗಿ ಆಹಾರ ಸಾಮಾಗ್ರಿಗಳನ್ನು ಪೊರೈಸಿದ ಬಜರಂಗದಳ.
ಗೋ ಸಂರಕ್ಷಣೆ, ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಭಯೋತ್ಪಾದನ ಕೃತ್ಯಗಳು , ದೇವಸ್ಥಾನಗಳ ಮೇಲೆ ದಾಳಿ , ಇಂತಹ ಕೃತ್ಯ ನಡೆಸುವ ಜಿಹಾದಿಗಳ ವಿರುದ್ಧ ನೇರವಾಗಿ ಬೀದಿಗಿಳಿದು ಹೋರಾಟ ಮಾಡುವ ದೇಶಭಕ್ತ ಸಂಘಟನೆಯಾದ ಬಜರಂಗದಳ ಸಂಘಟನೆಯನ್ನು ಕಾಂಗ್ರೆಸ್ ಪಕ್ಷ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳ ಸಂಘಟನೆಯನ್ನು ನಿಷೇಧಿಸುವ ಭರವಸೆ ನೀಡಿರುವ ಕ್ರಮದ ವಿರುದ್ಧ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ ಹಾಗೂ ಕಾಂಗ್ರೆಸ್ ಪಕ್ಷ ಸಾರ್ವಜನಿಕವಾಗಿ ಕ್ಷಮಾಪಣೆ ಕೋರಲು ಆಗ್ರಹಿಸುತ್ತದೆ .
ಪತ್ರಿಕಾ ಪ್ರಕಟಣೆ :
ಸಂತೋಷ ಶಿವಾಜಿ ಬಜರಂಗದಳ ಸಂಯೋಜಕರು ಸಾಗರ ತಾಲ್ಲೂಕು