ಮೈಸೂರು: ಸಿ.ಟಿ. ರವಿ ಡೊಂಗಿ ಹಿಂದುತ್ವವಾದಿ: ಎನ್ ಎಂ ನವೀನ್ ಕುಮಾರ್.
ಕಾಂಗ್ರೆಸ್ ನಾಯಕರ ತಪ್ಮ್ಪಗಳನ್ನೇ ಎತ್ತಿ ತೋರಿಸುವ ಬಿಜೆಪಿ ನಾಯಕ ಸಿ.ಟಿ. ರವಿ ಢೋಂಗಿ ಹಿಂದುತ್ವವಾದಿ. ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದು ಖಂಡನೀಯ ಎಂದು ಕಾಂಗ್ರೆಸ್ ಮುಖಂಡ ಎನ್ ಎಂ ನವೀನ್ ಕುಮಾರ್ ಹೇಳಿದರು. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸಿದ್ದ ರವಿ ಅವರು ಇಂದು ಮಾಡಿದ್ದಾದರೂ ಏನು? ದೇವರ ಬಗ್ಗೆ ಅಪಾರ ಭಕ್ತಿ, ಶ್ರದ್ಧೆ ಹೊಂದಿರುವ ಅವರು ಇದೀಗ ತಾವೇ ತಪ್ಪು ಮಾಡಿ ಸಮರ್ಥನೆ ಮಾಡಿ ಕೊಳ್ಳುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿದಂತೆ ಆಗಿದೆ ಎಂದು ಲೇವಡಿ ಮಾಡಿದರು. ವಿನಾಕಾರಣ ಕಾಂಗ್ರೆಸ್ ನಾಯ ಕರ ತಪ್ಪುಗಳನ್ನು ಎತ್ತಿ ತೋರಿಸುವ ಬಿಜೆಪಿ ಮುಖಂ ಡರು ರವಿಯವರು ಮಾಂಸ ತಿಂದು ದೇವಸ್ಥಾನಕ್ಕೆಹೋಗಿದ್ದನ್ನು ತಪ್ಪು ಎಂದು ಹೇಳುತ್ತಿಲ್ಲ ಎಂದು ಕುಟುಕಿದರು. ತಪ್ಪು ಮಾಡಿದ್ದರೂ ಸಹ ತಪ್ಪು ಮಾಡಿಲ್ಲ ಎಂದು ಹೇಳಿಕೆ ನೀಡುತ್ತಿರುವ ಸಿ.ಟಿ. ರವಿಯವರ ಭಂಡತನ ಎಲ್ಲರಿಗೂ ಅರ್ಥವಾಗುತ್ತದೆ. ಅದರಲ್ಲೂ ಬಿಜೆಪಿ ಯವರು ಬರೀ ಸುಳ್ಳು ಹೇಳುವವರು. ರವಿ ಅವರ ಹೇಳಿಕೆ ಆ ಪಕ್ಷದ ನಾಯಕರಿಗೆ ತಟ್ಟುತ್ತಿಲ್ಲ. ಒಡೆದಾಳುವ ಮತ್ತು ಹೊಡೆದಾಳುವ ಬ್ರಿಟಿಷ ನೀತಿ ಬಿಜೆಪಿಯದ್ದು’ ಎಂದು ಟೀಕಿಸಿದರು.